Haveri: ಪ್ರೈವೇಟ್‌ ಸ್ಕೂಲ್‌ಗೆ ಸಡ್ಡು ಹೊಡೆಯುತ್ತೆ ಈ ಸರ್ಕಾರಿ ಶಾಲೆ..!

By Girish Goudar  |  First Published Apr 3, 2022, 3:31 PM IST


*  ಇತರ ಸ್ಕೂಲ್‌ಗಳಿಗೆ ಮಾದರಿಯಾದ ಸರ್ಕಾರಿ ಶಾಲೆ
*  ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೇರೂರು ಗ್ರಾಮದ ಸ್ಕೂಲ್‌
*  ಹಾವೇರಿ ಜಿಲ್ಲೆಯ ಹೆಮ್ಮೆಯ ಮಾದರಿ ಶಾಲೆಯನ್ನಾಗಿ ಮಾಡಿದ ಗ್ರಾಮಸ್ಥರು
 


ವರದಿ: ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ(ಏ.03):  ಖಾಸಗಿ ಶಾಲೆಗಳ(Private School) ದರ್ಬಾರ್ ನಡುಗೆ ಸರ್ಕಾರಿ ಶಾಲೆಗಳು ಮಂಕಾಗಿದೆ ಅನ್ನೋ ಚರ್ಚೆ ಆಗಾಗ ನಡಿತಾನೇ ಇರುತ್ತೆ. ಆ ಫೀಸು ಈ‌ ಫೀಸು ಅಂತ ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡೋ ಖಾಸಗಿ ಶಾಲೆಗಳ ನಡುವೆ ಇಲ್ಲೊಂದು ಸರ್ಕಾರಿ ಶಾಲೆ(Government School) ಮಾದರಿಯಾಗಿ ನಿಂತಿದೆ. ಹೌದು, ಸರ್ಕಾರಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಸ್ಥರು ಹಾಗೂ ಶಿಕ್ಷಕರು ತಮ್ಮೂರ ಶಾಲೆಯನ್ನು ಜ್ಞಾನ ದೇಗುಲವನ್ನಾಗಿ ಮಾಡಿದ್ದಾರೆ.

Tap to resize

Latest Videos

undefined

ಕಿಲ ಕಿಲ ನಗುತ್ತಾ, ಆನಂದ ಸಾಗರದಲ್ಲಿ  ಮಕ್ಕಳು ಹೇಗೆ ಪಾದರಸದಂತೆ ಓಡಾಡ್ತಿವೆ ನೋಡಿ. ಈ ದೃಷ್ಯ ನೋಡ್ತಿದ್ರೆ ನಿಮ್ಮೆಲ್ಲರ ಬಾಲ್ಯ ನೆನಪಿಗೆ ಬರುತ್ತರಬಹುದು. ನಮ್ ಸರ್ಕಾರಿ ಸ್ಕೂಲು, ಮೇಸ್ಟ್ರು, ಆಟ, ಪಾಠ ,ಆಹಾ ಆ ನೆನಪೇ ಚೆಂದ‌. ಆದರೆ ಇಂದು ಶಿಕ್ಷಣ ವ್ಯಾಪಾರವಾಗಿ ಹೋಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸೋದು ಅಂದರೆ ದೊಡ್ಡ ಪ್ರತಿಷ್ಠೆಯಾಗಿ ಹೋಗಿದೆ. ಮಕ್ಕಳ ಕೊರತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುವ ಸಂದರ್ಭದಲ್ಲಿಯೇ ಇಲ್ಲೊಂದು ಸರ್ಕಾರಿ ಶಾಲೆ ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ.ದೇವಸ್ಥಾನದ ದ್ವಾರಬಾಗಿಲಿನಂತೆ ಬೃಹದಾಕಾರವಾಗಿ ಸ್ವಾಗತ ಕೋರುತ್ತಿರುವ ಹೆಬ್ಬಾಗಿಲು.ಎಲ್ಲೆಂದರಲ್ಲಿ ಸ್ವಚತೆಯಿಂದ ಕಾಣುತ್ತಿರುವ ಸುಸಜ್ಜಿತ ಮೈದಾನ(Ground) ಹಾಗೂ ಕೊಠಡಿಗಳು. ಪಾಠ ಕೇಳಿ ಆಟದಲ್ಲಿ ತಲ್ಲಿನರಾಗಿರುವ ವಿದ್ಯಾರ್ಥಿಗಳು.ಹೌದು ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು, ಹಾವೇರಿ(Haveri) ಜಿಲ್ಲೆಯ ಹಾನಗಲ್(Hanagal) ತಾಲೂಕಿನ ಹೇರೂರು ಗ್ರಾಮದಲ್ಲಿ. ಈ ಗೀನ ಕಾಲದಲ್ಲಂತು ಶೋಕಿಗಾಗಿ, ವರ್ಚಸ್ಸಿಗಾಗಿ ಹಾಗೂ ತಮ್ಮ ಪ್ರತಿಷ್ಠೆಗಾಗಿ ಮಕ್ಕಳನ್ನು ಶಾಲೆಗೆ ಕಳಿಸೊದನ್ನ ನೋಡಿದ್ದೇವೆ. ಆದರೆ ಈ ಹೇರೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತ್ರ ಪ್ರತಿಭೆ ಇದ್ದರೆ ಸುಂದರವಾದ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತೆ.

