ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಪ್ರವೇಶ ಶುರು: ಮಠದ ಶಾಲೆ ದಾಖಲಾತಿಗೆ ವಿದ್ಯಾರ್ಥಿಗಳ ಸರತಿ

By Govindaraj SFirst Published May 19, 2022, 2:16 AM IST
Highlights

ತ್ರಿವಿಧ ದಾಸೋಹದ ಖ್ಯಾತಿಯ ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಜ್ಯದ ಮೂಲೆ ಮೂಲೆಯಿಂದ ಬಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಶೈಕ್ಷಣಿಕ ಪ್ರವೇಶಕ್ಕೆ ಮುಂದಾಗಿದ್ದಾರೆ.

ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು (ಮೇ.19): ತ್ರಿವಿಧ ದಾಸೋಹದ ಖ್ಯಾತಿಯ ಸಿದ್ದಗಂಗಾ ಮಠದಲ್ಲಿ (Shree Siddaganga Math) ವಿದ್ಯಾರ್ಥಿಗಳ (Students) ಪ್ರವೇಶ ಪ್ರಕ್ರಿಯೆ (Admission) ಶುರುವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಜ್ಯದ (Karnataka) ಮೂಲೆ ಮೂಲೆಯಿಂದ ಬಂದ ವಿದ್ಯಾರ್ಥಿಗಳು ಹಾಗೂ ಪೋಷಕರು (Parents) ಶೈಕ್ಷಣಿಕ ಪ್ರವೇಶಕ್ಕೆ ಮುಂದಾಗಿದ್ದಾರೆ. ಈ ವರ್ಷವೂ ಕೂಡ ಹತ್ತು ಸಾವಿರ ವಿದ್ಯಾರ್ಥಿ ದಾಖಲಾತಿ ನಿರೀಕ್ಷೆಯಿದೆ.

ನಡೆದಾಡುವ ದೇವರ ಕಾಯಕ ಕ್ಷೇತ್ರ, ಬಡ ವಿದ್ಯಾರ್ಥಿಗಳ ಉಜ್ವಲ‌ಭವಿಷ್ಯದ ಆಶಾ ಕಿರಣ ಸಿದ್ದಗಂಗಾ ಮಠದಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಶುರುವಾಗಿದೆ. ಎರಡು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತುಮಕೂರಿನಿಂದ ಚಾಲನೆ ನೀಡಿದ್ದರು, ಈ ಬೆನ್ನಲೆ ಸಿದ್ದಗಂಗಾ ಮಠದಲ್ಲಿ ಪ್ರವೇಶ ಪಡೆಯಲು ಮಕ್ಕಳು ಮುಗಿ ಬಿದ್ದಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಸಾವಿರಾರು ಪೋಷಕರು ಮಕ್ಕಳನ್ನು ಮಠಕ್ಕೆ ಸೇರಿಸಲು ಮುಂದಾಗಿದ್ದಾರೆ. 

Tumakuru: ಶಾಲಾ ಮಕ್ಕಳೊಂದಿಗೆ ಸಿಎಂ ಬೊಮ್ಮಾಯಿ ಸಂವಾದ: ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ವಿದ್ಯಾರ್ಥಿನಿ ಚೈತನ್ಯ!

ಈ ಸಂಬಂಧ ಮಠ ಆಡಳಿತ ಕಚೇರಿಯಲ್ಲಿ ಅರ್ಜಿ ಪಡೆದು, ಸಿದ್ದಲಿಂಗಸ್ವಾಮೀಜಿಯ ಸಮುಖದಲ್ಲಿ ಮಠಕ್ಕೆ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಕಟ್ಟುನಿಟ್ಟಿನ ಶಿಸ್ತುಬದ್ಧ ಜೀವನ ರೂಪಿಸುವ ಮಠ: ಮಠದಲ್ಲಿ ಮಕ್ಕಳಿಗೆ ಕೇವಲ ಶೈಕ್ಷಣಿಕ ಚಟುವಟಿಕೆಯಷ್ಟೇ ಅಲ್ಲದೆ, ಸ್ವಯಂ ಜೀವನ ನಿರ್ವಹಣೆ, ಕೃಷಿ ಚಟುವಟಿಕೆ, ಪ್ರಾರ್ಥನೆ ಹೀಗೆ ಪಠ್ಯೇತರ ಚಟುವಟಿಕೆ ಮೂಲಕ ಮಕ್ಕಳನ್ನು ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತಾರೆಂಬ ಭರವಸೆ ಪೋಷಕರದ್ದು. ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೂ, ದಕ್ಷಿಣ ಕನ್ನಡದಿಂದ ಹಿಡಿದು ಬಳ್ಳಾರಿವರೆಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಮಕ್ಕಳು ಸಿದ್ದಗಂಗಾ ಮಠಕ್ಕೆ ಓದುವ ಸಲುವಾಗಿ ಆಗಮಿಸುತ್ತಾರೆ. 

Tumakuru ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ವಾಸನೆ

ಪ್ರತಿ ವರ್ಷ 10 ಸಾವಿರ ಮಕ್ಕಳನ್ನು ಮಠದ ಶಾಲೆಗೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಈ ಬಾರಿಯ ಮಕ್ಕಳ ಪ್ರಮಾಣ ನೋಡಿದರೆ 10 ಸಾವಿರಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಪಡೆಯುವ ಸಾಧ್ಯತೆಯಿದೆ. ಬರುವ ಬಹುತೇಕ ಮಕ್ಕಳನ್ನು ಮಠಕ್ಕೆ ಸೇರಿಸಿಕೊಳ್ಳುತ್ತೇವೆ. ನಮ್ಮ ಮೂಲಭೂತ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ದಾಖಲಾತಿ ನೀಡುತ್ತೇವೆ ಎಂದು ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ. ಮಠದಲ್ಲಿ ಓದುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಊಟ, ಶಿಕ್ಷಣವನ್ನು ಸಂಪೂರ್ಣವಾಗಿ ನೀಡುತ್ತಾರೆ. ನೂರಾರು ವರ್ಷಗಳಿಂದ ಬಡ ಮಕ್ಕಳಿ ಪಾಲಿನ ಆಶಾ ಕಿರಣವಾಗಿರುವ ಸಿದ್ದಗಂಗಾ ಮಠಕ್ಕೆ ಸೇರಲು ವಿದ್ಯಾರ್ಥಿಗಳು ಉತ್ಸುಕರಾಗಿದ್ದಾರೆ.‌

click me!