Gadag: ಕಾಲೇಜು ಪ್ರವೇಶಾತಿ ಗೊಂದಲ: ಬೀದಿ ಅಲೆಯುತ್ತಿರುವ ವಿದ್ಯಾರ್ಥಿಗಳು

By Suvarna News  |  First Published Mar 25, 2022, 8:57 PM IST

ಗದಗ ನಗರದ ಶ್ರೀಮತಿ ಶಕುಂತಲಾ ನರ್ಸಿಂಗ್ ಸೈನ್ಸ್ ಕಾಲೇಜಿನ ಪ್ರವೇಶಾತಿಯಲ್ಲಿ ಉಂಟಾಗಿರುವ ಗೊಂದಲದಿಂದಾಗಿ ವಿದ್ಯಾರ್ಥಿಗಳು ಅಕ್ಷರಶಃ ಬೀದಿಯಲ್ಲಿ ಅಲೆಯುವಂತಾಗಿದೆ.


ಗದಗ (ಮಾ.25): ನಗರದ ಕಳಸಾಪುರ ರಸ್ತೆ ಬಳಿಯ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ (Para Medical College) ದಾಖಲಾತಿ ಬಳಸಿ ಪ್ರಾಚಾರ್ಯ ಡಿಬಿ ಪಾಟೀಲ ಅವರು ಶಕುಂತಲಾ ನರ್ಸಿಂಗ್ ಕಾಲೇಜಿಗೆ ಅನುಮತಿ ಪಡೆದಿದ್ದಾರೆ ಅನ್ನೋ ಆರೋಪ ಇದೆ. ಈ ಹಿನ್ನೆಲೆ ಬಸವೇಶ್ವರ ಕಾಲೇಜಿನ ಸಂಸ್ಥಾಪಕ ವಿಬಿ ಹುಬ್ಬಳ್ಳಿ ಹಾಗೂ ಡಿಬಿ ಪಾಟೀಲರ ಮಧ್ಯೆ ಕೋಲ್ಡ್ ವಾರ್ ನಡೆದಿದೆ. ಗಂಡ-ಹೆಂಡಿರ ಮಧ್ಯೆ ಕೂಸು ಬಡವ ಆಯ್ತು ಅನ್ನೋ ಹಾಗೆ ಶಕುಂತಲಾ ಪಾಟೀಲ ಕಾಲೇಜಿಗೆ ಪ್ರವೇಶಾತಿ ಪಡೆದಿರೋ ಬರೋಬ್ಬರಿ 60 ಮಕ್ಕಳು (Students) ಅತಂತ್ರ ಸ್ಥಿತಿಯಲ್ಲಿದ್ದಾರೆ..

ಕಾಲೇಜು ಬಿಟ್ಟು ಬೀದಿ ಅಲೆಯುತ್ತಿರುವ ವಿದ್ಯಾರ್ಥಿಗಳು: ಒಂದ್ಕಡೆ ಬಸವೇಶ್ವರ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಪ್ರವೇಶಾತಿ ಪಡೆದಿಲ್ಲ. ಅಷ್ಟಕ್ಕೂ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಜೆಎನ್ ಎಮ್ (ಹೆರಿಗೆ ಸುಶ್ರೂಷೆ) ಜನರಲ್ ನರ್ಸಿಂಗ್ ಮಿಡ್ವೈಫರಿ ಕೋರ್ಸ್ ಇಲ್ಲ. ಹೀಗಾಗಿ ನಮ್ಮ ಕಾಲೇಜಿಗೆ ವಿದ್ಯಾರ್ಥಿಗಳು ಸಂಬಂಧವೇ ಇಲ್ಲ ಅಂತಿದಾರೆ. ನಿನ್ನೆ ಕಾಲೇಜಿಗೆ ನುಗ್ಗಿ ಗಲಾಟೆ ಮಾಡಿದ ಪೋಷಕರು, ವಿದ್ಯಾರ್ಥಿಗಳು ಕೂಡಲೇ ಕ್ಲಾಸ್ ಆರಂಭಿಸಬೇಕು ಅಂತಾ ಆಗ್ರಹಿಸಿದರು. ಅಲ್ದೆ, ಗೊಂದಲವಾಗಿರೋ 60 ವಿದ್ಯಾರ್ಥಿಗಳ ಪ್ರವೇಶಾತಿ ಸರಿ ಪಡೆಸಬೇಕು ಅಂದಿದ್ರು. ಡಿಬಿ ಪಾಟೀಲ ಪರವಾಗಿ ಬಂದಿದ್ದ ಅವರ ಪತ್ನಿ ವಿನುತಾ ಪಾಟೀಲ (ಮಾರ್ಚ್ 25) ಕ್ಕೆ ಡಿಬಿ ಪಾಟೀಲ ಅವರನ್ನ ಕರೆದುಕೊಂಡುಬಂದು ಸಮಸ್ಯೆ ಬಗೆಹರಿಸುತ್ತೇವೆ ಅಂತಾ ಮಾತು ಕೊಟ್ಟಿದ್ರ. ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿಗೆ ಬಂದು ಗೊಂದಲ ಪರಿಹರಿಸಬೇಕಿತ್ತು.

