23ನೇ ಪ್ರಯತ್ನದಲ್ಲಿ ಎಂಎಸ್ಸಿ ಗಣಿತ ಪರೀಕ್ಷೆ ಪಾಸ್ ಮಾಡಿದ ಸೆಕ್ಯುರಿಟಿ ಗಾರ್ಡ್!

By Suvarna News  |  First Published Nov 30, 2023, 1:09 PM IST

ವಯಸ್ಸಾಯ್ತು ಎನ್ನುವ ಕಾರಣಕ್ಕೆ ನಿಮ್ಮ ಆಸೆಯನ್ನು ಬದಿಗೊತ್ತಬೇಡಿ. ಸತತ ಪ್ರಯತ್ನ ನಡೆಸಿದ್ರೆ ಯಾವ ವಯಸ್ಸಿನಲ್ಲಾದ್ರೂ ನೀವು ಸಾಧನೆ ಮಾಡ್ಬಹುದು. ಇದಕ್ಕೆ ಸೆಕ್ಯುರಿಟಿ ಗಾರ್ಡ್ ರಾಜ್ ಕರನ್ ಉತ್ತಮ ನಿದರ್ಶನ.  
 


ಸೋಲೆ ಗೆಲುವಿನ ಸೋಪಾನ ಎನ್ನುವ ಮಾತಿದೆ. ಒಮ್ಮೆ ಸೋತವರು ಹತಾಶೆಗೊಳ್ಳದೆ ಮತ್ತೆ ಮತ್ತೆ ಪ್ರಯತ್ನಿಸಿದ್ರೆ ಯಶಸ್ಸು ಸಿಕ್ಕೆ ಸಿಗುತ್ತದೆ. ನಮ್ಮ ವಯಸ್ಸು ಬರಿ ಲೆಕ್ಕಕ್ಕೆ ಮಾತ್ರ. ಸಾಧನೆಗೆ, ಓದಿಗೆ ಇದ್ಯಾವುದೂ ಅಡ್ಡಿಯಾಗುವುದಿಲ್ಲ. ಎಷ್ಟೇ ಬಾರಿ ಸೋತರೂ ಛಲ ಬಿಡದೆ ಪ್ರಯತ್ನಿಸಿದ್ರೆ ನಮ್ಮ ಗುರಿಯನ್ನು ನಾವು ಒಂದಲ್ಲ ಒಂದು ದಿನ ತಲುಪಬಹುದು. ಇದಕ್ಕೆ ನಮ್ಮಲ್ಲಿ ಸಾಕಷ್ಟು ಮಂದಿ ಉದಾಹರಣೆಯಾಗಿ ಸಿಗ್ತಾರೆ. ಮನೆ, ಕೆಲಸ, ಜವಾಬ್ದಾರಿಯಿಂದಾಗಿ ತಮ್ಮ ಆಸೆಯನ್ನು ಅರ್ಧಕ್ಕೆ ಬಿಟ್ಟ ಅದೆಷ್ಟೋ ಮಂದಿ ತಮ್ಮ ಜೀವನದ ಕೊನೆಯಲ್ಲಿ ಅದನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡ್ತಾರೆ. ಎಂಭತ್ತು, ತೊಂಭತ್ತನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ಪಾಸ್ ಆದ ಜನರು ನಮ್ಮಿದ್ದಾರೆ. ಈಗ ಸೆಕ್ಯುರಿಟಿ ಗಾರ್ಡ್ ಒಬ್ಬರು ಓದಿನ ವಿಷ್ಯದಲ್ಲಿ ಸುದ್ದಿಯಲ್ಲಿದ್ದಾರೆ. 

