
ಶಿಗ್ಗಾವಿ(ಮಾ.31): ಒಂದೆಡೆ ಹೆತ್ತು ಹೊತ್ತು, ತುತ್ತು ಉಣಿಸಿದ ತಾಯಿಯ ಉಸಿರು ನಿಂತಿದೆ! ಇನ್ನೊಂದೆಡೆ ಜೀವನದ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ(SSLC) ಪರೀಕ್ಷೆ. ಸುಮಾರು ಹೊತ್ತು ಈ ಸಂದಿಗ್ದತೆಯಲ್ಲಿ ತೊಳಲಾಡಿದ ಪುತ್ರ ಕೊನೆಗೂ ತಾಯಿಯ(Mother) ಅಗಲಿಕೆಯ(Passed Away) ನೋವನ್ನು ಎದೆಯಲ್ಲಿ ಇಟ್ಟುಕೊಂಡೇ ಪರೀಕ್ಷೆ ಎದುರಿಸುವ ಮೂಲಕ ಇಡಿ ಊರಿಗೆ ಊರೇ ಮರುಗುವಂತೆ ಮಾಡಿದ್ದಾನೆ.
ತಾಲೂಕಿನ ಹನುಮರಹಳ್ಳಿ ಬುಧವಾರ ಇಂಥದೊಂದು ಘಟನೆಗೆ ಸಾಕ್ಷಿಯಾಯಿತು. ಗ್ರಾಮದ ಯಶವಂತ ಉಮೇಶ ಸಂಶಿ ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ(Student) ಬೆಳಗ್ಗೆ ಇಂಗ್ಲಿಷ ಪರೀಕ್ಷೆ(Exam) ಬರೆಯಬೇಕಾಗಿತ್ತು. ಆದರೆ, ಇನ್ನೂ ಬೆಳಗಾಗುವ ಮುನ್ನವೇ ಆತನ ತಾಯಿ ಸರಸ್ವತಿ (36) ತೀರಿ ಹೋಗಿದ್ದರು. ಶಿಗ್ಗಾಂವಿ(Shiggoan) ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ಈ ವಿದ್ಯಾರ್ಥಿ ಜೆಎಂಜಿ ಪರೀಕ್ಷಾ ಕೇಂದ್ರದಲ್ಲಿ ದುಃಖದ ನಡುವೆಯೂ ಪರೀಕ್ಷೆ ಎದುರಿಸಿದ್ದಾನೆ.
Kalaburagi SSLC Exam ವಿದ್ಯಾರ್ಥಿಗಳಿಗೆ ಚೀಟಿ ಕೊಡಲು ಗೋಡೆ ಹತ್ತಿ ಸರ್ಕಸ್!
ಸರಸ್ವತಿಗೆ ಮಂಗಳವಾರ ರಾತ್ರಿ ದಿಢೀರನೆ ಅರ್ಧಾಂಗ ವಾಯು ಹೊಡೆಯಿತು. ತಕ್ಷಣ ಶಿಗ್ಗಾಂವಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕೆತ್ಸೆ(Treatment) ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ(Hubballi) ಕಿಮ್ಸ್‌ಗೆ(KIMS) ಕರೆದುಕೊಂಡು ಹೋದರು. ಆದರೆ, ಅಲ್ಲಿ ಚಿಕೆತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಇಂತಹ ದುಃಖದ ಪರಿಸ್ಥಿತಿಯಲ್ಲಿ ದಿಕ್ಕು ತೋಚದಂತಾದ ವಿದ್ಯಾರ್ಥಿ ಯಶವಂತ ಪರೀಕ್ಷೆ ಬರೆಯುವುದನ್ನು ಬಿಟ್ಟು ಕೈಚೆಲ್ಲಿ ಕುಳಿತಿದ್ದ. ಆದರೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗೆ ಧೈರ್ಯ ತುಂಬಿ, ಪರೀಕ್ಷೆ ಎಷ್ಟುಮಹತ್ವದ್ದು ಎಂಬುದನ್ನು ವಿವರಿಸಿ ದುಃಖದಲ್ಲಿಯೂ ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದರು. ಯಶವಂತ ದುಃಖ, ನೋವಿನಲ್ಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದ. ಬಳಿಕ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ.
ಬಡತನದಲ್ಲಿ ಬೆಳೆದ ಜೀವ:
ಯಶವಂತನ ತಂದೆ ಉಮೇಶ ತಮ್ಮ 1 ಎಕರೆ ಭೂಮಿಯಲ್ಲಿ ಕೃಷಿ(Agriculture) ಕಾಯಕದ ಜೊತೆ ಬೇಸಿಗೆಯಲ್ಲಿ ಮೂರು ತಿಂಗಳು ಸಮೀಪದ ಅಡವಿ ಸೋಮಾಪುರದಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಾರೆ. ಪತ್ನಿ ಸರಸ್ವತಿ ಹಾಗೂ ಪುತ್ರ ಯಶವಂತ (10ನೇ ತರಗತಿ), ಪುತ್ರಿ ಅಶ್ವಿನಿ (6ನೇ ತರಗತಿ) ಜೊತೆ ಬಡತನದಲ್ಲಿಯೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಮಕ್ಕಳಿಬ್ಬರೂ ವಿದ್ಯಾವಂತರಾಗಬೇಕೆಂದು ಕನಸು ಕಂಡು ಶಾಲೆಗೆ ಕಳುಹಿಸಿದ್ದರು. ಇಂತಹ ಸಂದರ್ಭದಲ್ಲಿ ಸರಸ್ವತಿ ಇಹಲೋಕ ತ್ಯಜಿಸಿದ್ದಾರೆ.
