Vijayapura: 81ರ ಇಳಿವಯಸ್ಸಲು ಸ್ನಾತ್ತಕೋತ್ತರ ಪರೀಕ್ಷೆ ಬರೆದ ಅಜ್ಜ!

By Suvarna News  |  First Published Mar 30, 2022, 5:11 PM IST
  • ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂದು ಸಾಭೀತು ಮಾಡಿದ ವೃದ್ಧ
  • ಕನ್ನಡಕ-ದೋತಿ ತೊಟ್ಟು ಬಂದ ವೃದ್ಧ, ದಂಗಾದ ಪರೀಕ್ಷಾ ಸಿಬ್ಬಂದಿ
  • ಈಗಾಗಲೇ 4 ಸ್ನಾತ್ತಕೋತ್ತರ ಪದವಿ ಪಡೆದಿರುವ ಅಜ್ಜನಿಂದ 5ನೇ ಪದವಿಗಾಗಿ ಪರೀಕ್ಷೆ

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌  

ವಿಜಯಪುರ (ಮಾರ್ಚ್30) : ಕಲಿಕೆ ಅನ್ನೋದೆ ಹಾಗೇ, ಮನುಷ್ಯನ ಹುಟ್ಟಿನಿಂದ ಸಾವಿನ ತನವು ಕಲಿಕೆ ಅನ್ನೋದು ಮುಗಿಯೊಲ್ಲ. ಆದ್ರೆ 25 ವಯಸ್ಸು ದಾಟಿದ್ರೆ ಮುಗಿತು, ಕಲಿಕೆ ಕೈಬಿಟ್ಟು ಬದುಕು ಕಟ್ಟಿಕೊಳ್ಳೊಕೆ ಓಡಾಡೋರೆ ಹೆಚ್ಚು. ಕಲಿತಾ ಕೂತ್ರೆ ಹೊಟ್ಟೆ ತುಂಬುತ್ತಾ? ಅನ್ನೋರೆ ಜಾಸ್ತಿ. ಯಾವುದಾದ್ರೊಂದು ಡಿಗ್ರಿ ಮುಗಿದ್ರೆ ಸಾಕು ನೌಕರಿ ಹುಡುಕಿಕೊಂಡು ಹೊರಟು ಬಿಡ್ತಾರೆ. ಆದ್ರೆ ವಿಜಯಪುರ (Vijayapura) ಜಿಲ್ಲೆಯ 81 ವರ್ಷದ ಅಜ್ಜನೊಬ್ಬ ಕಲಿಕೆಗೆ, ಶಿಕ್ಷಣ (Education) ಪಡೆಯೋಕೆ ಯಾವುದೇ ವಯಸ್ಸಿನ  ಹಂಗಿಲ್ಲ ಅನ್ನೋದನ್ನ ಸಾಭೀತು ಮಾಡಿ ತೋರಿಸಿದ್ದಾರೆ.

Tap to resize

Latest Videos

ಸ್ನಾತಕೋತ್ತರ ಪದವಿ ಪರೀಕ್ಷೆ ಬರೆದ 81ರ ಅಜ್ಜ!
ಕಲಿಕೆಗೆ ವಯಸ್ಸಿನ ಹಂಗಿಲ್ಲ, ವಯಸ್ಸು ಶಿಕ್ಷಣಕ್ಕೆ ಅಡ್ಡಿಬಾರದು ಎಂಬುದಕ್ಕೆ 81 ವರ್ಷದ ಅಜ್ಜ ಸ್ನಾತಕೋತ್ತರ ಪದವಿ ಪರೀಕ್ಷೆ ಬರೆಯುತ್ತಿರುವುದೇ ಸಾಕ್ಷಿಯಾಗಿದೆ. ವಿಜಯಪುರದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (Indira Gandhi National Open University) ಅಧ್ಯಯನ ಕೇಂದ್ರದ ವಿದ್ಯಾರ್ಥಿಯಾಗಿರುವ ನಿಂಗಯ್ಯ ಒಡೆಯರ (Ningayya Wadeyar) ತಮ್ಮ 81ನೇ ವರ್ಷದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ನಗರದ ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಪ್ರಥಮ ವರ್ಷದ ಎಂಎ ಇಂಗ್ಲಿಷ್ ಪರೀಕ್ಷೆಯನ್ನು ನಿಂಗಯ್ಯ ಒಡೆಯರ ಎದುರಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಅಜ್ಜ ನವಯುವಕನಂತೆ ಪರೀಕ್ಷೆ ಎದುರಿಸಿದ್ದು ವಿಶೇಷ..!