ಮಧ್ಯಪ್ರದೇಶ (Madhyapradesh) ದ ಜಬಲ್‌ಪುರದ ಭದ್ರತಾ ಸಿಬ್ಬಂದಿ ರಾಜ್‌ಕರನ್ ಬರುವಾ ಎಲ್ಲರಿಗೆ ಮಾದರಿಯಾಗಿದ್ದಾರೆ. ಗಣಿತ (Mathematics) ದಲ್ಲಿ ಎಂಎಸ್ಸಿ (MSc) ಮಾಡಬೇಕೆಂದು ದೃಢಸಂಕಲ್ಪ ಮಾಡಿದ್ದ ಅವರು 25 ವರ್ಷಗಳ ಕಾಲ ಪ್ರಯತ್ನಿಸುತ್ತಲೇ ಇದ್ದರು. 23ನೇ ಬಾರಿ ಗುರಿ ತಲುಪಿದ್ದಾರೆ. ರಾಜ್ ಕರನ್ ಕೊನೆಗೂ ಎಂಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 

Tap to resize

Latest Videos

undefined

ಏರ್ ಫೋರ್ಸ್ ಪೈಲಟ್ ಆಗಬೇಕೆಂದು ಬಯಸಿದ್ದ ಹುಡುಗಿ ಓದು ಬಿಟ್ಟು ಬಾಲಿವುಡ್‌ ಸೇರಿದ್ದು ಹೇಗೆ?

ರಾಜ್ ಕರನ್ ಗೆ ಮನೆ, ಸಂಸಾರ, ಉಳಿತಾಯ ಮತ್ತು ಖಾಯಂ ಉದ್ಯೋಗ ಯಾವುದೂ ಇಲ್ಲ. ಎಂಎಸ್ಸಿ ಗಣಿತ ಪದವಿ ಪಡೆಯುವ ಉತ್ಸಾಹ ಮಾತ್ರ ಅವರದ್ದಾಗಿತ್ತು. ಈಗ ಪರೀಕ್ಷೆ ಪಾಸ್ ಆಗಿರುವ ರಾಜ್ ಕರನ್, ನನ್ನ ಬಳಿ ಪದವಿ ಇದೆ ಎಂದು ಹೆಮ್ಮೆಯಿಂದ ಹೇಳ್ತಿದ್ದಾರೆ. ರಾಜ್ ಕರನ್, 1977 ರಲ್ಲಿ ಮೊದಲ ಬಾರಿ ಎಂಎಸಿ ಪರೀಕ್ಷೆಯನ್ನು ಬರೆದಿದ್ದರು. ಸದ್ಯ ರಾಜ್‌ಕರಣ್‌ಗೆ 56 ವರ್ಷ. ಅವರು ತಮ್ಮ ಅರ್ಧ ಜೀವನ ಕಳೆದ ಮೇಲೆ ಎಂಎಸ್ಸಿ ಗಣಿತ ಪದವಿ ಪಡೆದಿದ್ದಾರೆ.  56 ವರ್ಷ ವಯಸ್ಸಾದ್ರೂ ಪದವಿ ಪಡೆಯುವ ಕನಸು ಕರಗಿರಲಿಲ್ಲ. ಎರಡು ಪಾಳಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡ್ತಿದ್ದ ರಾಜ್ ಕರನ್, ತಮ್ಮ ಅಧ್ಯಯನದಲ್ಲಿ ಉತ್ಸಾಹ ಕಳೆದುಕೊಳ್ಳದೆ ಸತತ ಅಧ್ಯಯನ ಮಾಡ್ತಾ ಇದ್ದರು. 

ಬರಡು ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆದು ದಿನಕ್ಕೆ 30 ಸಾವಿರ ಗಳಿಸುತ್ತಿರೋ ಈಕೆಗೆ ಪ್ರಧಾನಿಯಿಂದಲೂ ಸಿಕ್ಕಿದೆ ಮೆಚ್ಚುಗೆ

