ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ!

By Kannadaprabha NewsFirst Published Sep 24, 2022, 12:18 PM IST
Highlights

ನಗರದ ಖಾಸಗಿ ಕಾಲೇಜೊಂದರ ಹಾಸ್ಟೆಲ್‌ನಿಂದ ರಾತ್ರೋರಾತ್ರಿ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಕೊನೆಗೂ ಚೆನ್ನೈನಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ. ಅವರನ್ನು ಪೊಲೀಸರು ಮಂಗಳೂರಿಗೆ ಕರೆ ತರುತ್ತಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಬೆಳಗಿನ ಜಾವ ಸುಮಾರು 3.30 ಕ್ಕೆ ಹಾಸ್ಟೆಲ್ ಕಿಟಕಿ ಮುರಿದು ಪರಾರಿಯಾಗಿದ್ದರು

ಮಂಗಳೂರು (ಸೆ.24): ನಗರದ ಖಾಸಗಿ ಕಾಲೇಜೊಂದರ ಹಾಸ್ಟೆಲ್‌ನಿಂದ ರಾತ್ರೋರಾತ್ರಿ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಕೊನೆಗೂ ಚೆನ್ನೈನಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ. ಅವರನ್ನು ಪೊಲೀಸರು ಮಂಗಳೂರಿಗೆ ಕರೆ ತರುತ್ತಿದ್ದಾರೆ. ಪರಾರಿಯಾದ ವಿದ್ಯಾರ್ಥಿನಿಯರಲ್ಲಿ ಇಬ್ಬರು ಬೆಂಗಳೂರು ಮತ್ತು ಒಬ್ಬಳು ಚಿಕ್ಕಮಗಳೂರಿನವಳು ಎಂದು ತಿಳಿದು ಬಂದಿದೆ. ಬುಧವಾರ ಮುಂಜಾನೆ 3.30ರ ವೇಳೆಗೆ ವಿದ್ಯಾರ್ಥಿಗಳು ಹಾಸ್ಟೆಲ್‌ನ ಕಿಟಕಿ ಮುರಿದು ಪರಾರಿಯಾಗಿದ್ದರು. ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ!

ವಿದ್ಯಾರ್ಥಿನಿಯರು ಮಂಗಳೂರು ರೈಲು ನಿಲ್ದಾಣ ಮೂಲಕ ಕೊಯಮತ್ತೂರಿಗೆ ಪ್ರಯಾಣಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪೋಷಕರು ಅಲ್ಲಿಗೆ ತೆರಳಿದ್ದರು. ಆದರೆ ಅಲ್ಲಿಂದ ಚೆನ್ನೈಗೆ ತೆರಳಿರುವ ಮಾಹಿತಿ ಸಿಗುತ್ತಿದ್ದಂತೆ ಚೆನ್ನೈ ಪೊಲೀಸರಿಗೂ ಮಾಹಿತಿ ರವಾನಿಸಿದ್ದರು. ಈ ಮಧ್ಯೆ, ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ತಡೆದು ಅಲ್ಲಿನ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ. ಬಳಿಕ ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದು ಸ್ವೀಕಾರ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.

ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಬೆಳಗಿನ ಜಾವ ಸುಮಾರು 3.30 ಕ್ಕೆ ಹಾಸ್ಟೆಲ್ ಕಿಟಕಿ ಮುರಿದು ಪರಾರಿಯಾಗಿದ್ದರು. ಪರಾರಿಯಾಗಿದ್ದ ವಿದ್ಯಾರ್ಥಿನಿಯರಲ್ಲಿ ಬೆಂಗಳೂರಿನ ಇಬ್ಬರು ಚಿಕ್ಕಮಗಳೂರಿನ ಓರ್ವ ವಿದ್ಯಾರ್ಥಿನಿ ಇದ್ದರು. ನಾಪತ್ತೆದ ಬಳಿಕ ಎಲ್ಲಿಗೆ ಹೋದರು, ಏಕೆ ಹೋದರು ಎಂಬ ಬಗ್ಗೆ ಕಾಲೇಜು, ಹಾಸ್ಟೆಲ್‌ ಸಿಬ್ಬಂದಿ ಆತಂಕದಲ್ಲಿದ್ದರು. ನಾಪತ್ತೆಯಾದ ಬಳಿಕ ಯಾವ ಸುಳಿವು ಸಿಗದೆ ನಿಗೂಢವಾಗಿ ಕಾಣೆಯಾಗಿದ್ದರು. ಘಟನೆ ಸಂಬಂಧ ಕಂಕನಾಡಿಯ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಕಾಲೇಜಿಗೆ ಹೋದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ!

ಪ್ರಕರಣ ತನಿಖೆ ಆರಂಭಿಸಿದ್ದ ಪೊಲೀಸರಿಗೆ, ವಿದ್ಯಾರ್ಥಿನಿಯರು ಮಂಗಳೂರು ರೈಲ್ವೆ ನಿಲ್ದಾಣದಿಂದ ಕೊಯಮತ್ತೂರುಗೆ ಪ್ರಯಾಣ ಬೆಳೆಸಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆ ಪೊಲೀಸರೊಂದಿಗೆ ಪೋಷಕರು ಸಹ ಕೊಯಮತ್ತೂರಿಗೆ ಪ್ರಯಾಣ ಬೆಳೆಸಿದ್ದರು. ಅದಕ್ಕೂ ಮೊದಲು ಕಾಣೆಯಾದ ವಿದ್ಯಾರ್ಥಿನಿಯರ ಪತ್ತೆಗೆ ಮಂಗಳೂರು ಪೊಲೀಸರು ಕೊಯಮತ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ತಡೆದು ಅಲ್ಲಿನ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ.

click me!