Bilingual Textbooks: ಮಹಾರಾಷ್ಟ್ರ ಶಾಲೆಗಳಿಗೆ ಮರಾಠಿ ಜತೆಗೆ ಇಂಗ್ಲಿಷ್ ಇರುವ ದ್ವಿಭಾಷಾ ಪಠ್ಯಪುಸ್ತಕ

By Suvarna NewsFirst Published Jan 14, 2022, 3:20 PM IST
Highlights

*ಸಮಗ್ರ ಮತ್ತು ದ್ವಿಭಾಷಾ ಪಠ್ಯ ಪುಸ್ತಕ ಅನುಷ್ಠಾನ ಪ್ರಕಟಿಸಿದ ಮಹಾರಾಷ್ಟ್ರಜದ ಶಿಕ್ಷಣ ಸಚಿವೆ.
*ಮರಾಠಿ ಜತೆಗೆ ಇಂಗ್ಲಿಷ್ ಭಾಷೆಯೂ ಬಗ್ಗೆ ಮಕ್ಕಳಿಗೆ ತಿಳಿಸುವುದು ಇದರ ಉದ್ದೇಶ
*ಶಿಕ್ಷಣ ಸುಧಾರಣೆಗಾಗಿ ಮಹಾರಾಷ್ಟ್ರ ಎಜುಕೇಷನ್ ಟೆಕ್ನಾಲಜಿ ಫೋರಮ್ ಸ್ಥಾಪನೆ

ಮಹಾರಾಷ್ಟ್ರ (ಜ 14): ಮಕ್ಕಳಿಗೆ ಮಾತೃಭಾಷೆ (mother tongue)ಯಲ್ಲೇ ಶಿಕ್ಷಣ ಕೊಡಿಸಬೇಕು ಎಂಬುದ ಸಾರ್ವತ್ರಿಕ ಮತ್ತು ವೈಜ್ಞಾನಿಕವಾಗಿ ಒಪ್ಪಿಕೊಂಡಿರುವ ನೀತಿ. ಆದರೂ, ಜಾಗತಿಕ ಬೇಡಿಕೆಗೆ ಅನುಗುಣವಾಗಿ ಇಂಗ್ಲಿಷ್ (English) ಕಲಿಸಬೇಕು ಎಂಬ ವಾದವೂ ಇದ್ದೇ ಇದೆ. ಈ ಹಿನ್ನಲೆಯಲ್ಲೇ ನಮ್ಮನೆರೆಯ ಮಾಹಾರಾಷ್ಟ್ರ (Maharashtra) ಸರಕಾರವು ಮತ್ತೊಂದು ಹೆಜ್ಜೆ ಇಟ್ಟಿದ್ದು, ಮಾತೃಭಾಷೆ ಮರಾಠಿ ಜತೆಗೆ ಇಂಗ್ಲಿಷ್ ಕೂಡ ಕಲಿಸಲು ಮುಂದಾಗಿದೆ. ಅದರ ಭಾಗವಾಗಿಯೇ ಸಮಗ್ರ ಹಾಗೂ ದ್ವಿಭಾಷಾ (Bilingual) ಪಠ್ಯ ಪುಸ್ತಕ (TextBooks) ಗಳನ್ನು ಪರಿಚಯಿಸಲಿದೆ ಮಹಾರಾಷ್ಟ್ರ ಸರಕಾರ. ಈ ಸಂಬಂಧ ಮಹಾರಾಷ್ಟ್ರ ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ (Varsha Gaikwad) ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸಮಗ್ರ ಹಾಗೂ ದ್ವಿಭಾಷಾ ಪಠ್ಯ ಪುಸ್ತಕಗಳನ್ನ ಪ್ರಾಥಮಿಕ ಶಾಲಾ ಹಂತದಿಂದಲೇ ಪರಿಚಯಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅಂದರೆ, ಒಂದನೇ ತರಗತಿಯಿಂದಲೇ ಈ ಹೊಸ ಪಠ್ಯ ಪುಸ್ತಕಗಳನ್ನು ಪರಿಚಯಿಸಲಾಗುತ್ತದೆ. ಆ ಮೂಲಕ ಮಕ್ಕಳನ್ನು ಮರಾಠಿ (Marathi) ಹಾಗೂ ಇಂಗ್ಲಿಷ್ (English) ಭಾಷೆ ಕಲಿಕೆಯೊಂದಿಗೆ ಈ ಸದ್ಯದ ಅಗತ್ಯಗಳನ್ನು ಪೂರೈಸಲು ನೆರವು ಒದಿಗಸುವ ದೂರದೃಷ್ಟಿಯನ್ನು ಇದರಲ್ಲಿ ಕಾಣಬಹುದಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿIIT Mandi New Director: ಪ್ರೊ. ಲಕ್ಷ್ಮೀಧರ್ ಬೆಹೆರಾ ಐಐಟಿ ಮಂಡಿಯ ನೂತನ ನಿರ್ದೇಶಕ    

