ಬೆಳ್ತಂಗಡಿ: ಎಲ್ಲವೂ ಇರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳೇ ಇಲ್ಲ!

By Kannadaprabha News  |  First Published Jul 15, 2023, 7:57 AM IST

ಇಲ್ಲೊಂದು ಶಾಲೆಯಲ್ಲಿ ತರಗತಿಗಳಿಗೆ ಬೇಕಾದ ಕೋಣೆಗಳಿವೆ, ಪೀಠೋಪಕರಣಗಳಿವೆ. ಗ್ರಂಥಾಲಯವಿದೆ. ಬಿಸಿಯೂಟದ ವ್ಯವಸ್ಥೆಯೂ ಇದೆ. ಪ್ರತಿಭಾನ್ವಿತ ಶಿಕ್ಷಕಿಯರಿದ್ದಾರೆ. ಕಲಿಕಾ ಉಪಕರಣಗಳೂ ಇವೆ. ವಿಶಾಲವಾದ ಆಟದ ಮೈದಾನವಿದೆ. ಸುರಕ್ಷಿತವಾದ ಆವರಣ ಗೋಡೆ ಇದೆ. ಇಷ್ಟೆಲ್ಲಾ ಇದ್ದರೂ ಮಕ್ಕಳ ಗದ್ದಲ, ಗಲಾಟೆ, ಚಿಲಿಪಿಲಿ ಇಲ್ಲಿ ಕೇಳಿಸದು. ಯಾಕೆಂದರೆ ಇಲ್ಲಿ ಇರುವುದು ಕೇವಲ ಎಂಟೇ ಮಕ್ಕಳು!


ವಿಶೇಷ ವರದಿ

 ಬೆಳ್ತಂಗಡಿ (ಜು.15):  ಇಲ್ಲೊಂದು ಶಾಲೆಯಲ್ಲಿ ತರಗತಿಗಳಿಗೆ ಬೇಕಾದ ಕೋಣೆಗಳಿವೆ, ಪೀಠೋಪಕರಣಗಳಿವೆ. ಗ್ರಂಥಾಲಯವಿದೆ. ಬಿಸಿಯೂಟದ ವ್ಯವಸ್ಥೆಯೂ ಇದೆ. ಪ್ರತಿಭಾನ್ವಿತ ಶಿಕ್ಷಕಿಯರಿದ್ದಾರೆ. ಕಲಿಕಾ ಉಪಕರಣಗಳೂ ಇವೆ. ವಿಶಾಲವಾದ ಆಟದ ಮೈದಾನವಿದೆ. ಸುರಕ್ಷಿತವಾದ ಆವರಣ ಗೋಡೆ ಇದೆ. ಇಷ್ಟೆಲ್ಲಾ ಇದ್ದರೂ ಮಕ್ಕಳ ಗದ್ದಲ, ಗಲಾಟೆ, ಚಿಲಿಪಿಲಿ ಇಲ್ಲಿ ಕೇಳಿಸದು. ಯಾಕೆಂದರೆ ಇಲ್ಲಿ ಇರುವುದು ಕೇವಲ ಎಂಟೇ ಮಕ್ಕಳು!

Tap to resize

Latest Videos

undefined

1960ರ ಜೂ.5ರಂದು ಪ್ರಾರಂಭವಾದ ತಾಲೂಕಿನ ವೇಣೂರು ಹೋಬಳಿಯ ನಿಟ್ಟಡೆ ಗ್ರಾಮದ ಫಂಡಿಜೆಯಲ್ಲಿನ ಒಂದರಿಂದ ಏಳನೇ ತರಗತಿಯವರೆಗಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಒಂದಾನೊಂದು ಕಾಲದಲ್ಲಿ ಅತ್ಯುತ್ತಮ ಶಾಲೆ ಎಂಬ ಹೆಸರಿತ್ತು. 200ಕ್ಕೂ ಹೆಚ್ಚು ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಶಾಲೆಯಲ್ಲಿ ಕಳೆದ ಐದು ವರ್ಷಗಳ ಹಿಂದೆ ದಿಢೀರನೆ ಮಕ್ಕಳ ಸಂಖ್ಯೆ 29ಕ್ಕೆ ಇಳಿಯಿತು.

ಬರಬರುತ್ತಾ ಅದು 25, 18, 14, 10 ಕ್ಕೆ ಬಂದು ಇದೀಗ 8ಕ್ಕೆ ಬಂದು ನಿಂತಿದೆ. ಆಂಗ್ಲ ಮಾಧ್ಯಮದ ಪ್ರಭಾವವೋ, ಸನಿಹದಲ್ಲೇ ಇರುವ ಇನ್ನೊಂದು ಶಾಲೆಯೋ ಏನೋ ಮಕ್ಕಳ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.

 

ಫಲಿತಾಂಶ ಬಂದು 3 ತಿಂಗಳಾದ್ರೂ ಪಿಯು ಶಿಕ್ಷಕರಿಗೆ ಇನ್ನೂ ಮೌಲ್ಯಮಾಪನ ಭತ್ಯೆ ಇಲ್ಲ!