'ಉತ್ತರ ಪತ್ರಿಕೆ ಕಿತ್ತುಕೊಂಡಿದ್ದೆ ಮಗಳ ಸಾವಿಗೆ ಕಾರಣ' ತಾಯಿಯ ನೋವು
ಮೈಸೂರು: ಲವಲವಿಕೆಯಿಂದ ಪರೀಕ್ಷೆಗೆ ತೆರಳಿದ್ದ ಮಗಳು ಇದ್ದಕ್ಕಿದ್ದಂತೆ ಸಾವಿಗೀಡಾದ ದುಖಃ ತಾಯಿ (Mother)ಜೀವವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಗಳು ತೀರಿಕೊಂಡು ಮೂರು ದಿನ ಕಳೆದರೂ ತಾಯಿ ಮಾತ್ರ ಮಗಳನ್ನು ನೆನೆದು ಅಳುವುದನ್ನು ಮಾತ್ರ ನಿಲ್ಲಿಸಿಲ್ಲ. ಅದೇ ದುಖಃದಲ್ಲಿರುವ ತಾಯಿ ಜೀವ ಶಿಕ್ಷಕರ ಅಜಾಗರೂಕತೆಯೇ ಮಗಳ ಸಾವಿಗೆ ನಾಂದಿ ಎನ್ನುತ್ತಿದೆ.
ಕೋವಿಡ್‌ಗೆ ಬಲಿಯಾದ ಪತಿ: ಕೆಲಸಕ್ಕಾಗಿ SSLC ಪರೀಕ್ಷೆ ಬರೆದ ಪತ್ನಿ
ಹೋಗಿ ಬರುತ್ತೇನೆ ಎಂದವಳು ಶವವಾಗಿ ಬಂದಳು:
ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಬರೆಯುವ ವೇಳೆ ಕುಸಿದುಬಿದ್ದು ಸಾವನ್ನಪ್ಪಿದ (Death) ಅನುಶ್ರೀ ಕುಟುಂಬ ಸದಸ್ಯರ ಸಂಕಟ ಹೇಳತೀರದಾಗಿದೆ. ಎರಡು ದಿನ ಕಳೆದರೂ ಅನುಶ್ರೀ ತಾಯಿ ಲಕ್ಷ್ಮಿ ಮನೆ ಮುಂದೆ ರೋದಿಸುತ್ತಿರುವ ದೃಶ್ಯ ಕರುಳು ಹಿಂಡುತ್ತಿದೆ. ಮಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ತಾಯಿ ಲಕ್ಷ್ಮಿ, ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾಳೆ. ಕೊಠಡಿ ಮೇಲ್ವಿಚಾರಕರು ಬೆದರಿಸದಿದ್ದರೆ ನನ್ನ ಮಗಳು ಸಾಯುತ್ತಿರಲಿಲ್ಲ. ಅಲ್ಲಿಯೇ ಪರೀಕ್ಷೆ ಬರೆಯಲು ಬಿಟ್ಟು ಬಿಟ್ಟಿದ್ರೆ ಹೇಗೋ ಮನೆಗೆ ಬಂದು ಬಿಡುತಿದ್ಲು. ಉತ್ತರ ಪತ್ರಿಕೆ(Answer Paper) ಕಿತ್ತು ಕೊಂಡಿದ್ದರಿಂದಲೇ ಅವಳು ಗಾಬರಿಯಾಗಿ ಈ ರೀತಿ ಸಾವೀಗೀಡಾಗಿದ್ದಾಳೆ ಎಂಬುದು ಅನುಶ್ರೀ ತಾಯಿ ಲಕ್ಷ್ಮಿ ಆರೋಪವಾಗಿದೆ.
ನನ್ನ ಮಗಳು ಒಂದು ತಿಂಗಳಿಂದ ಪರೀಕ್ಷೆ ಬರೆಯಲು ತಯಾರಾಗಿದ್ದಳು. ಬ್ಯಾಗ್ ತೊಳೆದುಕೊಂಡು ಬುಕ್ ಎಲ್ಲ ರೆಡಿ ಮಾಡಿಕೊಂಡಿದ್ಲು. ಬೆಳಿಗ್ಗೆ ಆಟೋ ಹತ್ತಿ ಪರೀಕ್ಷೆ ಬರೆಯಲು ಹೋರಟವಳನ್ನು ಹೆಣವಾಗಿ ಕಳುಹಿಸಿದ್ದಾರೆ ಶಿಕ್ಷಕರು ಎನ್ನುವಾಗ ತಾಯಿ ಕಣ್ಣಲ್ಲ ಗಳಗಳನೆ ಕಣ್ಣೀರು ಸುರಿಯತೊಡಗಿತು. ಅಜ್ಜಿಗೆ ಹೋಗಿ ಬರುತ್ತೇನೆ ಎಂದವರಳು ಹೆಣವಾಗಿ ಬಂದುಬಿಟ್ಟಳು ಎಂದು ಬಿಕ್ಕಿ ಬಿಕ್ಕಿ ಅಳುತಿದ್ದಾರೆ ಮೃತ ಅನುಶ್ರೀ ತಾಯಿ.