ಈ ಯುನಿವರ್ಸಿಟಿಗಳಲ್ಲಿ ಓದಿದ್ರೆ ಯುಪಿಎಸ್‌ಸಿ ಎಕ್ಸಾಂ ಕ್ಲಿಯರ್‌ ಮಾಡೋದು ಸುಲಭ!

Published : Jan 04, 2024, 02:59 PM IST
ಈ ಯುನಿವರ್ಸಿಟಿಗಳಲ್ಲಿ ಓದಿದ್ರೆ ಯುಪಿಎಸ್‌ಸಿ ಎಕ್ಸಾಂ ಕ್ಲಿಯರ್‌ ಮಾಡೋದು ಸುಲಭ!

ಸಾರಾಂಶ

ಒಂದು ಅಂದಾಜಿನ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಇಂಜಿನಿಯರಿಂಗ್‌ ಮಾಡುವ ವಿದ್ಯಾರ್ಥಿಗಳಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಆಡಳಿತಾತ್ಮಕ ಸೇವೆಗೆ ಹೋಗುವ ಆಸೆ ಹೆಚ್ಚಾಗುತ್ತಿದೆ. ಇದರ ನಡುವೆ ದೇಶದ ಯಾವ ಯುನಿವರ್ಸಿಟಿಗಳಲ್ಲಿ ಓದಿದರೆ, ಎಕ್ಸ್‌ ಕ್ಲಿಯರ್‌ ಮಾಡೋದು ಸುಲಭ ಎನ್ನುವ ಮಾಹಿತಿ ಇಲ್ಲಿದೆ.  

ಬೆಂಗಳೂರು (ಜ.4): ಪ್ರತಿ ವರ್ಷ ಲಕ್ಷಾಂತರ ಮಂದಿ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ, ಅದರಲ್ಲಿ ಕೆಲವು ಸಾವಿರ ಮಂದಿ ಪ್ರಧಾನ ಪರೀಕ್ಷೆ ಬರೆಯಲು ಸಜ್ಜಾಗುತ್ತಾರೆ. ಕೊನೆಗೆ ಕೆಲವೇ ಕೆಲವು ಮಂದಿಗೆ ಮಾತ್ರವೇ ಆಡಳಿತಾತ್ಮಕ ಸೇವೆಗಳಲ್ಲಿ ಕೆಲಸ ಮಾಡಲು ಅರ್ಹರಾಗುತ್ತಾರೆ. ಇದರ ನಡುವೆ ದೇಶದ ಯಾವ ಯುನಿವರ್ಸಿಟಿಗಳಲ್ಲಿ ಓದಿದರೆ, ಯುಪಿಎಸ್‌ಸಿ ಪರೀಕ್ಷೆಯನ್ನು ಕ್ಲಿಯರ್‌ ಮಾಡುವ ಅವಕಾಶ ಹೆಚ್ಚು ಎನ್ನುವ ಚರ್ಚೆ ಆಗಿದೆ. ಸರ್ವೇಗಳ ಪ್ರಕಾರ ದೇಶದ ಅಗ್ರ ಯುನಿವರ್ಸಿಟಿಗಳ ಪೈಕಿ ದೆಹಲಿ ಯುನಿವರ್ಸಿಟಿಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆ ಕ್ಲಿಯರ್‌ ಮಾಡೋದು ಸುಲಭ ಎನ್ನಲಾಗಿದೆ. ಅದರೊಂದಿಗೆ ಜವಹರಲಾಲ್‌ ನೆಹರು ಯುನಿವರ್ಸಿಟಿ (ಜೆಎಎನ್‌ಯು), ದೇಶದ ಅಗ್ರ ಐಐಟಿಗಳಲ್ಲಿ ಓದಿದವರಿಗೆ ಯುಪಿಎಸ್‌ಸಿ ಕ್ಲಿಯರ್‌ ಮಾಡೋದು ಸುಲಭವಾಗುತ್ತಿದೆ. ಐಐಟಿಗಳ ಪೈಕಿ ದೆಹಲಿ, ಕಾನ್ಪುರ ಹಾಗೂ ರೂರ್ಖಿ ಐಐಟಿಯಲ್ಲಿ ಓದಿದವರಿಗೆ ಯುಪಿಎಸ್‌ಸಿ ಅವಕಾಶ ಹೆಚ್ಚು ಎನ್ನುವುದು ಇಲ್ಲಿಯವರೆಗಿನ ಮಾಹಿತಿ ಆಧರಿಸಿ ಹೇಳಬಹುದಾಗಿದೆ.

