ಸಿಂಗಾಪುರ ಕಾಮುಕ ಶಿಕ್ಷಕನ ಪ್ರಕರಣವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಂದು ರಾಯಚೂರು ಜಿಲ್ಲೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭೇಟಿ ನೀಡಿದರು.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಜು.05): ಸಿಂಗಾಪುರ ಕಾಮುಕ ಶಿಕ್ಷಕನ ಪ್ರಕರಣವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಂದು ರಾಯಚೂರು ಜಿಲ್ಲೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭೇಟಿ ನೀಡಿದರು. ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಕಾಮುಕ ಶಿಕ್ಷಕ ಅಜರುದ್ಧೀನ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಅಜರುದ್ಧೀನ್ ನ ಕೃತ್ಯ ಯಾರಿಗೂ ಶೋಭೆ ತರುವ ಘಟನೆಯಲ್ಲ. ಘಟನೆ ತಿಳಿದ ದಿನೇ ಶಿಕ್ಷಕ ಅಜರುದ್ಧೀನ್‌ನ ಅಮಾನತು ಮಾಡಲು ಡಿಡಿಪಿಐಗೆ ಸೂಚನೆ ನೀಡಿದ್ದೇನೆ. ಅಷ್ಟೇ ಅಲ್ಲದೆ ಶಿಕ್ಷಕ ಅಜರುದ್ಧೀನ್ ಬಗ್ಗೆ ತನಿಖೆ ನಡೆಸಲು ಕೊಪ್ಪಳ ಮತ್ತು ರಾಯಚೂರು ಎಸ್ ಪಿಗಳ ಜೊತೆಗೂ ಮಾತನಾಡಿದ್ದೇನೆ. ಆ ಬಳಿಕ ಆರೋಪಿ ಶಿಕ್ಷಕ ಅಜರುದ್ಧೀನ್ ನನ್ನ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ. ಬಂಧಿತ ಶಿಕ್ಷಕ ಅಜರುದ್ಧೀನ್ ವಿರುದ್ಧ 1to4 ತನಿಖೆ ಮಾಡಲು ಬಿಇಒ ಮತ್ತು ಡಿಡಿಪಿಐಗೆ ಸೂಚನೆ ನೀಡಿದ್ದೇನೆ.
ಕಾಮುಕ ಶಿಕ್ಷಕ ಅರೆಸ್ಟ್, ಅಜುರುದ್ದೀನ್ ಕಾಮಪುರಾಣದ ಹಿಂದೆ ಲವ್ ಜಿಹಾದ್..!
ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದ ಶಿಕ್ಷಕ ಅಜರುದ್ಧೀನ್ ಮೇಲೆ ಫೋಕ್ಸೋ ಅಡ್ಡಿಯಲ್ಲಿ ಪ್ರಕರಣ ದಾಖಲಿಸುವ ಕುರಿತಂತೆ ರಾಯಚೂರು ಎಸ್.ಪಿ.ನಿಖಿಲ್ .ಬಿ. ಜೊತೆಗೆ ಚರ್ಚೆ ನಡೆಸಿದ್ದೇನೆ. ಕಾನೂನಾತ್ಮಕವಾಗಿ ಏನು ಮಾಡಲು ಸಾಧ್ಯವಿದಿಯೋ ಅದು ಎಲ್ಲವೂ ಮಾಡುತ್ತೇವೆ. ಶಿಕ್ಷಕನ ಈ ಕೃತ್ಯದ ವಿಷಯವನ್ನು ತೀರ ಗಂಭೀರವಾಗಿ ಪರಿಗಣಿಸಿದ್ದೇವೆ. ಇಂತಹ ಕೃತ್ಯದ ವಿಚಾರದಲ್ಲಿ ಸರ್ಕಾರವೂ ಗಂಭೀರವಾಗಿದೆ ಎಂದು ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದರು.
