ಚಿತ್ರದುರ್ಗ: ಖಾಸಗಿ ಶಾಲೆಗಳನ್ನೂ ಮೀರಿಸುವಂತಿದೆ ಈ ಸರ್ಕಾರಿ ಶಾಲೆ..!

By Girish Goudar  |  First Published Dec 1, 2023, 9:43 PM IST

ಎಬಿವಿಪಿ ಕಾರ್ಯಕರ್ತರು ಹಾಗೂ ಈ ಶಾಲೆಯಲ್ಲಿ ಈ ಹಿಂದೆ ಓದಿದ ಚಿತ್ರದುರ್ಗ‌ ಹಾಗೂ ದಾವಣಗೆರೆಯ ಹಿರಿಯ ನಾಗರಿಕರು ಒಟ್ಟಾಗಿ ಈ ಶಾಲೆಯ ಗೋಡೆಗಳಿಗೆ ಬಣ್ಣವನ್ನು ಬಳಿಸಿದ್ದು, ಮಾಹಿತಿಯಾಧಾರಿತ ಚಿತ್ರಗಳು ವಿದ್ಯಾರ್ಥಿಗಳನ್ನು ಮನಸೂರೆಗೊಳಿಸಿವೆ. 


ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಡಿ.01):  ಓದುವ ವಿದ್ಯಾರ್ಥಿಗಳು ಶಾಲೆಯಿಂದ ಒಮ್ಮೆ‌ ಟಿಸಿ ತೆಗೆದುಕೊಂಡೋದ್ರೆ ಸಾಕು, ನಮಗೂ ಓದಿದ ಶಾಲೆಗೆ ಸಂಬಂಧವಿಲ್ಲದಂತೆ ಇರೋರೆ ಹೆಚ್ಚು. ಆದ್ರೆ ಇಲ್ಲೊಂದು ಸರ್ಕಾರಿ ಶಾಲೆಯ‌ ಹಳೆಯ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರ ಸೇವಾ ಕಾರ್ಯದಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಆಕರ್ಷಣೆಯಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ. ಈ ಕುರಿತು ವರದಿ ಇಲ್ಲಿದೆ. 

Tap to resize

Latest Videos

undefined

ನೋಡಿ ಹೀಗೆ ಕಲರ್ ಫುಲ್ ಆಗಿ ಕಂಗೊಳಿಸ್ತಿರೋ ಸರ್ಕಾರಿ ಶಾಲೆ. ಉತ್ಸಾಹದಿಂದ ಶಾಲೆಗೆ ಧಾವಿಸ್ತಿರೋ‌ ವಿದ್ಯಾರ್ಥಿಗಳು.ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಚಿತ್ರದುರ್ಗದ ಕವಾಡಿಗರಹಟ್ಟಿ ಬಡಾವಣೆಯ ಸರ್ಕಾರಿ ಶಾಲೆ. ಹೌದು, ಈ ಶಾಲೆಯ ಗೋಡೆಗಳು ಹಲವು‌ ವರ್ಷಗಳಿಂದ ‌ಸುಣ್ಣಬಣ್ಣವಿಲ್ಲದೇ ಅಳಿವಿನಂಚಿನಲ್ಲಿದ್ವು. ಸ್ವಚ್ಛತೆ ಕಾಣದೇ ಗೋಡೆಗಳ‌ಮೇಲೆ ಅವಾಚ್ಯ ಗೋಡೆಬರಹಗಳೇ ಎದ್ದು ಕಾಣ್ತಿದ್ದು, ಪ್ರಜ್ಞಾವಂತರನ್ನು ತಲೆ‌ತಗ್ಗಿಸುವಂತೆ ಆಗಿತ್ತು. ವಿದ್ಯಾರ್ಥಿಗಳು ಸಹ ಶಾಲೆಗೆ ಬರಲು ಹಿಂದೇಟು ಹಾಕ್ತಿದ್ರು. ಅದರಲ್ಲೂ ಕಲುಷಿತ ನೀರು ಸೇವನೆ‌ದುರಂತ‌ವಾದ ಬಳಿಕ‌ಈ ಶಾಲೆಗೆ ದಾಖಲಾತಿ ಸಂಖ್ಯೆ ಸಹ ವಿರಳವಾಗಿತ್ತು. ಆದರೆ ಎಬಿವಿಪಿ ಕಾರ್ಯಕರ್ತರು ಹಾಗೂ ಈ ಶಾಲೆಯಲ್ಲಿ ಈ ಹಿಂದೆ ಓದಿದ ಚಿತ್ರದುರ್ಗ‌ ಹಾಗೂ ದಾವಣಗೆರೆಯ ಹಿರಿಯ ನಾಗರಿಕರು ಒಟ್ಟಾಗಿ ಈ ಶಾಲೆಯ ಗೋಡೆಗಳಿಗೆ ಬಣ್ಣವನ್ನು ಬಳಿಸಿದ್ದು, ಮಾಹಿತಿಯಾಧಾರಿತ ಚಿತ್ರಗಳು ವಿದ್ಯಾರ್ಥಿಗಳನ್ನು  ಮನಸೂರೆಗೊಳಿಸಿವೆ. 