ಕನ್ನಡಕ-ದೋತಿ ತೊಟ್ಟು ಬಂದ ಅಜ್ಜ,  ದಾಖಲೆ ಚೆಕ್‌ ಮಾಡಿದ ಸಿಬ್ಬಂದಿ..!
ಅಜ್ಜ ನಿಂಗಯ್ಯ ಒಡೆಯರ್‌ ಹಸಿರು ರುಮಾಲು, ದಪ್ಪ ಕನ್ನಡಕ, ಬಿಳಿ ಅಂಗಿ ಹಾಗೂ ದೋತಿ ಧರಿಸಿ ಉತ್ಸಾಹದಿಂದಲೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾನೆ. ಇಳಿ ವಯಸ್ಸಲ್ಲು ನಾನ್ಯಾರಿಗೂ ಕಮ್ಮಿ ಇಲ್ಲ ಅನ್ನೋ ಹಾಗಿತ್ತು ಅಜ್ಜನ ಗತ್ತು. ಅಜ್ಜ ಪರೀಕ್ಷಾ ಕೇಂದ್ರ ಬರ್ತಿದ್ದಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಒಂದು ಕ್ಷಣ ದಂಗಾದ್ರು. ಯಾವುದಕ್ಕು ಅನುಮಾನಗೊಂಡು ಒಂದು ಅಜ್ಜ ನಿಂಗಯ್ಯನ ದಾಖಲೆಗಳನ್ನ ಪರಿಶೀಲಿಸಿದ್ದಾರೆ. ದಾಖಲೆ, ಹಾಲ್‌ ಟಿಕೇಟ್‌ ಎಲ್ಲವು ಸರಿಯಾಗಿರೋದನ್ನ ಕಂಡು ಸಿಬ್ಬಂದಿ ಹುಬ್ಬೇರಿಸಿದ್ದಾರೆ. ಕೈ ನಡುಗುವ ವಯಸ್ಸಿಲ್ಲೂ ಸರಳವಾಗಿ ಪೆನ್ನು ಹಿಡಿದು ಪ್ರಶ್ನೆಗೆ ಉತ್ತರ ಬಿಡಿಸುವ ನಿಂಗಯ್ಯ ಇನ್ನುಳಿದ ಪರೀಕ್ಷಾರ್ಥಿಗಳಿಗೆ ನಿಬ್ಬೆರಗಾಗಿಸುವಂತೆ ಮಾಡಿತು.

RBI RECRUITMENT 2022 : ಮ್ಯಾನೇಜರ್ ಹುದ್ದೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೇಮಕಾತಿ

4 ಸ್ನಾತ್ತಕೋತ್ತರ ಪದವಿ ಪಡೆದಿರೋ ನಿಂಗಯ್ಯಜ್ಜ..!
ಮೂಲತಃ ಬಾಗಲಕೋಟೆ ಜಿಲ್ಲೆ ಇಲಕಲ್ ತಾಲೂಕಿನ ಗುಡೂರ ಗ್ರಾಮದವರಾದ ನಿಂಗಯ್ಯ ಆರೋಗ್ಯ ಇಲಾಖೆಯ ನಿವೃತ್ತ ನೌಕರರು. ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯದಿಂದ ಹಾಗೂ ಇಗ್ನೋದಿಂದ ಸೇರಿ 4 ಸ್ನಾತಕೋತ್ತರ ಪದವಿ ಪೂರೈಸಿರುವ ಇವರು ಇದೀಗ 5ನೇ ಸ್ನಾತಕೋತ್ತರ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಕೇವಲ ನೌಕರಿಗಾಗಿ, ಅಂಕಗಳಿಗಾಗಿ ಕಲಿಯುವವರ ನಡುವೆ ನಿಂಗಯ್ಯ ಒಡೆಯರ್‌ ಅಜ್ಜ ಜ್ಞಾನಾರ್ಜನೆಗಾಗಿ ಕಲಿಯುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ.