ಪಠ್ಯಕ್ರಮದಲ್ಲಿ ಟಿಪ್ಪುವಿನ ವೈಭವೀಕರಣಕ್ಕೆ ಕೊಕ್...ಹೊಸ ಇತಿಹಾಸ ಸೇರ್ಪಡೆ

ಹೌದು ಹೀಗೆ ಸುಸಜ್ಜಿತ ಕಟ್ಟಡಗಳು, ಆವರಣದಲ್ಲಿ ನಿರ್ಮಿಸಲಾದ ಮೈದಾನ ಹಾಗೂ ಹಸಿರು ವನವನ್ನ ಸಿದ್ದಪಡಿಸಿದ್ದು ಈ ಊರಿನ ಜನರು. ಕಳೆದ ಒಂದು ವರ್ಷದಿಂದ ಹಗಲಿರುಳು ಕಷ್ಟಪಟ್ಟು ನರೇಗಾ(NERGA) ಯೋಜನೆಯಡಿಯಲ್ಲಿ ಸುಮಾರು 50 ಲಕ್ಷದ ಕೆಲಸಗಳನ್ನು ಮಾಡಿಸಿ. ಹೇರೂರು ಸರ್ಕಾರಿ ಸ್ಕೂಲ್‌ನ್ನು ಹಾವೇರಿ ಜಿಲ್ಲೆಯ ಹೆಮ್ಮೆಯ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

ಈ ಹಿಂದೆ ಇದೆ ಶಾಲೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣನವರ ಬೇಸರ ವ್ಯಕ್ತಪಡಿಸಿದ್ದರು. ಇಷ್ಟೊಂದು ದೊಡ್ಡ ಮೈದಾನ ಇದ್ದರೂ ಏನನ್ನೂ ಮಾಡಿಲ್ಲಾ ಎಂದು ಶಿಕ್ಷಕರಿಗೆ(Teacher) ಹಾಗೂ ಗ್ರಾಮಸ್ಥರ ಮುಂದೆ ಮಾತಾಡಿದ್ದರು.ಇದನ್ನೆ ಪ್ರತಿಷ್ಟೆಯಾಗಿ ತೆಗೆದುಕೊಂಡ ಊರಿನ ಜನರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು ನಿಂತರು.ಇದರ ಫಲವಾಗಿ ಶಾಲೆಯ ಮುಂದೆ ದ್ವಾರಬಾಗಿಲು, ಸರಸ್ವತಿ ಮೂರ್ತಿ, ನೀರಿನ ಸೌಲಭ್ಯ ಮಾಡಿದ್ದಾರೆ.ರಾಜ್ಯ ಮಟ್ಟದವರೆಗೂ ಆಟಗಳಲ್ಲಿ ಭಾಗವಹಿಸಲು ಪ್ರ್ಯಾಕ್ಟೀಸ್ ಮಾಡೋಕೆ ಅಂತಾ ಗ್ರೌಂಡ್ ಗಳನ್ನು ಸುಂದರವಾಗಿ ತಯಾರು ಮಾಡಿದ್ದಾರೆ.

ಶಾಲೆಯ ಸುತ್ತಮುತ್ತಲೂ ಹನಿ ನೀರಾವರಿ ಮೂಲಕ ಉದ್ಯಾನವನಕ್ಕೆ ನೀರು ಹಾಕಿ ಪರಿಸರ ಸುಂದರಗೊಳಿಸಿದ್ದಾರೆ. ಒಟ್ಟಿನಲ್ಲಿ ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲಾ ಎಂಬಂತೆ ಸರ್ಕಾರಿ ಶಾಲೆ ಮದುವಣಗಿತ್ತಿಯಂತೆ ಶೃಂಗಾರಗೊಂಡು ಇತರ ಸ್ಕೂಲಗಳಿಗೆ ಮಾದರಿಯಾಗಿದೆ.
 

click me!