1975 ರಿಂದ 2014ರವರೆಗಿನ ಸಕ್ಸಸ್‌ ರೇಟ್‌ ಲೆಕ್ಕಾಚಾರ ಹಾಕುವುದಾದರೆ, ಐಐಟಿ ಕಾನ್ಪುರ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಬರುತ್ತದೆ. ಇಲ್ಲಿ ಓದಿದ ಶೇ. 20,8ರಷ್ಟು ವಿದ್ಯಾರ್ಥಿಗಳು ಯುಪಿಎಸ್‌ಸಿ ಕ್ಲಿಯರ್‌ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ಐಐಟಿ ದೆಹಲಿ (ಶೇ. 19.9), ಜೆಎನ್‌ಯು (ಶೇ. 16.9), ಐಐಟಿ ರೂರ್ಖಿ (ಶೇ. 15.2), ದೆಹಲಿ ವಿವಿ (ಶೇ. 12.3), ಪಂಜಾಬ್‌ ವಿವಿ (ಶೇ. 10.4), ರಾಜಸ್ಥಾನ ವಿವಿ (ಶೇ. 9.1), ಮದ್ರಾಸ್‌ ವಿವಿ (ಶೇ.8), ಪಾಟ್ನಾ ವಿವಿ (ಶೇ. 5.6) ಹಾಗೂ ಅಲಹಾಬಾದ್‌ ವಿವಿ (ಶೇ.4) ಈ ಪಟ್ಟಿಯಲ್ಲಿರುವ ಟಾಪ್‌ 10 ಯುನಿವರ್ಸಿಟಿಗಳಾಗಿವೆ. ಇನ್ನು ಕಳೆದ ಹತ್ತು ವರ್ಷಗಳಲ್ಲೂ ಇದೇ ವಿವಿಗಳು ಹಾಗೂ ಐಐಟಿಗಳ ನಡುವಿನ ಸ್ಥಾನಗಳಲ್ಲಿ ವ್ಯತ್ಯಾಸವಾಗಿದೆ. 2022ರ ಯುಪಿಎಸ್‌ಸಿ ಟಾಪರ್‌ ಇಶಿತಾ ಕಿಶೋರ್‌, 2021ರ ಯುಪಿಎಸ್‌ಟಿ ಟಾಪರ್‌ ಶೃತಿ ಶರ್ಮ ಕೂಡ ದೆಹಲಿ ವಿವಿಯ ವಿದ್ಯಾರ್ಥಿಗಳಾಗಿದ್ದಾರೆ.

2017-2021ರ ನಡುವಿನ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯ (ಯುಪಿಎಸ್‌ಸಿ ಸಿಎಸ್‌ಇ) ಮುಖ್ಯ ಅಭ್ಯರ್ಥಿಗಳಲ್ಲಿ ಶೇ.63 ಮಂದಿ ಇಂಜಿನಿಯರಿಂಗ್ ಪದವೀಧರರಾಗಿದ್ದರು ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿನೇಂದ್ರ ಸಿಂಗ್ ತಮ್ಮ ಡೇಟಾವನ್ನು ತಿಳಿಸಿದ್ದಾರೆ. ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಅವರ ಪ್ರಶ್ನೆಗೆ ಉತ್ತರವಾಗಿ, 2017-2021 ರ ನಡುವಿನ ಯುಪಿಎಸ್‌ಸಿ ಸಿಎಸ್‌ಇ ಮೇನ್ಸ್‌ನಲ್ಲಿ ಶಿಫಾರಸು ಮಾಡಲಾದ 4,371 ಅಭ್ಯರ್ಥಿಗಳಲ್ಲಿ 2,783 ಅಭ್ಯರ್ಥಿಗಳು ಎಂಜಿನಿಯರಿಂಗ್ ಸ್ಟ್ರೀಮ್‌ನಿಂದ ಬಂದವರು ಎಂದು ಕೇಂದ್ರ ಸಚಿವರು ರಾಜ್ಯಸಭೆಗೆ ತಿಳಿಸಿದ್ದರು.