ಮಗಳ ಜೊತೆಗೆ ಪರೀಕ್ಷೆ ಬರೆದ 65 ವರ್ಷದ ನಿವೃತ್ತ ಉಪನ್ಯಾಸಕ...!
ಇನ್ನೊಂದೆಡೆ ಸಿಂದಗಿ ಪರಶುರಾಮ ಮಡಿವಾಳರ ಎಂಬ 65ವರ್ಷದ ನಿವೃತ್ತ ಉಪನ್ಯಾಸಕ ತಮ್ಮ ಮಗಳಾದ ರಾಜೇಶ್ವರಿ ಮಡಿವಾಳರ ಜೊತೆಗೆ ಒಂದೇ ಕೊಠಡಿಯಲ್ಲೇ ಕುಳಿತು ಒಂದೇ ತರಗತಿಯ ಪರೀಕ್ಷೆ ಬರೆದಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಪರೀಕ್ಷಾರ್ಥಿ ನಿವೃತ್ತ ಉಪನ್ಯಾಸಕ ಪರಶುರಾಮ ಮಡಿವಾಳರ ಹಾಗೂ ಅವರ ಮಗಳು ರಾಜೇಶ್ವರಿ ಎಂಎ ದ್ವಿತೀಯ ವರ್ಷದ ಇಂಗ್ಲಿಷ್ ಪರೀಕ್ಷೆ ಬರೆಯುತ್ತಿದ್ದಾರೆ. ಇವರು ಸಿಂದಗಿಯ ಆರ್. ಡಿ. ಪಾಟೀಲ ಕಾಲೇಜ್‌ನ ನಿವೃತ್ತ ಪ್ರಾಚಾರ್ಯರಾಗಿದ್ದು ಇವರ ಕಲಿಕಾ ಆಸಕ್ತಿ ಹುಮ್ಮಸ್ಸು ಮೂಡಿಸಿತು.

KRIDL Recruitment 2022: ವಿವಿಧ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

ಕಳೆದ ಡಿಸೆಂಬರ್‌ ನಲ್ಲೆ ಪರೀಕ್ಷೆ ಎದುರಿಬೇಕಿದ್ದ ವೃದ್ಧರು..!
ಕಳೆದ ಡಿಸೆಂಬರ್ ನಲ್ಲಿಯೇ ಅಜ್ಜ ನಿಂಗಯ್ಯ ಎಕ್ಸಾಂ ಬರೆಯಬೇಕಿತ್ತು. ಆದ್ರೆ ಇಗ್ನೋ ದೂರ ಶಿಕ್ಷಣದ ಪರೀಕ್ಷೆಗಳು ಕೋವಿಡ್ ಕಾರಣದಿಂದ ಮುಂದುಡಲ್ಪಟ್ಟಿದ್ದವು. ಇದೀಗ ಮಾರ್ಚ್ 4ಕ್ಕೆ ಪರೀಕ್ಷೆಗಳು ಆರಂಭವಾಗಿದ್ದು, ಏಪ್ರಿಲ್ 11ರ ವರೆಗೆ ನಡೆಯಲಿವೆ. ಈ ಬಾರಿಯ ಪರೀಕ್ಷೆಯಲ್ಲಿ 81ರ ನಿವೃತ್ತ ನೌಕರ ಛಲದಿಂದ ಪರೀಕ್ಷೆ ಬರೆಯುತ್ತಿರುವುದು ಹಾಗೂ 65ರ ನಿವೃತ್ತ ಉಪನ್ಯಾಸಕ ತನ್ನ ಮಗಳೊಂದಿಗೆ ಎಕ್ಸಾಂ ಎದುರಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.

ಅಧ್ಯಯನ ಕೇಂದ್ರದ ಆಯೋಜಕರಲ್ಲು ಮೂಡಿದ ಹರ್ಷ..!
ತಮ್ಮ ನಿವೃತ್ತಿ ಜೀವನದಲ್ಲಿ ಜ್ಞಾನಾರ್ಜನೆಗಾಗಿ ವಿದ್ಯಾಭ್ಯಾಸ ಮುಂದುವರಿಸಿರುವ ಈ ಹಿರಿಯರ ಕಲಿಕಾಸಕ್ತಿ ಕಂಡು ಇಗ್ನೋ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಮಂಜುನಾಥ ಕೋರಿ, ಪ್ರಾಚಾರ್ಯ ಡಾ. ಭಾರತಿ ವೈ ಖಾಸನೀಸ್, ಸಂಸ್ಥೆಯ ಆಡಳಿತಾಧಿಕಾರಿಗಳು ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರು ಹರ್ಷ ವ್ಯಕ್ತಪಡಿಸಿದ್ದಾರೆ.

click me!