ಮಹಾರಾಷ್ಟ್ರ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಅವರು ಈ ತಮ್ಮ ನಿರ್ಧಾರವನ್ನು ಸೋಷಿಯಲ್ ಮೀಡಿಯಾ (Social Media)ಗಳ ಮೂಲಕ ತಿಳಿಸಿದ್ದಾರೆ. ದ್ವಿಭಾಷಾ ಪಠ್ಯ ಪುಸ್ತಗಳನ್ನು ಪರಿಚಯಿಸುವ ಸಂಬಂಧ ಈಗಾಗಲೇ ಬಾಲಭಾರತಿಗೆ ಸೂಚನೆ ನೀಡಲಾಗಿದ್ದು, ಅತ್ಯುತ್ತಮ ಗುಣಮಟ್ಟದ ಪಠ್ಯ ಪುಸ್ತಕಗಳನ್ನು ರೂಪಿಸುವಂತೆ ಹೇಳಲಾಗಿದೆ. ಈ ಪಠ್ಯಪುಸ್ತಕಗಳಲ್ಲಿ ಮರಾಠಿ ಪದ ಹಾಗೂ ವಾಕ್ಯಗಳೊಂದಿಗೆ ಇಂಗ್ಲಿಷ್ ಪದ ಮತ್ತು ವಾಕ್ಯಗಳನ್ನು ಮುದ್ರಿಸಲು ಸೂಚಿಸಲಾಗಿದೆ. ಇದರಿಂದಾಗಿ ಮಕ್ಕಳಿಗೆ ಇಂಗ್ಲಿಷ್ ಮೂಲ ಪಾಠಗಳನ್ನು, ಶಬ್ಧಗಳನ್ನು, ವ್ಯಾಕರಣ ಇತ್ಯಾದಿ ತಿಳಿದಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ: CAT Topper Chirag Gupta: ಕೋಚಿಂಗ್ ಇಲ್ಲದೇ, ಯುಟ್ಯೂಬ್ ನೋಡಿಯೇ CAT ರ‍್ಯಾಂಕ್ ಗಳಿಸಿದ 

ವಿಶೇಷ ಎಂದರೆ, ಈ ಸಮಗ್ರ ಹಾಗೂ ದ್ವಿಭಾಷಾ ಪಠ್ಯ ಪುಸ್ತಕಗಳನ್ನು ಪರಿಚಯಿಸುವ ಪೈಲಟ್ ಯೋಜನೆ ಈಗಾಗಲೇ ಆರಂಭವಾಗಿದೆ. ಮಹಾರಾಷ್ಟ್ರದ 488 ಶಾಲೆಗಳಲ್ಲಿ ದ್ವಿಭಾಷಾ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ ಆ ಮೂಲಕವೇ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಅವರು ಇದಕ್ಕೆಸಂಬಂಧಿಸಿದ ಪೂರ್ವ ಸಿದ್ಧತೆಯ ಪರಿಶೀಲನೆಯನ್ನು ತಮ್ಮ ಅಧಿಕಾರಿಗಳೊಂದಿಗೆ ಮಾಡಿದ್ದಾರೆ ಎಂದು ವರದಿಯಾಗಿದೆ. 

