Karnataka Education : ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ

By Kannadaprabha News  |  First Published Dec 28, 2021, 7:42 AM IST
  •  ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ
  •   ಜ.1ರಿಂದ ಫೆ.7ರವರೆಗೆ ಆಯೋಜಿಸಲು ಕೇಂದ್ರ ಶಿಕ್ಷಣ ಸಚಿವಾಲಯ ಆದೇಶ
     

ಬೆಂಗಳೂರು (ಡಿ.28):   ಕೇಂದ್ರ ಸರ್ಕಾರದ (Govt Of India)  ಆದೇಶದಂತೆ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ವರ್ಷ 2022ರ (New Year 20200 ) ಜನವರಿ 1ರಿಂದ ಫೆಬ್ರವರಿ 7 ರವರೆಗೆ ‘ಸೂರ್ಯ ನಮಸ್ಕಾರ’ (Surya namaskar)  ಆಯೋಜಿಸುವಂತೆ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ.  ಅಲ್ಲದೆ, ಜನವರಿ 26ರ ಗಣರಾಜ್ಯೋತ್ಸವದ ದಿನ ಸುವರ್ಣ ಧ್ವಜದ ಎದುರು ‘ಸಂಗೀತದೊಂದಿಗೆ ಸೂರ್ಯ ನಮಸ್ಕಾರ’ ಆಯೋಜಿಸಬೇಕು ಎಂದು ಕೂಡ ಸೂಚನೆ ನೀಡಿದೆ.

75ನೇ ಸ್ವಾತಂತ್ರ್ಯೋತ್ಸವದ (Independence Day) ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯವು ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಡಿಸೆಂಬರ್‌ 16 ರಂದು ಪತ್ರದ ಮೂಲಕ ಸೂಚನೆ ನೀಡಿತ್ತು. ಈ ಆದೇಶದಂತೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ (EducationDepartment)  ಇದೀಗ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಿಗೆ (PU Colleges) ಸೂಚಿಸಿದೆ.

Latest Videos

undefined

ರಾಜ್ಯದ (Karnataka) ಎಲ್ಲ ಜಿಲ್ಲೆಗಳ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು (Students) ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬಳಿಕ ಕಾರ್ಯಕ್ರಮದ ಕ್ರೋಡೀಕೃತ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ವಿಭಾಗಕ್ಕೆ ನೀಡಬೇಕು ಎಂದು ಜಿಲ್ಲಾ ಉಪನಿರ್ದೇಶಕರಿಗೆ ಪಿಯು ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಸೂರ್ಯ ನಮಸ್ಕಾರವು ವಿದ್ಯಾರ್ಥಿಗಳ (Students) ಆರೋಗ್ಯ ವೃದ್ಧಿಗೆ ಹಾಗೂ ಮನೋಬಲ ಹೆಚ್ಚಿಸುವುದಕ್ಕೆ ನೆರವಾಗಲಿದೆ. ಜ.1ರಿಂದ ಫೆ.7ರವರೆಗಿನ 38 ದಿನಗಳ ಪೈಕಿ 21 ದಿನ ಬೆಳಗ್ಗೆ ವಿದ್ಯಾರ್ಥಿಗಳು ಸಮಾವೇಶಗೊಂಡಾಗ ಸೂರ್ಯನಮಸ್ಕಾರ ಮಾಡಬೇಕಿದೆ. ಈ 21 ದಿನಗಳಲ್ಲಿ ಪ್ರತಿ ದಿನ 13 ಸೂರ್ಯ ನಮಸ್ಕಾರಗಳಂತೆ ಒಟ್ಟು 273 ಸೂರ್ಯ ನಮಸ್ಕಾರಗಳನ್ನು ಮಾಡಿದವರಿಗೆ ಇ-ಪ್ರಮಾಣ ಪತ್ರ ನೀಡುವುದಾಗಿ ರಾಷ್ಟ್ರೀಯ ಯೋಗಾಸನ ಸ್ಟೋಟ್ಸ್‌ರ್‍ ಫೆಡರೇಷನ್‌ ತಿಳಿಸಿದೆ ಎಂದು ಪಿಯು ಇಲಾಖೆ ಅಧಿಕಾರಿಗಳು ತಿಳಿಸಿದರು.

click me!