13 ವರ್ಷಗಳಿಂದ ಒಂದೇ ಒಂದು ರಜೆ ಪಡೆದಿಲ್ಲ ತಮಿಳುನಾಡಿನ ಸರ್ಕಾರಿ ಶಾಲೆಯ ಈ ಶಿಕ್ಷಕಿ

By Suvarna NewsFirst Published May 27, 2022, 9:32 PM IST
Highlights

ಆಕೆ ಯಾವಾಗಲೂ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಾಳೆ ಮತ್ತು ಸಾಮಾನ್ಯವಾಗಿ ಶಾಲೆಯಿಂದ ಹೊರಡುವ ಕೊನೆಯ ವ್ಯಕ್ತಿ ಎಂದು ಶಾಲೆಯ ಮೂಲಗಳು ತಿಳಿಸಿವೆ

ವಿಲ್ಲುಪುರಂ  (ಮೇ 27): ವಿಲ್ಲುಪುರಂ ಬಳಿಯ ಸುಂದರಿಪಾಳ್ಯಂ ಗ್ರಾಮದ 47 ವರ್ಷದ ಶಿಕ್ಷಕಿ ಕಳೆದ 13 ವರ್ಷಗಳಿಂದ ರಜೆ ತೆಗೆದುಕೊಂಡಿಲ್ಲ. ವಾಣಿಯಪಾಳ್ಯದ ಆನಂದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್.ಸರಸು ಅವರು ಕಳೆದ 13 ವರ್ಷಗಳಿಂದ ಕ್ಯಾಶುಯಲ್, ಮೆಡಿಕಲ್ ಮತ್ತು ಗಳಿಕೆ ರಜೆ (Earn Leaves) ಸೇರಿದಂತೆ ಯಾವುದೇ ರಜೆ ತೆಗೆದುಕೊಂಡಿಲ್ಲ. ಇದೇ ಶಾಲೆಯ ಮಾಜಿ ವಿದ್ಯಾರ್ಥಿಯಾಗಿರುವ ಈ ಶಿಕ್ಷಕಿ 2004 ರಿಂದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿದೆ. 

“ನನ್ನ 18 ವರ್ಷಗಳ ಸೇವೆಯಲ್ಲಿ, ನಾನು ಒಂದೇ ಒಂದು ವೈದ್ಯಕೀಯ ರಜೆ ತೆಗೆದುಕೊಂಡಿಲ್ಲ. ಅದು ಬಿಟ್ಟರೆ ಕಳೆದ 13 ವರ್ಷಗಳ ಸೇವಾವಧಿಯಲ್ಲಿ ವಿದ್ಯಾರ್ಥಿನಿಯರಿಗೆ ಮಾದರಿಯಾಗಬೇಕು ಎಂಬ ಕಾರಣಕ್ಕೆ ಯಾವುದೇ ರೀತಿಯ ರಜೆ ತೆಗೆದುಕೊಂಡಿಲ್ಲ' ಎಂದು ಹೇಳಿದ್ದಾರೆ. "ಆಕೆ ಯಾವಾಗಲೂ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಾಳೆ ಮತ್ತು ಸಾಮಾನ್ಯವಾಗಿ ಶಾಲೆಯಿಂದ ಹೊರಡುವ ಕೊನೆಯ ವ್ಯಕ್ತಿ" ಎಂದು ಶಾಲೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕೇವಲ 1 ರೂ.ನಲ್ಲಿ SC ST ಹೆಣ್ಮಕ್ಕಳಿಗೆ ತಾಂತ್ರಿಕ ಶಿಕ್ಷಣ?

“ಶಾಲಾ ಸಮಯಕ್ಕಿಂತ ಮೊದಲು ಅಥವಾ ನಂತರ ನನ್ನ ವೈಯಕ್ತಿಕ ಕೆಲಸಗಳನ್ನು ಪೂರ್ಣಗೊಳಿಸಲು ನಾನು ಸಮಯ ನೀಡುತ್ತೇಬೆ. ನನ್ನನ್ನು ನೋಡಿದ ನಂತರ ಅನೇಕ ವಿದ್ಯಾರ್ಥಿಗಳು ರಜೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ ಮತ್ತು ಅಲ್ಲಿ ನನ್ನ ತರಗತಿಗಳಿಗೆ ಹೆಚ್ಚಿನ ಸಮಯ ಪೂರ್ಣ ಹಾಜರಾತಿ ಇರುತ್ತದೆ, ”ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ತಮಿಳುನಾಡು ಸರ್ಕಾರದ ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಬೋಧನೆಗಾಗಿ ಅವರು 50 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ.

“ಆರಂಭದಲ್ಲಿ, ರಜೆ ತೆಗೆದುಕೊಳ್ಳದ ನನ್ನ ಅಭ್ಯಾಸದಿಂದ ನಾನು ನಗರದ ಹೊರಗೆ ನಡೆಯುವ ಕಾರ್ಯಕ್ರಮಗಳನ್ನು ತಪ್ಪಿಸಿದ್ದರಿಂದ ಸಂಬಂಧಿಕರು ನನ್ನ ಮೇಲೆ ಕೋಪಗೊಂಡಿದ್ದರು. ಆದರೆ ಅವರು ನನ್ನ ನೀತಿಯನ್ನು ಅರ್ಥಮಾಡಿಕೊಂಡರು ಮತ್ತು ಈಗ ಯಾವುದೇ ತೊಂದರೆಯಿಲ್ಲ, ”ಎಂದು ಅವರು ತಿಳಿಸಿದ್ದಾರೆ

ಇದನ್ನೂ ಓದಿ: ಬದಲಾದ ವ್ಯವಸ್ಥೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳು

click me!