ಅಧಿಕಾರಿಗಳ ವಿಚಾರಣೆಯಲ್ಲಿ ಕಾಮುಕ ಶಿಕ್ಷಕ ಅಜರುದ್ಧೀನ್ ಹೇಳಿದ್ದೇನು?: ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದ ಪ್ರಾಥಮಿಕ ಶಿಕ್ಷಕ ಅಜರುದ್ಧೀನ್ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಪೊಲೀಸರು ಕಾಮುಕ ಶಿಕ್ಷಕ ಅಜರುದ್ಧೀನ್ ನನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಅಜರುದ್ಧೀನ್ ನನ್ನ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜುಲೈ 1ರಂದು ವಿಚಾರಣೆ ನಡೆಸಿದ್ದಾರೆ. ಆ ವಿಚಾರಣೆಯ ವರದಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.
* ವಿಚಾರಣೆ ವೇಳೆ ಕಾಮುಕ ಶಿಕ್ಷಕ ತಾನು ಮಾಡಿದ್ದು ತಪ್ಪಾಗಿದೆ. ಅಶ್ಲೀಲ ವಿಡಿಯೋ ಮೊಬೈಲ್ ನಲ್ಲಿ ಮಾಡಬಾರದಿತ್ತು. ವಿಡಿಯೋ ಮಾಡಿಕೊಂಡಿದ್ದು ನನ್ನ ತಪ್ಪಾಗಿದೆ ಎಂದು ಸತ್ಯ ಬಾಯಿಬಿಟ್ಟಿದ್ದಾನೆ.
* ಈಗ ವೈರಲ್ ಆಗಿರುವ ವಿಡಿಯೋಗಳು ಮಾಡಿದ್ದು, 3 ವರ್ಷಗಳ ಹಿಂದೆ ಮಾಡಿಕೊಂಡಿದೆ.
* ಕಳೆದ ಒಂದು ತಿಂಗಳ ಹಿಂದೆ ನನ್ನ ಮೊಬೈಲ್ ಕಳುವಾಗಿತ್ತು.
* ಕಾರಟಗಿಯ ಮುಸ್ತಾಕ್ ಎಂಬ ಹುಡುಗ ನನ್ನ ವಿಡಿಯೋಗಳು ವೈರಲ್ ಮಾಡಿದ್ದಾನೆ.
* ವಿಡಿಯೋ ವೈರಲ್ ಮಾಡುವ ಮುನ್ನ ಮುಸ್ತಾಕ್ ಮತ್ತು ಆತನ ಸ್ನೇಹಿತರಾದ ರಾಮ್, ವಿನಯ್ ಹಣದ ಆಮಿಷಕ್ಕಾಗಿ ಬ್ಲಾಕ್ ಮೆಲ್ ಮಾಡಿ ಹಣ ನೀಡದೇ ಇದ್ದಾಗ ವಿಡಿಯೋ ವೈರಲ್ ಮಾಡಿದ್ದಾರೆ.
* ಮೂರು ವರ್ಷಗಳಿಂದ ಅಶ್ಲೀಲ ವಿಡಿಯೋಗಳು ನನ್ನ ಮೊಬೈಲ್‌ನಲ್ಲಿ ಇತ್ತು. ಆ ಎಲ್ಲಾ ವಿಡಿಯೋಗಳು ನಾನೇ ಮಾಡಿಕೊಂಡಿದ್ದು, ಆ ವಿಡಿಯೋಗಳು ಮಾಡಿಕೊಳ್ಳಲು ಆ ಮಹಿಳೆಯರ ಸಮ್ಮತಿಯೂ ಇತ್ತು ಎಂದು ವೀಕ್ಷಣೆ ವೇಳೆ ಕಾಮುಕ ಶಿಕ್ಷಕ ಅಜರುದ್ಧೀನ್ ತಿಳಿಸಿದ್ದಾನೆ.
