* ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವು ಬೇಕಿದೆ
* ಬಾಡಿಗೆ ಕಟ್ಟಲು ಪರದಾಡುತ್ತಿರುವ ತಾಯಿಗೆ ಮಕ್ಕಳ ಭವಿಷ್ಯದ ವಿಂತೆ
* ಉನ್ನತ ಶಿಕ್ಷಣ ಪಡೆಯುವ ಹಂಬಲದಲ್ಲಿ ವಿದ್ಯಾರ್ಥಿನಿ
ಬೆಂಗಳೂರು(ಆ. 12) ಮನೆಯಲ್ಲಿ ಬಡತನ. ಒಂದೇ ಕೋಣೆಯಲ್ಲಿ ಮೂವರು ಮಕ್ಕಳು ಬಡ ತಾಯಿ ಸಲ್ಮಾ, ಬಟ್ಟೆ ಹೊಲಿಯುತ್ತಾ, ಗುಂಡಿ ಹಾಕುತ್ತಾ, ಗಂಧದ ಕಡ್ಡಿ ಉಜ್ಜುತ್ತಾ ಮಕ್ಕಳನ್ನು ಓದಿಸಲು ಹಗಲು-ರಾತ್ರಿ ದುಡಿಯುವ ತಾಯಿ.
ಮೂವರು ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂದು ಟೊಂಕ ಕಟ್ಟಿ ನಿಂತ ತಾಯಿ ಸಲ್ಮಾ, ಪ್ರತಿ ವರ್ಷ ದಾನಿಗಳ ನೆರವಿನಿಂದ ದುಡ್ಡು ಹೊಂದಿಸಲು ಪಡುವ ಕಷ್ಟ ಅಷ್ಟಿಷ್ಟಲ್ಲ. ಅಮ್ಮನ ಕನಸು, ಆಸೆಗೆ ಬೆಂಬಲವಾಗಿ ನಿಂತಿರುವ ಮಕ್ಕಳು ಓದಿನಲ್ಲಿ ಸದಾ ಮುಂದು. ಟ್ಯೂಷನ್ ನೆರವಿಲ್ಲದೇ, ಕಷ್ಟಪಟ್ಟು ಓದುವ ಮಕ್ಕಳು.
ಜಿಲ್ಲಾವಾರು ಎಸ್ ಎಸ್ ಎಲ್ ಸಿ ಫಲಿತಾಂಶ
ಅದರ ಪರಿಣಾಮ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರೂಫಿಯಾ ಪಡೆದಿದ್ದು ಬರೋಬ್ಬರಿ ಶೇ.98.04. ಕುರುಬರಹಳ್ಳಿಯ ಕೆನರಾ ಇಂಗ್ಲೀಷ್ ಶಾಲೆಯಲ್ಲಿ ಓದಿದ ರೂಫಿಯಾ, ಇಡೀ ಶಾಲೆಯ ಗೌರವ ಎತ್ತಿ ಹಿಡಿದಿದ್ದಾರೆ. 8-9ನೇ ತರಗತಿಯಲ್ಲೂ ಅತಿಹೆಚ್ಚು ಅಂಕ ಗಳಿಸಿದ್ದ ರೂಫಿಯಾ, ಶಾಲೆ ಶಿಕ್ಷಕರ ನಿರೀಕ್ಷೆ ಹುಸಿ ಮಾಡಲಿಲ್ಲ. ಈಗ ರೂಫಿಯಾಗೆ ಕಾಲೇಜು ಸೇರಬೇಕು, ಎಂಜಿನಿಯರಿಂಗ್ ಮಾಡಬೇಕೆಂಬ ಆಸೆ.
ಮನೆಗೆ ಬಾಡಿಗೆ ಕಟ್ಟಲು ಪರದಾಡುತ್ತಿರುವ ತಾಯಿ ಸಲ್ಮಾ, ಮಗಳನ್ನು ಕಾಲೇಜಿಗೆ ಸೇರಿಸುವುದು ಹೇಗೆಂದು ತಿಳಿಯದೇ ಕಂಗಾಲಾಗಿದ್ದಾಳೆ. ಆರ್ಥಿಕ ನೆರವು, ಮಾಹಿತಿ ಕೊಡುವವರಿಗಾಗಿ ದಾರಿ ಕಾಯುತ್ತಿದ್ದಾಳೆ. ನಿಮ್ಮ ನೆರವು ಬಡ ಹುಡುಗಿಯ ಭವ್ಯ ಭವಿಷ್ಯ ನಿರ್ಮಿಸುತ್ತದೆ.
ದಾನಿಗಳು ನೆರವು ನೀಡಬಹುದು;
ಕೆನರಾ ಬ್ಯಾಂಕ್ ಕುರಬರಹಳ್ಳಿ
ಅಕೌಂಟ್ ನಂಬರ್; 2830119002241
ಐಎಫ್‌ಎಸ್‌ಸಿ ಕೋಡ್ : CNRB0002830