ಶಾಲೆಯ ಒಂದನೇ ಮತ್ತು ಮೂರನೇ ತರಗತಿ ಖಾಲಿಯಿದೆ. ಎರಡನೇ ತರಗತಿಯಲ್ಲಿ ಒಂದು, ನಾಲ್ಕನೆಯ ತರಗತಿಯಲ್ಲಿ ಎರಡು, ಐದನೇ ತರಗತಿಯಲ್ಲಿ ಎರಡು, ಆರನೇ ತರಗತಿಯಲ್ಲಿ ಒಂದು ಮತ್ತು ಏಳನೇ ತರಗತಿಯಲ್ಲಿ ಇಬ್ಬರು ( ಹುಡುಗರು 5 , ಹುಡುಗಿಯರು 3) ಮಕ್ಕಳಿದ್ದಾರೆ. ಮುಖ್ಯ ಶಿಕ್ಷಕಿ ಫ್ಲೇವಿಯಾ ಡಿ ಸೋಜ ಎಂಬವರು ಅತ್ಯಂತ ಪ್ರತಿಭಾನ್ವಿರಾಗಿದ್ದು ಇಲ್ಲಿನ ಮುಖ್ಯ ಶಿಕ್ಷಕಿಯಾಗಿದ್ದಾರೆ. ಸ್ಥಳೀಯರಾದ ಪೂರ್ಣಿಮಾ ಹೆಬ್ಬಾರ ಅವರು ಕಳೆದ ಮೂರು ವರ್ಷಗಳಿಂದ ಅತಿಥಿ ಶಿಕ್ಷಕಿಯಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫ್ಲೇವಿಯಾ ಅವರು ಆಂಗ್ಲ ಭಾಷೆಯಲ್ಲಿ ಅತ್ಯುತ್ತಮ ಹಿಡಿತವುಳ್ಳವರು. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ, ಅಭಿನಯಕಲೆಯಲ್ಲಿ ಎತ್ತಿದ ಕೈ. ಆದರೇನೂ ಮಾಡುವುದು ಇಲ್ಲಿ ಮಕ್ಕಳ ಸಂಖ್ಯೆ ವಿರಳವಾಗಿದೆ. ಮಕ್ಕಳ ಕೊರತೆಯಿಂದಾಗಿ ಇಲ್ಲಿ ವಾರ್ಷಿಕೋತ್ಸವ, ಕ್ರೀಡಾಕೂಟ ಮಾಡುವ ಹಾಗಿಲ್ಲ. ಪ್ರವಾಸಕ್ಕೆ ಆರ್ಥಿಕ ಅಡಚಣೆ ಎಂದು ಫ್ಲೇವಿಯಾ ಬೇಸರಿಸುತ್ತಾರೆ. ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ಎಲ್ಲಾ ಪಾಠಗಳನ್ನು ಕ್ರಮವತ್ತಾಗಿ ಮಾಡುವ ಅನಿವಾರ್ಯತೆ ಇಲ್ಲಿದೆ.

ಇರುವ ಮಕ್ಕಳಿಗೆ ನಿರ್ವಂಚನೆಯಿಂದ ಪಾಠ ಮಾಡುತ್ತಾರೆ ಇಲ್ಲಿನ ಶಿಕ್ಷಕಿಯರು. ಗ್ರಂಥಾಲಯದ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿದ್ದಾರೆ. ಕಡಿಮೆ ಸಂಖ್ಯೆ ಇರುವ ಕಾರಣ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಗಮನಿಸಲು ಅವಕಾಶವಿರುವುದರಿಂದ ಎಲ್ಲಾ ಮಕ್ಕಳು ಉತ್ತಮ ವಿದ್ಯಾರ್ಥಿಗಳಾಗಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ಇವರು ತರುವ ಬಹುಮಾನಗಳೇ ಇದಕ್ಕೆ ಸಾಕ್ಷಿ. ಈ ಬಹುಮಾನಗಳು ಅಕ್ಕಪಕ್ಕದ ಶಾಲೆಯ ನಿದ್ದೆಗೆಡಿಸಿದ್ದೂ ಉಂಟು.

ಕಲಬುರಗಿ: ಬಾಡಿಗೆ ಶಿಕ್ಷಕಿ ನೇಮಕ, ಶಿಕ್ಷಕ ಅಮಾನತು

ಮಕ್ಕಳು ಕಡಿಮೆ ಎಂಬ ಅಂಶವನ್ನು ಬಿಟ್ಟರೆ ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಅಸೌಕರ್ಯ ಇಲ್ಲ. ಇಂತಿಪ್ಪ ಶಾಲೆಯ ಭವಿಷ್ಯ ಏನು ಎಂಬುದು ಕಾಲವೇ ನಿರ್ಧರಿಸಬೇಕಷ್ಟೆ.

ಶಾಲೆಯಲ್ಲಿ ಪ್ರತಿಭಾನ್ವಿತ ಟೀಚರ್‌ ಇದ್ದಾರೆ. ಆದರೆ ಮಕ್ಕಳು ಇಲ್ಲದೇ ಇರುವುದು ದುಃಖದ ಸಂಗತಿ. ಫ್ಲೇವಿಯಾ ಅವರ ಕರ್ತವ್ಯ ನಿಷ್ಠೆಯನ್ನು ಗಮನಿಸಿ ಸನಿಹದ ಗ್ರಾಮಸ್ಥರು ಮುಂದಿನ ವರ್ಷವಾದರೂ ತಮ್ಮ ಮಕ್ಕಳನ್ನು ಫಂಡಿಜೆ ಶಾಲೆಗೆ ಸೇರಿಸಿದರೆ ಯೋಗ್ಯ ಶಿಕ್ಷಣವನ್ನು ಪಡೆಯಬಹುದು. ಸರ್ಕಾರಿ ಶಾಲೆಯನ್ನು ಉಳಿಸಬಹುದು.

-ಸ್ವಾತಿ, ಎಸ್‌ಡಿಎಂಸಿ ಅಧ್ಯಕ್ಷೆ

click me!