ಯುಪಿಎಸ್‌ಸಿ ಪ್ರಧಾನ ಪರೀಕ್ಷೆಗೆ ಶಿಫಾರಸು ಮಾಡಿದ ಅಭ್ಯರ್ಥಿಗಳು ತಮ್ಮ ಪತ್ರಿಕೆಗಳನ್ನು ತಮ್ಮ ಆಯಾ ಭಾಷೆಗಳಾದ ಅಸ್ಸಾಮಿ, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ತಮಿಳು, ಸಂಸ್ಕೃತ, ಮೈಥಿಲಿ ಮುಂತಾದ ಭಾಷೆಗಳಲ್ಲಿ ಬರೆಯಲು ಆದ್ಯತೆ ನೀಡಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.

ಉಡುಪಿ: ಗೃಹಿಣಿ ಯುಪಿಎಸ್‌ಸಿ ತೇರ್ಗಡೆ, ಪುಟ್ಟ ಮಗುವಿನ ತಾಯಿಯ ದೊಡ್ಡ ಸಾಧನೆ..!

ಇಂಜಿನಿಯರ್‌ಗಳು ಈಗ ರಾಜಕೀಯ ವಿಜ್ಞಾನ, ಅಂತರಾಷ್ಟ್ರೀಯ ಸಂಬಂಧಗಳು ಮತ್ತು ಸಮಾಜಶಾಸ್ತ್ರದಂತಹ ವಿಷಯಗಳನ್ನು ಯುಪಿಎಸ್‌ಸಿ ಸಿಎಸ್‌ಇಗೆ ಭೌಗೋಳಿಕ ಮತ್ತು ಮಾನವಶಾಸ್ತ್ರದ ಜೊತೆಗೆ ಆರಿಸಿಕೊಳ್ಳುತ್ತಿದ್ದಾರೆ ಎಂದು ಡೇಟಾ ಬಹಿರಂಗಪಡಿಸಿದೆ. ಈ ಮಾನವಿಕ ವಿಷಯಗಳು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಹೆಚ್ಚು ಆಯ್ಕೆಯಾದ ಐಚ್ಛಿಕ ವಿಷಯಗಳಾಗಿ ಸ್ಥಾನ ಪಡೆದಿವೆ. ಹೆಚ್ಚು ಮುಂದುವರಿದ ಅಧ್ಯಯನವನ್ನು ಹೊಂದಿರುವ ಅಭ್ಯರ್ಥಿಗಳು ಹೆಚ್ಚಾಗಿ ಮಾನವಹಿನ್ನೆಲೆಯಿಂದ ಬಂದವರು. ಮಾನವಿಕ ವಿಷಯದಲ್ಲಿ 597 ಸ್ನಾತಕೋತ್ತರ ಪದವೀಧರರು ಮತ್ತು ಎಂಜಿನಿಯರಿಂಗ್‌ನಲ್ಲಿ 243 ಸ್ನಾತಕೋತ್ತರ ಪದವೀಧರರು ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ ಎಂದು ಅಂದಾಜುಗಳು ಸೂಚಿಸುತ್ತವೆ.

ಮಿಸ್ ಇಂಡಿಯಾ ಕನಸು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದ ಮಾಡೆಲ್

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