Uttara Kannada: ಶಿಕ್ಷಕಿಯ ವರ್ಗಾವಣೆ ನಡೆಸದಂತೆ ವಿದ್ಯಾರ್ಥಿಗಳ ಪ್ರತಿಭಟನೆ

By Suvarna News  |  First Published Jan 24, 2023, 6:50 PM IST

ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ನಡೆಸಲು ಸರಕಾರ ಆದೇಶಿಸಿರುವ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ಯಲಗುಪ್ಪಾದಲ್ಲಿ ವಿರೋಧ ಕಾಣಿಸಿಕೊಂಡಿದೆ. ಶಿಕ್ಷಕಿಯನ್ನು ಶಾಲೆಯ ಸೇವೆಯಲ್ಲಿರಿಸಬೇಕೆಂದು ಒತ್ತಾಯಿಸಿ ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.


ಉತ್ತರಕನ್ನಡ (ಜ.24): ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ನಡೆಸಲು ಸರಕಾರ ಆದೇಶಿಸಿರುವ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ಯಲಗುಪ್ಪಾದಲ್ಲಿ ಭಾರೀ ವಿರೋಧ ಕಾಣಿಸಿಕೊಂಡಿದೆ. ಯಲಗುಪ್ಪಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 70 ಮಕ್ಕಳಿದ್ದು, ಈ ಮಕ್ಕಳನ್ನು ಶಾಲೆಯಿಂದ ವಾಪಾಸ್ ಕರೆದೊಯ್ಯುವ ಮೂಲಕ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಈ ಶಾಲೆಯ ಇಂಗ್ಲಿಷ್ ವಿಷಯದ ಶಿಕ್ಷಕಿ ಲಕ್ಷ್ಮೀ ಎಂಬವರಿಗೆ ವರ್ಗಾವಣೆಯಾಗಿದ್ದು, ಆ ಶಿಕ್ಷಕಿಯನ್ನು ಶಾಲೆಯ ಸೇವೆಯಲ್ಲಿ ಇರಿಸಬೇಕೆಂದು ಒತ್ತಾಯಿಸಿ ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಬೇಕೆಂದು ಸರಕಾರವೇ ಹೇಳುತ್ತದೆ.‌ ಆದರೆ, ಉತ್ತಮ ಶಿಕ್ಷಕರನ್ನು ಹೆಚ್ಚುವರಿ ನೆಪದಲ್ಲಿ ಬೇರೆಡೆ ವರ್ಗಾವಣೆ ಮಾಡಲಾಗ್ತಿದೆ. ಖಾಸಗಿ ಶಾಲೆಗಳ ಮುಂದೆ ಬಡವರ ಮಕ್ಕಳು ಬೆಳೆಯುವುದಾದರೂ ಹೇಗೆ? ಈಗಾಗಲೇ ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ಮನವಿ ಕೂಡಾ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಈ ಶಾಲೆಯ ಶಿಕ್ಷಕರ ವರ್ಗಾವಣೆ ನಿಲ್ಲಿಸದಿದ್ರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಇಲ್ಲ. ಶಿಕ್ಷಕಿಯ ವರ್ಗಾವಣೆಯನ್ನು ನಿಲ್ಲಿಸುವ ಬೇಡಿಕೆ ಈಡೇರದಿದ್ದಲ್ಲಿ ಭಾರೀ ಪ್ರತಿಭಟನೆ ನಡೆಸಲಾಗುವುದು ಎಂದು ಪೋಷಕರು ಎಚ್ಚರಿಕೆ ನೀಡಿದ್ದಾರೆ.

ದೈಹಿಕ ಶಿಕ್ಷಕರ ವರ್ಗಾವಣೆ ಆದೇಶಕ್ಕೆ ಖಂಡನೆ:

Latest Videos

undefined

ಸಿದ್ದಾಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 130ಕ್ಕಿಂತ ಕಡಿಮೆ ಇರುವ ಶಾಲೆಗಳಲ್ಲಿ ಇರುವ ದೈಹಿಕ ಶಿಕ್ಷಕರನ್ನು ತೆಗೆಯಲು ಸರ್ಕಾರದ ಆದೇಶದ ಬಗ್ಗೆ ವಸಂತ ಎಲ್‌. ನಾಯ್ಕ ಮನಮನೆ ಖಂಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿ 102 ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳಿವೆ. ಆದರೆ ಇರುವ ದೈಹಿಕ ಶಿಕ್ಷಕರು ಕೇವಲ 8 ಮಾತ್ರ. ಆದರೆ ಈಗಿನ ಆದೇಶದ ಪ್ರಕಾರ 130ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿರುವ ದೈಹಿಕ ಶಿಕ್ಷಕರನ್ನು ತೆಗೆಯಲು ಮುಂದಾಗಿರುವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಸರ್ಕಾರವು ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಂಡರ್‌ ಬುಕ್‌ ಆಫ್‌ ರೆಕಾರ್ಡ್ಸ್ಗೆ ಸೇರ್ಪಡೆ
ಗಂಗಾವತಿ: 999 ವಿದ್ಯಾರ್ಥಿಗಳು 57 ಸೆಕೆಂಡ್‌ಗಳಲ್ಲಿ ಪಿರಾಮಿಕ್ಸ್‌ ಕ್ಯೂಬ್‌ ಜೋಡಿಸುವ ಮೂಲಕ ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳ ಸಾಧನೆ ‘ವಂಡರ್‌ ಬುಕ್‌ ಆಫ್‌ ರೆಕಾರ್ಡ್ಸ್ ಇಂಟರ್‌ನ್ಯಾಷನಲ್‌’ಗೆ ಸೇರ್ಪಡೆಯಾಗಿದೆ.

ವಂಡರ್‌ ಬುಕ್‌ ಆಫ್‌ ರೆಕಾರ್ಡ್ಸ್ ಮುಖ್ಯ ಸಂಯೋಜಕ ಬಿಂಗಿ ನರೇಂದ್ರ ಗೌಡ ಅವರ ಪರಿವೀಕ್ಷಣೆಯಲ್ಲಿ 999 ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಕ್ಯೂಬ್‌ನ ಆಕೃತಿಯಲ್ಲಿ ಸೇರಿ ಪ್ರತಿಯೊಬ್ಬರೂ ಉತ್ಸಾಹದಿಂದ ಕೇವಲ 57 ಸೆಕೆಂಡುಗಳಲ್ಲಿ ಪಿರಾಮಿಕ್ಸ್‌ ಕ್ಯೂಬ್‌ ಜೋಡಿಸಿದರು. ಆ ಮೂಲಕ ಉತ್ಕೃಷ್ಟಸಾಧನೆ ಮಾಡಿ ‘ವಂಡರ್‌ ಬುಕ್‌ ಆಫ್‌ ರೆಕಾರ್ಡ್ಸ್ ಇಂಟರ್‌ನ್ಯಾಷನಲ್‌’ ದಾಖಲೆ ಸಾಧಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ, ತನಿಖಾ ಸಮಿತಿ ಪರಿಶೀಲನೆ

ಬಿಂಗಿ ನರೇಂದ್ರ ಗೌಡ ಅವರಿಂದ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಅವರು ವಂಡರ್‌ ಬುಕ್‌ ಆಫ್‌ ರೆಕಾರ್ಡ್ಸ್ ಇಂಟರ್‌ನ್ಯಾಷನಲ್‌ ಸಾಧನೆಯ ಪ್ರಶಸ್ತಿ ಪದಕ ಮತ್ತು ಪ್ರಮಾಣಪತ್ರವನ್ನು ಸ್ವೀಕರಿಸಿದರು.

ಸರ್ಕಾರದ ಅನುಮತಿ ಇಲ್ಲದ ಆರ್ಕಿಡ್‌ ಶಾಲೆ: ಸಿಬಿಎಸ್‌ಇ ಹೆಸರಲ್ಲಿ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಶಾಲೆ

ಸಂಸ್ಥೆಯ ಆಡಳಿತಾತ್ಮಕ ನಿರ್ದೇಶಕ ಎಚ್‌.ಕೆ. ಚಂದ್ರಮೋಹನ್‌, ಶೈಕ್ಷಣಿಕ ನಿರ್ದೇಶಕ ಶ್ರೀನಿವಾಸ್‌ ಚೌಧರಿ, ಸಂಯೋಜಕ ವಿಜಯಭಾಸ್ಕರ, ಶಾಲೆ- ಕಾಲೇಜಿನ ಪ್ರಾಂಶುಪಾಲರು ಮತ್ತು ಶಾಲೆಯ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ಇದ್ದರು.

click me!