ಕೋಲಾರದಲ್ಲೊಂದು ಡೆಡ್ಲಿ ಶಾಲೆ: ಜೀವಭಯದಲ್ಲೇ ಮಕ್ಕಳಿಗೆ ಪಾಠ!

ಹೀಗಾಗಿ ಕಾನ್ವೆಂಟ್ ಗೆ ತೆರಳುವ ಮಕ್ಕಳನ್ನು ಕಂಡು ಅಸಮಧಾನಗೊಂಡಿದ್ದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ನಮ್ ಸರ್ಕಾರಿ ಶಾಲೆ, ಈಗ‌ ಕಾನ್ವೆಂಟ್ ಗಿಂತ ಸುಂಧರವಾಗಿದ್ದು, ನಾವು ಯಾವ್ದಕ್ಕು ಕಮ್ಮಿ ಇಲ್ಲವೆಂದು ಹೆಮ್ಮೆ ಪಡ್ತಿದ್ದಾರೆ ಕವಾಡಿಗರಹಟ್ಟಿ ವಿದ್ಯಾರ್ಥಿನಿ ಸಹನ

ಇ‌ನ್ನು ಎಬಿವಿಪಿ ಸಂಘಟನೆಯ ಕಲ್‌ ಮಂಚ್‌‌ ಯೋಜನೆಯಡಿ ರಾಜ್ಯಾಂದ್ಯಂತ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯ‌ನಡೆಸ್ತಿರುವ ಕಾರ್ಯಕರ್ತರು ಚಿತ್ರದುರ್ಗದ ಕಾವಾಡಿಗರಹಟ್ಟಿ ಶಾಲೆಗೆ ಹೊಸರೂಪ ನೀಡಿದ್ದಾರೆ. ಹೀಗಾಗಿ ಶಾಲೆಯ ಶಿಕ್ಷಕರು ಸಹ ಇವರ ಸೇವಾ ಕಾರ್ಯಕ್ಕೆ ಧನ್ಯವಾದ ಹೇಳಿದ್ದಾರೆ.

ಒಟ್ಟಾರೆ ಕಾವಡಿಗರಹಟ್ಟಿ ‌ಸರ್ಕಾರಿ ಶಾಲೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ‌. ಕಲರ್ ಫುಲ್‌ ಮಾಹಿತಿಯಾಧಾರಿತ ಚಿತ್ರಗಳಿಂದ ಆಕರ್ಷಿಸುತ್ತಿದೆ. ಹೀಗಾಗಿ ಕಾನ್ವೆಂಟ್ ಗೆ ತೆರಳುವ ವಿದ್ಯಾರ್ಥಿಗಳ ಕಣ್ಣು ಹುಬ್ಬೇರುವಂತಿದ್ದು, ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಬರುವಂತಾಗಿರೋದು ಪೋಷಕರಲ್ಲಿ‌ ಸಂತಸ ಮೂಡಿಸಿದೆ.

click me!