ಏಕೋಪಧ್ಯಾಯ ಶಾಲೆಯ ವಿದ್ಯಾರ್ಥಿಗಳ ಧರಣಿ..!

By Girish Goudar  |  First Published May 17, 2022, 8:02 AM IST

*  ಹಾಲನಾಯಕನಹಳ್ಳಿ ಸರ್ಕಾರಿ ಶಾಲೆಯ 231 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು
*  ವ್ಯವಸ್ಥೆ ಸರಿಪಡಿಸದಿದ್ದರೆ ನಿರಂತರ ಪ್ರತಿಭಟನೆ
*  ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ 


ಬೆಂಗಳೂರು(ಮೇ.17):  ಮಹದೇವಪುರ ವಲಯದ ಹಾಲನಾಯಕನಹಳ್ಳಿ ಸರ್ಕಾರಿ ಶಾಲೆಗಳಲ್ಲಿ(Government Schools) ಮೊದಲ ದಿನವೇ ವಿದ್ಯಾರ್ಥಿಗಳು(Students) ಹಾಗೂ ಗ್ರಾಮಸ್ಥರು ತಮ್ಮೂರ ಶಾಲೆಗಳಿಗೆ ಸೂಕ್ತ ಶಿಕ್ಷಕರಿಲ್ಲವೆಂದು ಪ್ರತಿಭಟನೆ(Protest) ನಡೆಸಿರುವ ಘಟನೆ ನಡೆದಿದೆ.

ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು 231 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಕಳೆದ ಐದಾರು ವರ್ಷಗಳಿಂದ ಕೇವಲ ಒಬ್ಬರೇ ಶಿಕ್ಷಕರಿಂದ ಪಾಠ-ಪ್ರವಚನ ನಡೆಯುತ್ತಿದ್ದು, ಮಕ್ಕಳು ಸರಿಯಾದ ರೀತಿಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗದೆ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿ ಶಾಲೆ ಪ್ರಾರಂಭವಾದ ಮೊದಲ ದಿನವೇ ಶಾಲೆಯ ಎದುರು ಗ್ರಾಮಸ್ಥರು(Villagers) ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

Tap to resize

Latest Videos

Bijapur Sainik School ಹೆಣ್ಮಕ್ಕಳಿಗೂ ಪ್ರವೇಶ ಅವಕಾಶ

ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಸರ್ಕಾರಿ ಶಾಲೆಯು ಕೆ.ಆರ್‌.ಪುರ ಶಿಕ್ಷಣಾಧಿಕಾರಿ(ಬಿಇಒ) ಹನುಮಂತರಾಯಪ್ಪ ಅವರ ವ್ಯಾಪ್ತಿಗೆ ಬರಲಿದ್ದು, ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ಸಹ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಿಲ್ಲ ಎಂದು ಆರೋಪಿಸಿದ್ದಾರೆ. ಶಾಲೆಗೆ ಉತ್ತಮ ಕಟ್ಟಡ, ಕುಡಿಯುವ ನೀರು, ಕ್ರೀಡಾಂಗಣ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳ ಜೊತೆಗೆ ಉತ್ತಮ ಸಂಖ್ಯೆಯ ದಾಖಲಾತಿ ಇದ್ದರೂ ಶಿಕ್ಷಕರಿಲ್ಲ. ಒಬ್ಬ ಶಿಕ್ಷಕರಿಂದ ಶಾಲೆ ನಡೆಸಲು ಸಾಧ್ಯವಿಲ್ಲ. ನಮಗೆ ಶಿಕ್ಷಕರನ್ನು ನೀಡುವವರೆಗೆ ನಾವು ಶಾಲೆಗೆ ಹಾಜರಾಗುವುದಿಲ್ಲ. ನಮ್ಮ ಪ್ರತಿಭಟನೆ ಮಂಗಳವಾರ ಕೂಡ ಮುಂದುವರಿಯುತ್ತದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರ 15 ದಿನದ ಮುಂಚಿತವಾಗಿ ಶಾಲೆಗಳನ್ನು ಪ್ರಾರಂಭ ಮಾಡಿದೆ. ಆದರೆ ಶಿಕ್ಷಕರಿಲ್ಲದೆ(Teachers) ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ರತಿಭಟನೆ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟು ಬೇಗ ಶಿಕ್ಷಕರನ್ನು ನೇಮಕ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
 

click me!