Chikkamagaluru: ತಾನು ಓದಿದ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಐಎಎಸ್ ಅಧಿಕಾರಿ

By Suvarna News  |  First Published Mar 25, 2022, 3:29 PM IST
  •  ತಾನು ಓದಿದ ಶಾಲೆಯನ್ನು ಮರೆಯಲಿಲ್ಲ ಐಎಎಸ್ ಅಧಿಕಾರಿ
  •  ಶಾಲೆಗೆ ಆಧುನಿಕ ಸ್ಪರ್ಶ ನೀಡಿದ ಐಎಎಸ್ ಅಧಿಕಾರಿ 
  • ಸ್ಮಾರ್ಟ್ ಕ್ಲಾಸ್,  ಕಂಪ್ಯೂಟರ್ , ಪ್ರಿಂಟರ್ ಗಳ ಕೊಡುಗೆ ನೀಡಿದ ಅಧಿಕಾರಿ

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು (ಮಾ.25): ಸರ್ಕಾರಿ ಶಾಲೆಗಳು (Government schools) ಇಂದು ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಶಾಲೆಗಳಿಗೆ ಸರ್ಕಾರದ ಯೋಜನೆಗಳು, ಖಾಸಗಿ ವ್ಯಕ್ತಿಗಳು ಹಳೆಯ-ವಿದ್ಯಾರ್ಥಿಗಳು ನೀಡುತ್ತಿರುವ ಕೊಡುಗೆ ಮತ್ತಷ್ಟು  ಆಧುನಿಕ ಸ್ಪರ್ಶವನ್ನು ಶಾಲೆಗಳಿಗೆ ನೀಡುತ್ತಿದೆ. ಇದೇ ಸಾಲಿಗೆ ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಬಯಲುಸೀಮೆ ಭಾಗದಲ್ಲಿರುವ ಸಿಂದಿಗೆರೆ ಶಾಲೆಯು ಕೂಡ ಸೇರಿಕೊಂಡಿದೆ. ಇಲ್ಲಿ ಕಲಿತ ವಿದ್ಯಾರ್ಥಿ ಇಂದು ಐಎಎಸ್ (IAS) ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ .ಈ ಶಾಲೆಗೆ ಆಧುನಿಕ‌ ಉಪಕರಣಗಳನ್ನು   ನೀಡುವ ಮೂಲಕ ಶಾಲೆಗೆ ಹೈಟೆಕ್ ಟಚ್ ನೀಡಿದ್ದಾರೆ.

Tap to resize

Latest Videos

ತಾನು ಓದಿದ ಶಾಲೆಯನ್ನು ಮರೆಯಲಿಲ್ಲ ಐಎಎಸ್ ಅಧಿಕಾರಿ: ಚಿಕ್ಕಮಗಳೂರಿನ ಬಯಲುಸೀಮೆ ಭಾಗದ ಸಿಂದಿಗೆರೆ ಗ್ರಾಮ (Sindigere Village) ಅತ್ಯಂತ ಹಿಂದುಳಿದ ಪ್ರದೇಶ. ಗ್ರಾಮದಲ್ಲಿ ರುವಂತಹ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ, ರಾಜ್ಯದ ನಾನಾ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರು ಸರ್ಕಾರಿ ನೌಕರರು ಆದರೆ ಇನ್ನು ಕೆಲವರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಂದಿಗೆರೆಯ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ಕಲಿತ ಪ್ರಸನ್ನ ಎಚ್ (Prasanna H) ಇಂದು ಕರ್ನಾಟಕ ಭವನದಲ್ಲಿ  ಉಪ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾನು ಓದಿದ ಶಾಲೆಗೆ ಏನಾದರೂ ಮಾಡಬೇಕೆನ್ನುವ ಹಂಬಲ ಅವರಲ್ಲಿತ್ತು. ಅದಕ್ಕಾಗಿ  ಓದಿದ ಶಾಲೆಗೆ ಮೂರು ಲಕ್ಷ ವೆಚ್ಚದಲ್ಲಿ ಆಧುನಿಕ ಉಪಕರಣಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