Tap to resize

Latest Videos

ಬಸವೇಶ್ವರ ಕಾಲೇಜಿನ ಸಂಸ್ಥಾಪಕ ವಿಬಿ ಹುಬ್ಬಳ್ಳಿ ಅವರು ಕಾಲೇಜಿನ ಸಂಪೂರ್ಣ ಉಸ್ತುವಾರಿಯನ್ನ ಡಿಬಿ ಪಾಟೀಲರಿಗೆ ನೀಡಿದರು. ಸುಳ್ಳು ದಾಖಲಾತಿ ಸೃಷ್ಟಿಸಿ ಡಿಬಿ ಪಾಟೀಲ ಬೇರೆ ಕಾಲೇಜಿಗೆ ಅನುಮತಿ ಪಡೆದಿದ್ದಾರಂತೆ. ಪ್ರಕರಣ ಯಾವಾಗ ಸರ್ವಜನಿಕವಾಯ್ತೋ ಡಿಬಿ ಪಾಟೀಲ ತಲೆ ಮರೆಸಿಕೊಂಡಿದ್ದಾರೆ. ಇಂದು ಕಚೇರಿಗೆ ಬಂದು ಸಮಸ್ಯೆ ಬಗೆಹರಿಸಬೇಕಿದ್ದ ಪಾಟೀಲರು ನಾಪತ್ತೆಯಾಗಿದ್ದಾರೆ. ನಗರದ ಕಳಸಾಪುರ ರಸ್ತೆ ಬಳಿಯ ಸೇವಾಲಾಲ್ ನಗರದಲ್ಲಿನ ಡಿಬಿ ಪಾಟೀಲರ ಮನೆ ಬಳಿ ಹೋಗಿದ್ದ ವಿದ್ಯಾರ್ಥಿಗಳಿಗೆ ಅವರು ಕಂಡಿಲ್ಲ. ಇದರಿಂದಾಗಿ ಸಹಜವಾಗಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡೆಸಿದ್ದಾರೆ‌‌‌.

Bagalkote: ರಂಗನಾಥ ಸ್ವಾಮಿಗೆ ಇಲ್ಲಿ ಸಾರಾಯಿ ನೈವೇದ್ಯ: ಮದ್ಯ ನೈವೇದ್ಯ ಸಲ್ಲಿಸಿ ಕೃತಾರ್ಥರಾಗ್ತಾರೆ ಭಕ್ತವೃಂದ

ಕ್ಲಾಸ್ ನಡೀತಿಲ್ಲ-ಗಲಾಟೆ ಮುಗೀತಿಲ್ಲ: ಮ್ಯಾನೇಜ್ಮೆಂಟ್ ಮಧ್ಯದ ಜಗಳದಲ್ಲಿ 60 ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ. ವಿದ್ಯಾರ್ಥಿಗಳು ಜೆಎನ್‌ಎಮ್ ಅಂದ್ರೆ ಜನರಲ್ ನರ್ಸಿಂಗ್ ಮಿಡ್ವೈಫರಿ ಕೋರ್ಸ್‌ ಗೆ (ಹೆರಿಗೆ ಸುಶ್ರೂಷೆ) ದಾಖಲಾತಿ ಪಡೆದಿದ್ದು ಕಳೆದ ತಿಂಗಳಿಂದ ಕ್ಲಾಸ್ ಆರಂಭವಾಗಿಲ್ಲ. ಈಗಾಗಲೇ 40 ಸಾವಿರ ರೂಪಾಯಿ ಫೀ ಕಟ್ಟಿರೋ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ಏನು ಅನ್ನೋ ಪ್ರಶ್ನೆ ಕಾಡುತ್ತಿದೆ.

