ಸರ್ಕಾರಿ ಉದ್ಯೋಗ ಬೇಕು ಎನ್ನೋರಿಗೆ ಫ್ರೀ ಕೋಚಿಂಗ್ ಕೊಡ್ತಾರೆ ಇವರು!

By Suvarna News  |  First Published May 2, 2021, 1:17 PM IST

ಸರ್ಕಾರಿ ಅಧಿಕಾರಿಯೊಬ್ಬ ಮನಸ್ಸು ಮಾಡಿದರೆ ಎಷ್ಟೆಲ್ಲ ಬದಲಾವಣೆಗೆ ಕಾರಣವಾಗಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ತೆಲಂಗಾಣದ ಅಧಿಕಾರಿಯೊಬ್ಬರ ಇಂಥದ್ದೇ ಸಾಲಿನಲ್ಲಿ ನಿಲ್ಲುತ್ತಾರೆ. ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿರುವ  ಕೊಟ್ಟೆ ಎಡುಕೊಂಡಲು ಅವರು ಸರ್ಕಾರಿ ಉದ್ಯೋಗ ಪಡೆಯಲು ಮುಂದಾಗಿರುವ ನೂರಾರು ಅಭ್ಯರ್ಥಿಗಳಿಗೆ ದಾರೀದೀಪ ಆಗಿದ್ದಾರೆ.


ತೆಲಂಗಾಣದ ನಾಗಾರ್ಕರ್ನೂಲ್ ಜಿಲ್ಲೆಯ ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿರುವ ಕೊಟ್ಟೆ ಎಡುಕೊಂಡಲು, ಸರ್ಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿರುವ ನೂರಾರು ಅಭ್ಯರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತಮ್ಮ ಸರ್ಕಾರಿ ಸೇವೆಯ ಹೊರತಾಗಿ, ಉಳಿದ ಸಮಯದಲ್ಲಿ ಕೇಂದ್ರ ಅಥವಾ ರಾಜ್ಯವಾಗಲಿ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಆಶಿಸುವ ಅಸಂಖ್ಯಾತ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.  

39 ವರ್ಷದ ಕೊಟ್ಟೆ ಎಡುಕೊಂಡಲು, ಹಲವು ಜಿಲ್ಲೆಗಳಲ್ಲಿ ಸುಮಾರು 33 ಕೇಂದ್ರಗಳನ್ನ ಹೊಂದಿದ್ದು ತಮ್ಮದೇ ಆದ ವಿದ್ಯಾರ್ಥಿಗಳ ಜಾಲವನ್ನು ಹೊಂದಿದೆ. ರಕ್ತದಾನ ಮಾಡುವುದು, ದೀನದಲಿತರಿಗೆ ಕಲಿಕೆಯ ಕೇಂದ್ರಗಳನ್ನು ಸ್ಥಾಪಿಸುವುದು ಅಥವಾ ಸರ್ಕಾರಿ ಉದ್ಯೋಗಗಳಿಗೆ ತರಬೇತಿ ನೀಡಲು ಈ ‘ಮಿಷನ್’ ವಿದ್ಯಾರ್ಥಿಗಳು ಸಹಾಯ ಮಾಡಲು ಸಿದ್ಧರಾಗಿದ್ದಾರೆ.

Tap to resize

Latest Videos

undefined

ನೌಕಾಪಡೆಯಿಂದ 2500 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಲ್ಲಿಯವರೆಗೆ ಕೊಟ್ಟೆ ಎಡುಕೊಂಡಲು ಅವರ ʼದಿ ಮಿಷನ್ʼನ ನೂರಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭೇದಿಸುವ ಮೂಲಕ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಉದ್ಯೋಗಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೇ ಎಡುಕೊಂಡಲು ಒಂದು ಪೈಸೆಯನ್ನೂ ಪಡೆಯದೇ ಅಭ್ಯರ್ಥಿಗಳಿಗೆ ಉಚಿತವಾಗಿ ಕೋಚಿಂಗ್ ಕೊಡ್ತಾ ಬಂದಿದ್ದಾರೆ ದಿ ನ್ಯೂಸ್ ಮಿನಿಟ್ ವೆಬ್‌ತಾಣ ವರದಿ ಮಾಡಿದೆ.

