SWAYAM Aircraft Courses: ವಿಮಾನದ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಇಚ್ಚಿಸುವವರಿಗೆ ಸ್ವಯಂ ಆನ್‌ಲೈನ್ ಕೋರ್ಸ್

By Suvarna News  |  First Published Jan 14, 2022, 8:18 PM IST

ವಿಮಾನಗಳ ವಿನ್ಯಾಸ ಮಾಡುವುದು ಹೇಗೆ ಎನ್ನುವುದನ್ನು ಕಲಿಯಲು ಕೇಂದ್ರ ಸರ್ಕಾರ  ಆನ್‌ಲೈನ್ ಕೋರ್ಸ್ ಪ್ರಾರಂಭಿಸಿದೆ. ಈ ಕೋರ್ಸ್ ಗೆ ಆಸಕ್ತರು ದಾಖಲಾತಿ ಮಾಡಿಕೊಳ್ಳಲು 31 ಜನವರಿ 2022 ಕೊನೆಯ ದಿನವಾಗಿದೆ. 


ಬೆಂಗಳೂರು(ಜ.14): ವಿಮಾನ ವಿನ್ಯಾಸವೂ ಸೇರಿದಂತೆ, ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗುತ್ತಿವೆ. ಈಗ ಪ್ರಯಾಣದ ಉದ್ದಕ್ಕೂ ಸುಖಾನುಭವ ಮತ್ತು ಭದ್ರತೆ ಇರುವ ಸಾಮಾನ್ಯ ವಿಮಾನಗಳಿಂದ ಹಿಡಿದು ಎರಡಂತಸ್ತಿನ ಐಶಾರಾಮಿ ವಿಮಾನಗಳೂ ಆಕಾಶದಲ್ಲಿ ಹಾರಾಡುತ್ತಿವೆ. ಇನ್ನೇನು ಚಾಲಕರಿಲ್ಲದ ಆಟೊಪೈಲಟ್ ವಿಮಾನಗಳೂ ಬರಲಿವೆ. ಈ ರೀತಿಯ ವಿಮಾನಗಳ ವಿನ್ಯಾಸ ಮಾಡುವುದು ಹೇಗೆ? ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಕಲಿಯಲು ಕೇಂದ್ರ ಸರ್ಕಾರ ಸ್ವಯಂ (SWAYAM - Study Webs of Active - Learning for Young Aspiring Minds) ಆನ್‌ಲೈನ್ ಕೋರ್ಸ್ ಪ್ರಾರಂಭಿಸಿದೆ. ಬಾಹ್ಯಾಕಾಶ  (Aerospace Engineering) ಮತ್ತು  ವಿಮಾನ ಮೆಕ್ಯಾನಿಕ್ಸ್ (Flight Mechanics) ಈ ಕೋರ್ಸ್ ಗೆ ಆಸಕ್ತರು ದಾಖಲಾತಿ ಮಾಡಿಕೊಳ್ಳಲು 31 ಜನವರಿ 2022 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ https://onlinecourses.nptel.ac.in/ ಗೆ ಭೇಟಿ ನೀಡಿ. ಅಥವಾ https://swayam.nta.ac.in/ ಗೆ ಭೇಟಿ ನೀಡಿ.

ಪ್ರಮುಖ ಮಾಹಿತಿ:
ದಾಖಲಾತಿಗೆ ಕೊನೆಯ ದಿನಾಂಕ: 31 ಜನವರಿ 2022
ತರಬೇತಿ ಅವಧಿ: 12 ವಾರಗಳು
ತರಬೇತಿ ಪ್ರಾರಂಭ: 24 ಜನವರಿ 2022
ತರಬೇತಿ ಮುಕ್ತಾಯ: 15 ಎಪ್ರಿಲ್ 
ಪರೀಕ್ಷೆ: 23 ಎಪ್ರಿಲ್ 2022
ಪರೀಕ್ಷಾ ಶುಲ್ಕ: 1,000 ರೂ

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಅಧ್ಯಯನ  (Btech, Mtech, PhD)ಕೈಗೊಂಡಿರುವ ವಿದ್ಯಾರ್ಥಿಗಳು ಈ ಕೋರ್ಸ್ ಕಲಿಯಲು ಆರ್ಹರಾಗಿರುತ್ತಾರೆ.