ಪ್ರಕರಣದ ಹಿನ್ನೆಲೆ: ನಗರದ ಹಿರಿಯ ವಕೀಲ ವಿಬಿ ಹುಬ್ಬಳ್ಳಿ ಹಾಗೂ ಡಿಬಿ ಪಾಟೀಲ ಅವರ ಪಾಲುದಾರಿಕೆಯಲ್ಲಿ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ನಡೆಸಲಾಗ್ತಿದೆ. ಕಳೆದ 10/12 ವರ್ಷದಿಂದ ಸಂಸ್ಥೆ ಸರಾಗವಾಗಿ ನಡೀತಾ ಬಂದಿದೆ.. ಇತ್ತೀಚೆಗೆ ಕಾಲೇಜಿನ ಪ್ರಾಚಾರ್ಯ ಡಿಬಿ ಪಾಟೀಲ ಅವರು ಶ್ರೀಮತಿ ಶಕುಂತಲಾ ಪಾಟೀಲ ನರ್ಸಿಂಗ್ ಸೈನ್ಸ್ ಅನ್ನೋ ಕಾಲೇಜು ಆರಂಭಿಸಿದರು. ಅಲ್ದೆ, ದಾಖಲಾತಿಯಲ್ಲಿ ಕಳಸಾಪುರ ರೋಡ್‌ನಲ್ಲಿರುವ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ವಿಳಾಸ ನೀಡಿದ್ರು ಅನ್ನೋ ಆರೋಪವಿದೆ. 

ಅಲ್ಲದೇ ಫೀ ರಸೀದಿಯಲ್ಲಿ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ಅಂತಾ ನಮೂದಾಗಿತ್ತಂತೆ. (ಕರ್ನಾಟಕ ನರ್ಸಿಂಗ್ ಬೋರ್ಡ್) ಅಧಿಕಾರಿಗಳ ಎದುರು ಬಸವೇಶ್ವರ ಕಾಲೇಜು ಬಿಲ್ಡಿಂಗ್, ಪರಿಕರ ತೋರಿಸಿ ಅನುಮತಿ ಪಡೆದಿದ್ದಾರೆ.. ಈ ಮೂಲಕ ಫ್ರಾಡ್ ಮಾಡಲಾಗಿದೆ ಅನ್ನೋ ಗಂಭೀರ ಆರೋಪವೂ ಇದೆ.. ಈ ಎಲ್ಲ ಸಂಗತಿಗಳು ಸಂಸ್ಥಾಪಕ ವಿಬಿ ಹುಬ್ಬಳ್ಳಿಯವರಿಗೆ ತಿಳಿದಿರಲಿಲ್ವಂತೆ.. ಒಂದೇ ಬಿಲ್ಡಿಂಗ್‌ನಲ್ಲಿ ಎರಡು ಕಾಲೇಜು ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾದಾಗ ನಮ್ಮ ಗಮನಕ್ಕೆ ಬಂದಿದೆ. ಆಗ ಡಿಬಿ ಪಾಟೀಲ ವಿರುದ್ಧ ಚೀಟಿಂಗ್ ಕೇಸ್ ದಾಖಲಿಸಿದ್ದೇವೆ ಅಂತಾ ವಿಬಿ ಹುಬ್ಬಳ್ಳಿ ತಿಳಿಸಿದ್ದಾರೆ..

ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ

ಆದಷ್ಟು ಬೇಗ ಸಮಸ್ಯೆ ಬಗೆಹರಿಯಬೇಕಿದೆ: ಪ್ಯಾರಾ ಮೆಡಿಕಲ್ ಕೋರ್ಸ್‌ಗಳಿಗಾಗಿ ಗದಗ, ಹಾವೇರಿ, ಬೆಳಗಾವಿ ಸೇರಿದಂತೆ ವಿವಿಧೆಡೆಯ ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ಸದ್ಯದ ಗೊಂದಲದಿಂದ ಅತಿ ಹೆಚ್ಚು ಸಮಸ್ಯೆಯನ್ನ ಇದೇ ಮಕ್ಕಳು ಅನುಭವಿಸುತ್ತಿದ್ದಾರೆ.. ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜನ ಪ್ರತಿನಿಧಿಗಳು ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು.

click me!