ರಾಜ್ಯದಲ್ಲಿ ಪುಸ್ತಕ ಪೂರೈಕೆ ವಿಚಾರದಲ್ಲಿ ಯಾವುದೇ ಕೊರತೆ ಇಲ್ಲ, ಈಗಾಗಲೇ ಶೇ.92 ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಪೆಪರ್ ಪೂರೈಕೆಯಲ್ಲಿ ವ್ಯತ್ಯಯವಿರುವುದರಿಂದ ಪುಸ್ತಕ ವಿತರಣೆಯಲ್ಲಿ ವಿಳಂಬವಾಗಿತ್ತು.
ದೇವದುರ್ಗ(ಜು.6): ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕ ಬಗ್ಗೆ ವಿಶೇಷ ಕಾಳಜಿ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ ತಿಳಿಸಿದರು.
ತಾಲೂಕಿನ ಅರಕೇರಾದಲ್ಲಿ ಮಂಗಳವಾರ ಮಾತನಾಡಿ, ರಾಜ್ಯದಲ್ಲಿ ಪುಸ್ತಕ ಪೂರೈಕೆ ವಿಚಾರದಲ್ಲಿ ಯಾವುದೇ ಕೊರತೆ ಇಲ್ಲ, ಈಗಾಗಲೇ ಶೇ.92 ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಪೆಪರ್ ಪೂರೈಕೆಯಲ್ಲಿ ವ್ಯತ್ಯಯವಿರುವುದರಿಂದ ಪುಸ್ತಕ ವಿತರಣೆಯಲ್ಲಿ ವಿಳಂಬವಾಗಿತ್ತು. ಇದೀಗ ಎಲ್ಲವೂ ಸರಿಯಾಗಿದೆ ಎಂದು ಹೇಳಿದರು.
ಶಿಕ್ಷಕರ ವೇತನ ಹೆಚ್ಚಳದ ಬಗ್ಗೆ ಸರ್ಕಾರದ ಗಮನದಲ್ಲಿದೆ. ಮಕ್ಕಳಿಗೆ ಶೂ ನೀಡುವ ಬಗ್ಗೆ ಇನ್ನೂ ಸರ್ಕಾರ ನಿರ್ಣಯ ಮಾಡಿಲ್ಲ. ಶಿಕ್ಷಕರ ನೇಮಕಾತಿ ನಮ್ಮ ಸರ್ಕಾರದ ಮೊದಲ ಆದ್ಯತೆ ನೀಡಲಾಗುತ್ತಿದೆ. ಶಾಲಾ ಕೋಠಡಿಗಳ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ 7 ಸಾವಿರ ಕೋಠಡಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುವುದು. ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೇ ನಡೆಸುವ ಆಲೋಚನೆಯಿದ್ದು, ಇದರಲ್ಲಿ 5 ಸಾವಿರ ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೇಮಕ ಮಾಡಲಾಗುತ್ತಿದೆ ಇದರ ಜೊತೆಗೆ 32 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು.
ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ, ವೇತನ ಹೆಚ್ಚಳದ ಜೊತೆಗೆ ಇನ್ನಷ್ಟು ಹುದ್ದೆ ಭರ್ತಿಗೆ ಸರ್ಕಾರ ಆದೇಶ
ಪಠ್ಯಕ್ರಮ ಪರಿಷ್ಕರಣೆ ಕೈ ಬಿಡದಿದ್ದರೇ ಉಗ್ರ ಹೋರಾಟ: ರೋಹಿತ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿದ ಪಠ್ಯಪುಸ್ತಕಗಳನ್ನು ರದ್ದುಪಡಿಸಬೇಕು. ಡಾ.ಬರಗೂರ ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯ ಪುಸ್ತಕಗಳನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿ ಸಾಗರ ಬಣ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಮೆರವಣಿಗೆಯಲ್ಲಿ ಹೊರಟು ಗಾಂಧಿ ವೃತ್ತದ ಮಾಗÜರ್‍ವಾಗಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಕಾರರು ರೋಹಿತ ಚಕ್ರತೀರ್ಥ ಪರಿಷ್ಕರಣೆ ಪಠ್ಯಕ್ರಮ ರದ್ದುಪಡಿಸಬೇಕು. ಡಾ.