* ವೈರಲ್ ಆಗಿರುವ ಎಲ್ಲಾ ವಿಡಿಯೋಗಳು ಸಹ ಕೊಪ್ಪಳ ಜಿಲ್ಲೆಯ ಕಾರಟಗಿ ಮನೆಯಲ್ಲಿ ಮಾಡಿದ್ದಾಗಿ ಕಾಮುಕ ಶಿಕ್ಷಕ ಅಜರುದ್ಧೀನ್ ಬಾಯಿಬಿಟ್ಟಿದ್ದಾನೆ.
ಸಿಂಗಾಪುರ ಗ್ರಾಮಸ್ಥರ ಒತ್ತಾಯವೇನು?: ಕಾಮುಕ ಶಿಕ್ಷಕ ಮಹಮ್ಮದ್ ಅಜರುದ್ಧೀನ್ ಮಾಡಿದ ಕೃತ್ಯದಿಂದಾಗಿ ಸಿಂಗಾಪುರ ಗ್ರಾಮದ ಜನರು ತಲೆತಗ್ಗಿಸುವಂತೆ ಆಗಿದೆ. ಹೀಗಾಗಿ ಇಂತಹ ನೀಚ ಶಿಕ್ಷಕನಿಗೆ ಇಡೀ ದೇಶದಲ್ಲಿ ಇನ್ನೂ ಮುಂದೆ ಎಲ್ಲಿಯೂ ಪಾಠ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಶಿಕ್ಷಕನ ರಾಸಲೀಲೆ ವಿಡಿಯೋ ವೈರಲ್, ಕಾಮುಕನ ಮತ್ತೊಂದು ಅಸಲಿ ಮುಖ ಬಿಚ್ಚಿಟ್ಟ ಗ್ರಾಮಸ್ಥರು
ಕಾಮುಕ ಶಿಕ್ಷಕನ ಪತ್ನಿಯಿಂದಲ್ಲೇ ಶಿಕ್ಷಣ ಇಲಾಖೆಗೆ ದೂರು: ಕಾಮುಕ ಶಿಕ್ಷಕ ಮಹಮ್ಮದ್ ಅಜರುದ್ಧೀನ್ ವಿರುದ್ಧ ಕಳೆದ 2 ವರ್ಷಗಳ ಹಿಂದೆ ಖುದ್ದು ಕಾಮುಕನ ಪತ್ನಿಯೇ ಮುಂದೆ ಬಂದು 21-04-2019ರಂದು ಗಂಡ ಮಹಮ್ಮದ್ ಅಜರುದ್ಧೀನ್ ಕೃತ್ಯಗಳನ್ನು ಎಳೆಎಳೆಯಾಗಿ ಬರೆದು ಸಿಂಧನೂರು ಬಿಇಗೆ ದೂರು ನೀಡಿದ್ರು. ಆಗ ಶಿಕ್ಷಣ ಇಲಾಖೆ ಅಧಿಕಾರಿಗಳು ತೋರಿಸಿದ ನಿರ್ಲಕ್ಷ್ಯದಿಂದಾಗಿ ಇಂದು ಇಡೀ ಶಿಕ್ಷಣ ಇಲಾಖೆಯೇ ತಲೆ ತಗ್ಗಿಸುವಂತ ಘಟನೆ ನಡೆದು ಹೋಗಿದೆ. ಹೀಗಾಗಿ ಈಗ ಅಧಿಕಾರಿಗಳ ಮತ್ತು ಶಿಕ್ಷಣ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಮುಂದಾಗಿದೆ. ಒಟ್ಟಿನಲ್ಲಿ ಕಾಮುಕ ಶಿಕ್ಷಕ ಮಹಮ್ಮದ್ ಅಜರುದ್ಧೀನ್ ವಿರುದ್ಧ ಕ್ರಮ ಜರುಗಿಸಲು ಪೊಲೀಸರು ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಕಾನೂನು ಪ್ರಕಾರ ಶಿಕ್ಷೆ ನೀಡಲು ತಯಾರಿ ನಡೆಸಿದ್ದಾರೆ.