 2015ರಲ್ಲಿ ನಲ್ಗೊಂಡ ಜಿಲ್ಲೆಯಲ್ಲಿ ಸುಮಾರು 20 ರಿಂದ 30 ವಿದ್ಯಾರ್ಥಿಗಳ ಸಣ್ಣ ಗುಂಪಿನೊಂದಿಗೆ ನನ್ನ ತರಬೇತಿ ಕಾರ್ಯ ಪ್ರಾರಂಭವಾಯಿತು. ಬಳಿಕ ನಿಧಾನವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತ ಹೋಯಿತು. ನಂತರ ನಾನು 2017ರಲ್ಲಿ ನಾಗಾರ್ಕರ್ನೂಲ್ ಜಿಲ್ಲೆಗೆ ವರ್ಗಾವಣೆಗೊಂಡಿದ್ದೇನೆ. ಆದರೆ ನಲ್ಗೊಂಡ ಜಿಲ್ಲೆಯ ವಿದ್ಯಾರ್ಥಿಗಳು ನನ್ನ ತರಗತಿಗಳನ್ನು ಕಳೆದುಕೊಳ್ಳಲು ಇಷ್ಟಪಡಲಿಲ್ಲ. ಹೀಗಾಗಿ ನನ್ನ ತಾಯಿಯ ಆರ್ಥಿಕ ಸಹಾಯದಿಂದ ಮತ್ತು ಸಾಲ ತೆಗೆದುಕೊಳ್ಳುವ ಮೂಲಕ ನಾನು ಟೆಲಿ ಕಾನ್ಫರೆನ್ಸಿಂಗ್ ಮೋಡ್ ಮೂಲಕ ತರಗತಿಗಳನ್ನು ಆರಂಭಿಸಿದೆ. ನಿಧಾನವಾಗಿ ಇತರ ಜಿಲ್ಲೆಗಳ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಯಿತು. ಈಗ ನಾವು ಸುಮಾರು 33 ಕೇಂದ್ರಗಳನ್ನು ಹೊಂದಿದ್ದೇವೆ, ಅಲ್ಲಿ ನಮ್ಮ ತರಗತಿಗಳು ನೇರ ಪ್ರಸಾರವಾಗುತ್ತವೆ ಅಂತಾರೆ ಎಡುಕೊಂಡಲು.

ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೋನು ಸೂದ್ ಮನವಿ

ಅಂದಹಾಗೇ ಇವರ ತರಗತಿಗಳು ಸರ್ಕಾರಿ ಶಾಲೆಗಳು,ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮೈದಾನ ಮತ್ತು ಸಭಾಂಗಣಗಳಲ್ಲಿ ನಡೆಯುತ್ತವೆ. ತಮ್ಮ ತರಗತಿಗಳಲ್ಲಿ ಎಡುಕೊಂಡಲು ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಕಳೆದ ವರ್ಷ ಸಾಂಕ್ರಾಮಿಕ ರೋಗ ಕೊರೊನಾ ಶುರುವಾದಾಗ, ಮಿಷನ್ ಮೊದಲ ಬಾರಿಗೆ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮಿಂಗ್ ತರಗತಿಗಳನ್ನು ಪ್ರಾರಂಭಿಸಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಿಷನ್ ಅನ್ನು ಎಡುಕೊಂಡಲು ಒಬ್ಬರೇ ನಡೆಸಿಕೊಂಡು ಬರುತ್ತಿದ್ದಾರೆ. ಅವರು ರಾಜಕೀಯ ಭಾಷೆ,ಸಾಮಾನ್ಯ ಜ್ಞಾನ,ಇತಿಹಾಸ, ಅರ್ಥಶಾಸ್ತ್ರ ಮತ್ತು ಇತರವುಗಳನ್ನು ಒಳಗೊಂಡಂತೆ ಸ್ಥಳೀಯ ಭಾಷೆಯ ತೆಲುಗಿನಲ್ಲಿ 13 ವಿಷಯಗಳನ್ನು ಕಲಿಸುತ್ತಾರೆ.ಎಡುಕೊಂಡಲು ಅವರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಒಂದಷ್ಟು ಸಮಯವನ್ನು ಮೀಸಲಿಡುತ್ತಾರೆ. ಪತ್ರಿಕೆಗಳ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ.  

ಪ್ರಸ್ತುತ ಎಡುಕೊಂಡಲು ಅವರು ಟೆಲಿ ಕಾನೆಕ್ಟಿವಿಟಿ ಮೂಲಕ ಕೋಚಿಂಗ್ ನೀಡುತ್ತಿದ್ದರೂ, ಮುಂದೆ ಭವಿಷ್ಯದಲ್ಲಿ ತಮ್ಮದೇ ಆದ ಒಂದು ಸಂಸ್ಥೆಯನ್ನು ಸ್ಥಾಪಿಸುವ ಕನಸು ಕಂಡಿದ್ದಾರೆ. ಅದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಾಗ ಸಾಕಷ್ಟು ಆಟಗಳು ಮತ್ತು ಜೀವನ ಮೌಲ್ಯಗಳನ್ನು ಹೊಂದಿರುವ ಪಠ್ಯಕ್ರಮವನ್ನು ಹೊಂದಿರಬೇಕು ಅನ್ನೋದು ಅವರ ಬಯಕೆ.

ರಾಜ್ಯದ 509 ಸೇರಿ ಒಟ್ಟು 5237 ಖಾಲಿ ಹುದ್ದೆಗಳಿಗೆ SBI ನೇಮಕಾತಿ, ಅಪ್ಲೈ ಮಾಡಿ

click me!