ಬರಗೂರ ರಾಮಚಂದ್ರಪ್ಪ ನೇತೃತ್ವದ ಸಮಿತಿ ಪಠ್ಯಕ್ರಮಗಳನ್ನು ಮುಂಮದುವರೆಸಬೇಕು. ಬಿ.ಸಿ.ನಾಗೇಶ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿ ಪ್ರತಿಭಟನೆಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನಂತರ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ ಮಾತನಾಡಿ, ಕರ್ನಾಟಕದ ಶಾಂತಿಪ್ರಿಯರನ್ನು ಮುಳ್ಳಿನ ಮೇಲೆ ನಿಲ್ಲಿಸಿದೆ. ಈ ಎಲ್ಲದರ ನಡುವೆ ಕರ್ನಾಟಕ ಬಿಜೆಪಿ ಸರ್ಕಾರವು ಬಿಜೆಪಿ ಪಕ್ಷದ ಅಜೆಂಡವಾದ ಸನಾತನೀಕರಣ ಭಾಗವಾಗಿ ಮಕ್ಕಳು ಓದುವಾಗ ಇಡೀ ಪಠ್ಯವನ್ನೇ ವಿಷಮಗೊಳಿಸುತ್ತಿದೆ. ನಾಡಿನ ಖ್ಯಾತ ಬರಹಗಾರರು ಬರೆದಂತಹ ಅತ್ಯುತ್ತಮವಾದ ಬರಹಗಳನ್ನು ಮಹಾನ್ ಸಮಾಜ ಸುಧಾರಕರು ಮತ್ತು ಹೋರಾಟಗಾರರ ಜೀವನ ಕಥೆಗಳನ್ನು ಪಠ್ಯದಿಂದ ಕೈಬಿಟ್ಟು ಅದಲು ಬದಲು ಮಾಡಿದೆ.
Raichur: ಸಿಂಗಾಪುರ ಕಾಮುಕ ಶಿಕ್ಷಕನ ಬಗ್ಗೆ ಸಚಿವ ನಾಗೇಶ್ ಗರಂ!
ಡಾ.ಬಿ.ಆರ್.ಅಂಬೇಡ್ಕರ್ ಅಣ್ಣ ಬಸವಣ್ಣ ರಾಷ್ಟ್ರಕವಿ ಕುವೆಂಪು ಮಹಾತ್ಮ ಗೌತಮಬುದ್ದ ಮತ್ತು ಹಿರಿಯರು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ನಾರಾಯಣ ಗುರು ಸುರಪುರದ ರಾಜವೆಂಕಟಪ್ಪ ನಾಯಕರನ್ನು ಒಳಗೊಂಡು ಎಲ್ಲರನ್ನು ಅವಮಾನ ಮಾಡಲಾಗಿದೆ. ಪಠ್ಯ ಪರಿಶೀಲನೆ ಸಮಿತಿಯು ಮಕ್ಕಳಿಗೆ ವೈಜ್ಞಾನಿಕ ಮನೋಭಾವದ ಪಾಠಗಳನ್ನು ಅಳವಡಿಸಬೇಕು. ಆದರೆ, ರೋಹಿತ ಚಕ್ರತೀರ್ಥ ಅವರು ಮನುವಾದಿಗಳಿಗೆ ಬೇಕಾದ ಹಾಗೆ ತಿದ್ದುಪಡಿ ಮಾಡಿ ಅನಗತ್ಯ ಗೊಂದಲ ಸೃಷ್ಟಿಮಾಡಿದ್ದಾರೆ. ಇದು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಪಠ್ಯದಲ್ಲಿ ಆಗಿರುವ ಲೋಪವನ್ನು ಸರಿಪಡಿಸಬೇಕು. ರೋಹಿತ ಚಕ್ರತೀರ್ಥ ವಿರುದ್ಧ ಕಠಿಣಕ್ರಮಕೈಕೊಳ್ಳಬೇಕು. ಸರ್ಕಾರ ಕ್ರಮಕೈಕೊಳ್ಳದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೆ ಇರುತ್ತದೆ. ಪೂರ್ವ ಗ್ರಹಪೀಡಿತರಾಗಿ ಪಠ್ಯಪರಿಶೀಲನೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಿದೆ ಎಂದು ದೂರಿದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, ಸರ್ಕಾರ ಕೂಡಲೇ ಎಚ್ಚತ್ತುಕೊಂಡು ಈ ಹಿಂದಿನ ಬರಗೂರ ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯಪುಸ್ತಕಗಳನ್ನೇ ಮುಂದುವರೆಸಬೇಕು. ರೋಹಿತ ಚಕ್ರತೀರ್ಥ ನೇತೃತ್ವದ ಸಮಿತಿ ಪಠ್ಯಪರಿಷ್ಕರಿಸಿದ ಈ ಪಠ್ಯಪುಸ್ತಕವು ಡಾ.ಬಿ.ಆರ್.ಅಂಬೇಡ್ಕರರಿಗೆ ಅವಮಾನ ಮಾಡಲಾಗಿದೆ. 6ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ಡಾ.ಚೆನ್ನಣ್ಣ ವಾಲಿಕಾರ ಬರೆದಿದ್ದ ನೀ ಹೋದ ಮರುದಿನ ಎಂಬ ಡಾ.ಅಂಬೇಡ್ಕರರ ಬಗೆಗಿನ ಕವಿತೆಯೊಂದು ತೆಗೆದುಹಾಕಲಾಗಿದೆ.