ಎರಡು ವರ್ಷದ ಹಿಂದೇ ಪರೀಕ್ಷೆ ಪಾಸ್ ಆದ್ರೂ ಈ ಸುದ್ದಿ ಬಹಿರಂಗಪಡಿಸದ ರಾಜ್ ಕರನ್ : ರಾಜ್ ಕರನ್ 2021 ರಲ್ಲಿ ಎಂಎಸ್ಸಿ ಗಣಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದ್ರೆ ಅವರು ಈ ವಿಷ್ಯವನ್ನು ತಮ್ಮಲ್ಲೇ ಇಟ್ಟುಕೊಂಡಿದ್ದರು. ತಾವೊಬ್ಬರೇ ಖುಷಿಯನ್ನು ಸಂಭ್ರಮಿಸಿದ್ದರು. ಇದಕ್ಕೆ ಕಾರಣ ಅವರ ಮ್ಯಾನೇಜರ್. ರಾಜ್ ಕರನ್ ಕೆಲಸ ಮಾಡ್ತಿದ್ದ ಕಂಪನಿ ಮ್ಯಾನೇಜರ್, ರಾಜ್ ಕರನ್ ಅವರನ್ನು ಮಕ್ಕಳಿಗೆ ಉದಾಹರಣೆ ನೀಡಿ ಬುದ್ಧಿವಾದ ಹೇಳ್ತಿದ್ದರಂತೆ. ಇಷ್ಟು ವರ್ಷದ ಮೇಲೂ ಓದುತ್ತಿರುವ ರಾಜ್ ಕರನ್ ನೋಡಿ ಎನ್ನುತ್ತಿದ್ದರಂತೆ. ಅವರಿಗೆ ಮುಜುಗರ ಮಾಡಬಾರದು ಎನ್ನುವ ಕಾರಣಕ್ಕೆ ರಾಜ್ ಕರನ್ ಈ ವಿಷ್ಯವನ್ನು ಹೇಳಿರಲಿಲ್ಲವಂತೆ. ಈಗ ಕೆಲಸ ಬಿಟ್ಟಿದ್ದು, ಹೆಮ್ಮೆಯಿಂದ ಎಂಎಸ್ಸಿ ಪಾಸ್ ಆಗಿರೋದನ್ನು ಹೇಳ್ತಿದ್ದಾರೆ.

2015 ರಲ್ಲಿ ಟಿಐಒ (TOI) ವರದಿ ನನಗೆ ಸಾಕಷ್ಟು ಪ್ರೋತ್ಸಾಹ ನೀಡಿತು ಎನ್ನುತ್ತಾರೆ ರಾಜ್‌ಕರನ್. 18 ನೇ ಪ್ರಯತ್ನದಲ್ಲಿಯೂ ಅವರು ವಿಫಲರಾಗಿದ್ದರಂತೆ. ಆಗ ಅವರು ತುಂಬಾ ಖಿನ್ನತೆಗೆ ಒಳಗಾಗಿದ್ದರಂತೆ. ಆದರೆ ಟಿಐಒನಲ್ಲಿ ಸುದ್ದಿ ಪ್ರಕಟವಾದ ನಂತರ  ಜನರು ಅವರನ್ನು ವಿಭಿನ್ನವಾಗಿ ನೋಡಲಾರಂಭಿಸಿದರು. ಟಿವಿ ಚಾನೆಲ್‌ಗಳು ರಾಜ್ ಕರನ್ ಹುಡುಕಿಕೊಂಡು ಬಂದರು. ಇದು ಸ್ಫೂರ್ತಿ ನೀಡಿತ್ತು ಎನ್ನುತ್ತಾರೆ ರಾಜ್ ಕರನ್.  ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಅವರಿಗೆ ತಿಂಗಳಿಗೆ 5 ಸಾವಿರ ರೂಪಾಯಿ ಸಿಗ್ತಾಯಿತ್ತು. ಬಂಗಲೆಯಲ್ಲಿ ಕೆಲಸ ಮಾಡುತ್ತಿದ್ದ ಅವರು 1500ರೂಪಾಯಿ ಪಡೆಯುತ್ತಿದ್ದರು. ಆದ್ರೆ 25 ವರ್ಷಗಳಲ್ಲಿ   ಪರೀಕ್ಷೆಗಾಗಿ 2 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. 
 

click me!