ಪರೀಕ್ಷೆ ಇಲ್ಲದೆ ಪಿಯು ಪಾಸ್‌: ಪಟಾಕಿ ಸಿಡಿಸಿ ವಿದ್ಯಾರ್ಥಿಗಳಿಂದ ಸಂಭ್ರಮ

By Kannadaprabha News  |  First Published Jun 17, 2021, 9:28 AM IST

* ಕಾಲೇಜಿನ ಗೇಟ್‌ಗೆ ಕುಂಬಳಕಾಯಿ ಒಡೆದು ಪಟಾಕಿ ಸಿಡಿಸಿ ಸಂಭ್ರಮ
* ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ನಡೆದ ಘಟನೆ
*  ವಿದ್ಯಾರ್ಥಿಗಳ ನಡೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ 


ತಿಪಟೂರು(ಜೂ.17):  ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೆ ಪಾಸ್‌ ಮಾಡಿದ್ದಕ್ಕಾಗಿ ಪದವಿ ಕಾಲೇಜೊಂದರ ಕೆಲ ವಿದ್ಯಾರ್ಥಿಗಳು ಕಾಲೇಜಿನ ಗೇಟ್‌ಗೆ ಕುಂಬಳಕಾಯಿ ಒಡೆದು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿಂದ ವರದಿಯಾಗಿದೆ. 

ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪಿಯು ಪರೀಕ್ಷೆಗಳನ್ನು ರದ್ದುಪಡಿಸಿ ಆದೇಶಿಸಿದೆ. ಇದಕ್ಕೆ ಸಂತಸಗೊಂಡ ಕೆಲ ವಿದ್ಯಾರ್ಥಿಗಳು ಕಾಲೇಜಿನ ಗೇಟ್‌ಗೆ ಒಂದು ಕಲ್ಲು ಇಟ್ಟು ಅದರ ಮೇಲೆ ಕುಂಬಳಕಾಯಿಯೊಂದನ್ನು ಇಟ್ಟು, ನಂತರ ಅದನ್ನು ಕಾಲೇಜಿಗೆ ನೀವಳಿಸಿ, ಗೇಟ್‌ ಮುಂದಿಟ್ಟಿದ್ದ ಕಲ್ಲಿಗೆ ಆ ಕುಂಬಳಕಾಯಿ ಒಡೆದಿದ್ದಾರೆ. 

Tap to resize

Latest Videos

ಪಿಯು ಪುನರಾವರ್ತಿತರ ಪರೀಕ್ಷೆ ರದ್ದತಿ ಬಗ್ಗೆ ಮಹತ್ವದ ಮಾಹಿತಿ

ನಂತರ ಪಟಾಕಿ ಸಿಡಿಸಿ ನೃತ್ಯ ಸಹ ಮಾಡಿ ಈ ಘಟನೆಯ ವೀಡಿಯೋ ಸಹ ಅವರೇ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದೆ. ವಿದ್ಯಾರ್ಥಿಗಳ ಈ ನಡೆಗೆ ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾಗಿದೆ.
 

click me!