SSLC 2022 Exam ಹಾಲ್ ಗಳಲ್ಲಿ ಹಿಜಾಬ್‌ ಧರಿಸುವಂತಿಲ್ಲ: ಸಚಿವ ನಾಗೇಶ್

 ಶಾಲೆಗೆ ಹೈಟೆಕ್  ಸ್ಪರ್ಶ: ಸಿಂದಿಗೆರೆಯ ಶಾಲೆಯಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೊರೋನಾ‌ 1ನೇ  ಎರಡನೇ ಅಲೆಯಲ್ಲಿ ಆನ್ ಲೈನ್ ಕ್ಲಾಸ್  ನಿಂದ ವಿದ್ಯಾರ್ಥಿಗಳಿಗೆ ಕಲಿಯಲು ಅನಾನುಕೂಲವಾಯಿತು. ಇದನ್ನು ಅರಿತ ಐಎಎಸ್ ಅಧಿಕಾರಿ ಪ್ರಸನ್ನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏನಾದರೂ ಮಾಡಬೇಕೆನ್ನುವ ಹಂಬಲ ಅವರಲ್ಲಿತ್ತು ಅದಕ್ಕಾಗಿ ಮೂರು ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ,ಕಂಪ್ಯೂಟರ್ ,ಯುಪಿಎಸ್ ಅನ್ನು ಸರ್ಕಾರಿ ಶಾಲೆಗೆ ನೀಡಿದ್ದಾರೆ.

ಈ ಮೂಲಕ ಇಲ್ಲಿ ವಿದ್ಯಾಭ್ಯಾಸ ಮಾಡುವಂತಹ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಸೌಲಭ್ಯ ಮತ್ತಷ್ಟು ಪ್ರಯೋಜನಕಾರಿಯಾಗಿದೆ. 2 ಕಂಪ್ಯೂಟರ್ ,ಪ್ರಿಂಟರ್ , ಯುಪಿಎಸ್ ಅನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಕಲಿಕೆಯಲ್ಲಿ ಇವರ ಕೊಡುಗೆ ಮಹತ್ವದ ಎನ್ನಿಸಿಕೊಂಡಿದೆ. ಈ ಮೂಲಕ ನಾನು ಓದಿ ಬೆಳೆದ ಊರು ಶಾಲೆಯನ್ನು ಕೂಡ ಮರೆಯಾದ ಎನ್ನುವ  ಐಎಎಸ್ ಅಧಿಕಾರಿ ಕೆಲಸ  ಎಲ್ಲರಿಗೂ ಮಾದರಿಯಾಗಿ ನಿಂತಿದೆ.

ಪರೀಕ್ಷೆಗೆ ಗೈರಾದ ಮಂಡ್ಯದ ಮುಸ್ಕಾನ್, ಶಿಕ್ಷಣಕ್ಕಿಂತ ಹೆಚ್ಚಾಯ್ತಾ ಹಿಜಾಬ್? 

ಒಟ್ಟಾರೆ ಕೊರೋನಾ ಕಾಲಘಟ್ಟದಲ್ಲಿ ಮನೆಯಲ್ಲಿ ಕುಳಿತು ಅಭ್ಯಾಸ ಮಾಡುವಂತಹ ವೇಳೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳಿಗೆ ಸಾಕಷ್ಟು ಅನಾನುಕೂಲವಾಯಿತು, ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶಾಲೆಗಳಿಗೆ ಆಧುನಿಕ ಸ್ಪರ್ಶವನ್ನು ನೀಡುತ್ತದೆ ಆದರೆ ಸರ್ಕಾರ ನೀಡುವಂತಹ ಸೌಲಭ್ಯದ ಜೊತೆಗೆ ಹಳೆಯ-ವಿದ್ಯಾರ್ಥಿಗಳು, ಸ್ವಯಂಸೇವಕರು ,ದಾನಿಗಳು ನೀಡುವಂತಹ ಸೌಲಭ್ಯ ಸರ್ಕಾರಿ ಶಾಲೆಗಳು ಮತ್ತಷ್ಟು ಹೈಟಕ್ ಶಾಲೆಗಳನ್ನಾಗಿ ಪರಿವರ್ತನೆ ಆಗುವಲ್ಲಿ ಈಶಾಲೆಯು ಕೂಡ  ಸೇರಿಕೊಂಡಿದೆ.

click me!