ಶಾಲೆ ಮುಖ್ಯಸ್ಥರ ನಿರ್ಲಕ್ಷ್ಯ: ಹಾಲ್ ಟಿಕೆಟ್ ಸಿಗದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರದಾಟ

By Girish GoudarFirst Published Mar 31, 2023, 9:57 AM IST
Highlights

ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಗದೆ ಸಮಸ್ಯೆ ಎದುರಿಸಿದ ಘಟನೆ ಲಗ್ಗೆರೆಯಲ್ಲಿರುವ ಸೆಂಟ್ ಮೇರಿಸ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದಿದೆ. 

ಬೆಂಗಳೂರು(ಮಾ.31): ಇಂದು ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಹೀಗಾಗಿ ಮಕ್ಕಳು ಕೂಡ ಪರೀಕ್ಷೆಯನ್ನ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಗದೆ ಸಮಸ್ಯೆ ಎದುರಿಸಿದ ಘಟನೆ ಲಗ್ಗೆರೆಯಲ್ಲಿರುವ ಸೆಂಟ್ ಮೇರಿಸ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದಿದೆ. 

ಲಗ್ಗೆರೆಯಲ್ಲಿರುವ ಸೆಂಟ್ ಮೇರಿಸ್ ಪಬ್ಲಿಕ್ ಶಾಲೆ ಮುಖ್ಯಸ್ಥರು ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಒಟ್ಟು 8 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಕ್ಕಿಲ್ಲ. ಇದರಿಂದ ಅಕ್ರೋಷಗೊಂಡ ಪೋಷಕರು ಶಾಲೆಯ ಮುಖ್ಯಸ್ಥರನ್ನ ತೀವ್ರ ತರಾಟೆಗೆ ತೆದೆದುಕೊಂಡಿದ್ದಾರೆ. 

SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್, ಈ ಬಾರಿಯೂ 10 % ಗ್ರೇಸ್ ಮಾರ್ಕ್ಸ್! ಯಾವೆಲ್ಲ ವಿಷಯಕ್ಕೆ ಸಿಗಲಿದೆ?

ಇಂದು ಪರೀಕ್ಷೆ ಇರುವುದರಿಂದ ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿಗಳು ಪರದಾಡಿದ್ದಾರೆ. ಅನುಮತಿ ಇಲ್ಲದೆ ಶಾಲಾ ಆಡಳಿತ ‌ಮಂಡಳಿ ಶಾಲೆ ನಡೆಸುತ್ತಿದೆ ಅಂತ ತಿಳಿದು ಬಂದಿದೆ. 1 ರಿಂದ 8 ನೇ ತರಗತಿವರೆಗೆ ‌ಮಾತ್ರ ಅನುಮತಿ ಇದೆ. ಆದ್ರೆ 9 ಹಾಗೂ 10 ನೇ ತರಗತಿಯವರೆಗೆ ಅನಧಿಕೃತವಾಗಿ ಶಾಲೆ ನಡೆಸಲಾಗುತ್ತಿದೆ ಅಂತ ಆರೋಪಿಸಲಾಗಿದೆ. 

ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದ್ರೂ ಕೂಡ ಹಾಲ್‌ ಟಿಕೆಟ್ ನೀಡದೇ ನಿರ್ಲಕ್ಷ ವಹಿಸಲಾಗಿದೆ. ಎಂಟು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಗದೇ ಇದೀಗ ಅತಂತ್ರರಾಗಿದ್ದಾರೆ. 

ವಿದ್ಯಾರ್ಥಿ ಜೊತೆ ಈ ಖಾಸಗಿ ಶಾಲೆ ಚೆಲ್ಲಾಟವಾಡುತ್ತಿದೆ ಅಂತ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಲಾ ಹೆಡ್ ಮಿಸ್ ಅವರು, ಸಪ್ಲಿಮೆಂಟರಿ ಪರೀಕ್ಷೆ ಬರೆಸುತ್ತೇವೆ ಅಂತ ಬೇಜವಾಬ್ದಾರಿಯಾಗಿ ಹೇಳಿಕೆ ನೀಡಿದ್ದಾರೆ. 

click me!