ಪರಪ್ಪ ಅಂಬಿ ಹೃದಯಾಘಾತದಿಂದ ಮೃತಪಟ್ಟಿದ್ದ. ಶೇಗುಣಸಿ ಗ್ರಾಮದ ಶ್ರೀ ಮುರುಗೇಂದ್ರ ಸ್ವಾಮೀಜಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸರ್ವೇಶ ಪರಪ್ಪ ಅಂಬಿ ಪರೀಕ್ಷೆ ಬರೆದ ವಿದ್ಯಾರ್ಥಿಯಾಗಿದ್ದಾನೆ.
ಅಥಣಿ(ಏ.05): ಹೃದಯಾಘಾತದಿಂದ ಆಕಸ್ಮಿಕವಾಗಿ ಮೃತಪಟ್ಟತಂದೆಯ ಶವ ಮನೆಯಲ್ಲಿಯೇ ಇದ್ದರೂ ಬಿಇಒ ವಿಶೇಷ ಕಾಳಜಿಯಿಂದ ದುಃಖದಲ್ಲಿರುವ ಮೃತನ ಮಗನನ್ನು ಎಸ್ಸೆಸ್ಸೆಲ್ಸಿಯ ಗಣಿತ ಪರೀಕ್ಷೆ ಬರೆಯಿಸಿರುವ ಘಟನೆ ತಾಲೂಕಿನ ಶೇಗುಣಸಿಯಲ್ಲಿ ಸೋಮವಾರ ನಡೆದಿದೆ.
ಪರಪ್ಪ ಅಂಬಿ(55) ಸೋಮವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದ. ಶೇಗುಣಸಿ ಗ್ರಾಮದ ಶ್ರೀ ಮುರುಗೇಂದ್ರ ಸ್ವಾಮೀಜಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸರ್ವೇಶ ಪರಪ್ಪ ಅಂಬಿ ಪರೀಕ್ಷೆ ಬರೆದ ವಿದ್ಯಾರ್ಥಿಯಾಗಿದ್ದಾನೆ.
ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್..!
ಸೋಮವಾರ ಬೆಳಗಿನ ಜಾವ ಸುದ್ದಿ ತಿಳಿದ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ಮಗುವಿನ ಮನೆಗೆ ಧಾವಿಸಿ ಕುಟುಂಬಕ್ಕೆ ಹಾಗೂ ಮಗುವಿಗೆ ಧೈರ್ಯ ತುಂಬಿ ಪರೀಕ್ಷೆಗೆ ಹಾಜರಾಗಲು ಮನ ಒಲಿಸಿದ್ದಾರೆ. ಮೃತನ ಸಹೋದರನ ಮಗಳಾದ ಭಾವನಾ ನಿಂಗಪ್ಪ ಅಂಬಿ ಸಹ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದು, ಇವಳಿಗೂ ಅಧಿಕಾರಿಗಳು ಧೈರ್ಯ ಹೇಳಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದ್ದಾರೆ.
ಮಧ್ಯಾಹ್ನ ನಡೆದ ಅಂತ್ಯಕ್ರಿಯೆ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಖುದ್ದಾಗಿ ಹಾಜರಾಗಿದ್ದರು. ಮಕ್ಕಳ ಕುಟುಂಬದ ದುಃಖದ ಅಕ್ರಂದನ ಕಂಡು ಭಾವುಕರಾಗಿ ಕಣ್ಣಿರು ಹಾಕಿದ ಘಟನೆ ಜರುಗಿತು. ಈ ಸಮಯದಲ್ಲಿ ವಿದ್ಯಾರ್ಥಿಗಳು ಓದುತ್ತಿರುವ ಶಾಲೆಯ ಪರವಾಗಿ ಶಿಕ್ಷಕರಾದ ಬಿ.ಎನ್.ಪೂಜಾರಿ ಸಹ ಉಪಸ್ಥಿತರಿದ್ದರು.