7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸಮಾಜ ಸುಧಾರಕರ ಬಗ್ಗೆ ಹೇಳಿದೆ. ಡಾ. ಅಂಬೇಡ್ಕರ್ ಅವರ ಬಗ್ಗೆಯು ಮಾಹಿತಿ ಇದೆ. ಈ ಹಿಂದಿನ ಪಠ್ಯಪುಸ್ತಕದಲ್ಲಿ ಡಾ.ಅಂಬೇಡ್ಕರ್ ಅವರ ತಂದೆ-ತಾಯಿಯರ ಹೆಸರುಗಳಿದ್ದವು. ಡಾ.ಅಂಬೇಡ್ಕರ್ ಹುಟ್ಟಿದ ಸ್ಥಳ ಹಾಗೂ ದಿನಾಂಕ ಇತ್ತು. ಅದನ್ನು ಸಹ ತೆಗೆದುಹಾಕಿದೆ. ಡಾ.ಅಂಬೇಡ್ಕರ್ ಬೃಹತ್ ಹೋರಾಟಗಳಾಗಿದ್ದ ಮಟಾಶ ಸತ್ಯಾಗ್ರಹ ಹಾಗೂ ನಾಸಿಕದ ಕಾಳರಾಮ ದೇಗುಲ ಪ್ರವೇಶ ಹೋರಾಟಗಳನ್ನು ಪ್ರಸ್ತಾಪಿಸಲಾಗಿತ್ತು. ಅದನ್ನು ತೆಗೆದು ಹಾಕಲಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನದ ಮತ್ತು ಸಂವಿಧಾನ ಪಾಠದಲ್ಲಿ ಅವರು ಡಾ.ಅಂಬೇಡ್ಕರ್‌ರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಟಿ.ಟಿ.ಕೃಷ್ಣಾಚಾರಿ ಅವರಿಂದ ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ ಎಂದಿತ್ತು.
ಈ ವಾಕ್ಯವನ್ನು ತೆಗೆದುಹಾಕಲಾಗಿದೆ. ಅಷ್ಟೆಅಲ್ಲದೆ ಹೊಸದಾಗಿ ಬಿ.ಎನ್.ರಾವ ಸಂವಿಧಾನ ಕರಡು ಪ್ರತಿಯ ಚೌಕಟ್ಟು ಹಾಗೂ ರಚನೆಯಲ್ಲಿ ಮುಖ್ಯಪಾತ್ರವಹಿಸಿದರೆಂದು ಸೇರಿಸಲಾಗಿದೆ. 10ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಗಾಂಧಿಯುಗ ಮತ್ತು ರಾಷ್ಟಿ್ರಯ ಚಳುವಳಿ ಪಾಠದಲ್ಲಿ ಈ ಹಿಂದೆ ಡಾ.ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯಿಂದ ಬೇಸತಿದ್ದ ಜಾತಿ ಮತ್ತು ಸಾಮಾಜಿಕ ಶ್ರೇಣಿಕರಣವನ್ನು ವಿರೋಧಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದು ವಾಕ್ಯವಿತ್ತು ಅದನ್ನು ತೆಗೆಯಲಾಗಿ ಎಂದು ವಿವರಿಸಿದರು.