NORTH EASTERN RAILWAY RECRUITMENT 2022: ಮಾಜಿ ಸೈನಿಕರಿಗೆ ಈಶಾನ್ಯ ರೈಲ್ವೆಯಲ್ಲಿ ಉದ್ಯೋಗವಕಾಶ

ಎರೋಸ್ಪೇಸ್ ಎಂಜಿನಿಯರಿಂಗ್ (Aerospace Engineering) ಮತ್ತು ಫ್ಲೈಟ್ ಮೆಕಾನಿಕ್ಸ್ (Flight Mechanics) ಶಾಖೆಗಳಡಿ ಬರುವ ಈ ಕೋರ್ಸ್‌ನಲ್ಲಿ ಒಟ್ಟು 12 ಮಾಡ್ಯೂಲ್‌ಗಳಿವೆ. ಆನ್‌ಲೈನ್ ಕೋರ್ಸ್ ಕಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ. ಎಂಜಿನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ 3 ಕ್ರೆಡಿಟ್ ಪಾಯಿಂಟ್ ಸಿಗಲಿದೆ. ಡಿಆರ್‌ಡಿಓ, ಎಚ್‌ಎಎಲ್, ಬೋಯಿಂಗ್, ಏರ್‌ಬಸ್‌, ಬೆಲ್, ಮೆಕ್‌ಡೊನೆಲ್ ಡೌಗ್ಲಸ್, ಯುಎವಿ ಫ್ಯಾಕ್ಟರಿ, ಲಾಕ್‌ಹೀಡ್ ಮಾರ್ಟಿನ್ ಕಂಪನಿಗಳು ಈ ಕೋರ್ಸ್‌ಗೆ ಮಾನ್ಯತೆ ನೀಡಿ ಉದ್ಯೋಗಾವಕಾಶದ ಅವಕಾಶ ನೀಡಲಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಹೋದ್ಯೋಗಿ ಪತ್ನಿಗೆ ಉದ್ಯೋಗದ ಭರವಸೆ ನೀಡಿದ Zomato

ಪ್ರಯಾಣಿಕರ ಸುರಕ್ಷತೆ, ಪೇಲೋಡ್, ಗಾತ್ರ, ಇಂಧನ ಸರಬರಾಜು ವ್ಯವಸ್ಥೆ, ಪ್ರೊಪೆಲ್ಶನ್, ದೌರ್ಬಲ್ಯ, ಸ್ಥಿರತೆ, ನಿಯಂತ್ರಣ ಮತ್ತು ಸುಲಭ ಚಾಲನಾ ತಂತ್ರಗಳಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಈ ಕೋರ್ಸ್‌ನಲ್ಲಿ ಕಲಿಸಲಾಗುತ್ತದೆ. ಒಟ್ಟು 12 ಅಸೈನ್‌ಮೆಂಟ್‌ ಗಳಿರುತ್ತವೆ.

Prasar Bharati Recruitment 2022: ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಆಸಕ್ತರು 1,000 ರೂ ಪರೀಕ್ಷಾ ಶುಲ್ಕ ಪಾವತಿಸಿ, ಯಾವುದಾದರೂ ಆಯ್ದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು.  ಮೂರು ಗಂಟೆಗಳ ಕಾಲ ಪರೀಕ್ಷೆಯ ಅವಧಿ ಇರಲಿದೆ. ಕೋರ್ಸ್‌ ಪಾಸಾದ ನಂತರ, ಭಾರತೀಯ ತಂತ್ರಜ್ಞಾನ ಸಂಸ್ಥೆ ಕಾನ್ಪುರ (Indian Institute of Technology Kanpur -IIT)ಮತ್ತು ರಾಷ್ಟ್ರೀಯ ತಂತ್ರಜ್ಞಾನ ವರ್ಧಿತ ಕಲಿಕೆ ಕಾರ್ಯಕ್ರಮ  (National Program on Technology Enhanced Learning -NPTEL) ಜಂಟಿಯಾಗಿ ಪ್ರಮಾಣ ಪತ್ರವನ್ನು ನೀಡುತ್ತವೆ. ಕೋರ್ಸ್‌ ಕುರಿತ ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ:  https://onlinecourses.nptel.ac.in/noc22_ae01/preview

SECR Recruitment 2022: ಪ್ಯಾರಾ ಮೆಡಿಕಲ್‌ನ ವಿವಿಧ ಹುದ್ದೆಗಳಿಗೆ ಆಗ್ನೇಯ ಮಧ್ಯ ರೈಲ್ವೆ ಸಂದರ್ಶನ
 

click me!