ಪರೀಕ್ಷೆ ಮುಂದೂಡಲು ಒತ್ತಾಯಿಸಿ ಕುವೆಂಪು ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

By Gowthami K  |  First Published Aug 22, 2022, 11:02 PM IST

2022-23ರ ಶೈಕ್ಷಣಿಕ ವರ್ಷದ ಮಧ್ಯಂತರ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಕುವೆಂಪು ವಿಶ್ವವಿದ್ಯಾಲಯದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಆ.22): 2022-23ರ ಶೈಕ್ಷಣಿಕ ವರ್ಷದ ಮಧ್ಯಂತರ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಕುವೆಂಪು ವಿಶ್ವವಿದ್ಯಾಲಯದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ನಗರದಲ್ಲಿ ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕ ಪ್ರತಿಭಟನೆ ನಡೆಸಿದರೆ, ಕಡೂರು, ಕಳಸದಲ್ಲಿ ಎಬಿವಿಪಿ ವಿದ್ಯಾರ್ಥಿ ಘಟಕ ಕುವೆಂಪು ವಿವಿ ವಿರುದ್ಧ ಪ್ರತಿಭಟನೆ ನಡೆಸಿದೆ. ರಾಜ್ಯದ ಇತರ ವಿವಿಗಳಲ್ಲಿ ಏಪ್ರಿಲ್ಗೆ ತರಗತಿಗಳು ಶುರುವಾಗಿದ್ದರೆ, ಕುವೆಂಪು ವಿವಿಯಲ್ಲಿ ತರಗತಿಗಳು ಶುರುವಾಗಿದ್ದೇ ಜೂನ್ 20ರ ಬಳಿಕ. ಆದರೆ, ಇದೀಗ ರಾಜ್ಯದ ಇತರ ವಿವಿಗಳಂತೆ ಕುವೆಂಪು ವಿವಿ ಕೂಡ ಆಗಸ್ಟ್ 30ಕ್ಕೆ ಮೊದಲ ಸೆಮಿಸ್ಟರ್ನ್ನ ಕೊನೆಗೊಳಿಸುವಂತೆ ಸೂಚಿಸಿದೆ. ಆದರೆ, ಇನ್ನೂ ಕೂಡ ತರಗತಿಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಏಕಾಏಕಿ ಈ ರೀತಿಯ ಕ್ರಮಕ್ಕೆ ಮುಂದಾಗಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪದವಿ ವಿದ್ಯಾರ್ಥಿಗಳು ಕುವೆಂಪು ವಿವಿಯ ಕುಲಪತಿ ವಿರುದ್ಧ ಕೆಂಡಮಂಡಲರಾಗಿದ್ದಾರೆ. ನಮ್ಮ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಹೊರಡಿಸಿರುವ ವೇಳಾಪಟ್ಟಿಯನ್ನು ಕೂಡಲೇ ಬದಲಾಯಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕುವೆಂಪು ವಿವಿ ಪರೀಕ್ಷಾ ವೇಳಾಪಟ್ಟಿಯನ್ನ ಕೂಡಲೇ ಬದಲಿಸಿದಿದ್ದರೆ ಹೋರಾಟವನ್ನ ಮತ್ತಷ್ಟು ತೀಕ್ಷ್ಣಗೊಳಿಸುವುದಾಗಿ ಎಚ್ಚರಿಸಿದ್ದಾರೆ.

Latest Videos

undefined

ಬಿಇ 2ನೇ ಸೆಮಿಸ್ಟರ್‌ ಪರೀಕ್ಷೆ ಮತ್ತು ದಂತವೈದ್ಯ ಪರೀಕ್ಷೆ ಮುಂದೂಡಲು ವಿದ್ಯಾರ್ಥಿಗಳ ಆಗ್ರಹ!

ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ : ಎನ್ .ಎಸ್ .ಯು .ಐ
ಚಿಕ್ಕಮಗಳೂರು ನಗರದಲ್ಲಿ ಎನ್ ಎಸ್ ಯು ಐ ವಿದ್ಯಾರ್ಥಿ ಘಟಕದಿಂದ  ಹನುಮಂತಪ್ಪ ವೃತ್ತದಿಂದ ಮೆರವಣಿಗೆಯಲ್ಲಿ ಒಂದು ತಂಡ, ಬೇಲೂರು ರಸ್ತೆಯ ಮಾರ್ಗವಾಗಿ ಮತ್ತೊಂದು ವಿದ್ಯಾರ್ಥಿಗಳ ತಂಡ ಆಜಾದ್ ವೃತ್ತಕ್ಕೆ ಆಗಮಿಸಿ ಕುವೆಂಪು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ವಿರುದ್ಧ ಘೋಷಣೆ ಕೂಗಿ ಕೂಡಲೇ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದರು.

ಹಿಜಾಬ್‌ಗೆ ಸಿಗದ ಅನುಮತಿ ಕರಾವಳಿಯಲ್ಲಿ ಟೀಸಿ ಪಡೆದ ನೂರಾರು ಮುಸ್ಲಿಂ ವಿದ್ಯಾರ್ಥಿನಿಯರು!

ಸಮಯಕೊಡಿ ಸಮಯಕೊಡಿ ಪಾಠಮಾಡಲು ಸಮಯಕೊಡಿ,ಮೊದಲು ಪಾಠಮಾಡಿ ನಂತರ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳು ಶಕ್ತಿ ದೇಶದಶಕ್ತಿ ಎಂದು ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾನಿರತ ವಿದ್ಯಾಥಿಗಳು ,ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಪ್ರಧಾನಕಾರ್ಯದರ್ಶಿ ಜಾಕಿರ್ಹುಸೇನ್  ಎಚ್ಚರಿಸಿದ್ದಾರೆ. ಕಾಲೇಜು ಆರಂಭಗೊಂಡು 45ದಿನಗಳೂ ಕಳೆದಿಲ್ಲ, ಈ ತಿಂಗಳ ಅಂತ್ಯಕ್ಕೆ ಪಾಠಗಳನ್ನು ಮುಕ್ತಾಯಗೊಳಿಸಲು ಸೂಚಿಸಿದ್ದು, ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಮೇಲೆ ನಿರ್ಲಕ್ಷ್ಯ ಧೋರಣೆ ತಾಳಿದಂತೆ ಕಂಡುಬರುತ್ತಿದೆ ಎಂದು ಹೇಳಿದರು.

click me!