ಮಹಾರಾಷ್ಟ್ರದಲ್ಲಿ ಶಾಲಾ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಮಹಾರಾಷ್ಟ್ರ ಸರಕಾರವು ಈಗಾಗಲೇ ಎಜುಕೇಷನ್ ಟೆಕ್ನಾಲಜಿ ಫೋರಮ್ (Education Technology Forum) ಸ್ಥಾಪಿಸಿದೆ. ಈ ವೇದಿಕೆಯ ಮೂಲಕ ಶಿಕ್ಷಮ ಗುಣಮಟ್ಟ ಸುಧಾರಣೆಗಾಗಿ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಈ ಮಹಾರಾಷ್ಟ್ರ ಶಿಕ್ಷಣ ತಂತ್ರಜ್ಞಾನ ವೇದಿಕೆಯಲ್ಲಿ ಟೆಕ್ನಾಲಜಿ ವಲಯ ಮತ್ತು ಶೈಕ್ಷಣಿಕ ಪರಿಣತರು ಇರಲಿದ್ದಾರೆ. 

 

We are committed to the introduction of integrated & bilingual textbooks in all Marathi medium schools from the next academic year 1st Std. onwards. Reviewed the preparedness of the initiative with senior department officials today. pic.twitter.com/Ulqw5XM66w

— Prof. Varsha Eknath Gaikwad (@VarshaEGaikwad)

 

ಹಾಗಾಗಿ, ಈ ಎಜುಕೇಷನ್ ಟೆಕ್ನಾಲಜಿ ಫೋರಮ್, ಶಾಲಾ ಶಿಕ್ಷಣ ಸುಧಾರಣೆಗೆ ಸಂಬಂಧಿಸಿದಂತೆ ಚಿಂತಕರ ಚಾವಡಿ ರೀತಿಯಲ್ಲಿ ಕೆಲಸ ಮಾಡಲಿದೆ. ಶಾಲಾ ಶಿಕ್ಷಣದಲ್ಲಿ ತಂತ್ರಜ್ಞಾನ ಆಧಾರಿತ ಮಧ್ಯಸ್ಥಿಕೆಗಳ ಮೇಲೆ ಸ್ವತಂತ್ರ ಸಾಕ್ಷ್ಯ ಆಧಾರಿತ ಸಲಹಾ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶಿಕ್ಷಣ ತಂತ್ರಜ್ಞಾನ ವೇದಿಕೆಯ ಸ್ಥಾಪನೆಯನ್ನು ಘೋಷಿಸುವಾಗ ಗಾಯಕ್ವಾಡ್ ಹೇಳಿದ್ದಾರೆ.

RTE ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭ

ಕರ್ನಾಟಕದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (RTE) ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ. ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಆರ್ಥಿಕ ದುರ್ಬಲ ವರ್ಗದವರಿಗೆ ಉಚಿತವಾಗಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆರ್‌ಟಿಇ ಕಾಯ್ದೆ 2009ರಲ್ಲಿ ಜಾರಿಯಾಗಿದ್ದು, ಅಂದಿನಿಂದಲೂ ರಾಜ್ಯದಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ವಿವಿಧ ಹಂತಗಳನ್ನು ಹೊಂದಿದೆ. ಒಟ್ಟಾರೆ ಏಪ್ರಿಲ್ 30ಕ್ಕೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 3.5 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಈ ಕಾಯ್ದೆಯ ಉದ್ದೇಶವಾಗಿದೆ.

 

click me!