ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದ್ದು, ಇನ್ನು 3-4 ದಿನಗಳಲ್ಲಿ ಫಲಿತಾಂಶದ ಕಂಪ್ಯೂಟರೀಕರಣ ನಡೆಯಲಿದೆ.
ಬೆಂಗಳೂರು (ಮೇ.06): ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದ್ದು, ಇನ್ನು 3-4 ದಿನಗಳಲ್ಲಿ ಫಲಿತಾಂಶದ ಕಂಪ್ಯೂಟರೀಕರಣ ನಡೆಯಲಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಮೇ 10ರ ಮತದಾನಕ್ಕೂ ಮೊದಲೇ, ಸಾಧ್ಯವಾಗದಿದ್ದರೆ ಮತದಾನದ ನಂತರ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಮೇ 10ಕ್ಕೆ ಮೊದಲೇ ನೀಡಲಾಗುತ್ತದೆಯೇ? ಅಥವಾ ಮತದಾನ ದಿನದ ನಂತರ ನೀಡಲಾಗುವುದೇ ಎಂಬುದನ್ನು ಇನ್ನು ಒಂದೆರಡು ದಿನಗಳಲ್ಲಿ ಅಂತಿಮಗೊಳಿಸಿ ಅಧಿಕೃತವಾಗಿ ಪ್ರಕಟಿಸುವುದಾಗಿ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಹೇಳುವ ಪ್ರಕಾರ, ಮೌಲ್ಯಮಾಪನ ಕಾರ್ಯ ಶುಕ್ರವಾರಕ್ಕೆ ಪೂರ್ಣಗೊಂಡಿದೆ. ಮಕ್ಕಳ ಫಲಿತಾಂಶವನ್ನು ಕಂಪ್ಯೂಟರ್‌ನಲ್ಲಿ ದಾಖಲಿಸುವ ಕೆಲಸಕ್ಕೆ ಇನ್ನು ಮೂರು- ನಾಲ್ಕು ದಿನ ಬೇಕಾಗುತ್ತದೆ. ತಂಡಗಳನ್ನು ಮಾಡಿಕೊಂಡು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇವೆ. ಮತದಾನದ ದಿನಕ್ಕೂ ಮೊದಲೇ ಫಲಿತಾಂಶ ಪ್ರಕಟಿಸಬೇಕೆಂಬುದು ನಮ್ಮ ಇಚ್ಛೆ. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಅಂದುಕೊಂಡಂತೆ ನಡೆದರೆ ಮೇ 9ರಂದೇ ಫಲಿತಾಂಶ ನೀಡುತ್ತೇವೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದರೆ ಮೇ 13ರ ಚುನಾವಣಾ ಫಲಿತಾಂಶಕ್ಕೂ ಮುನ್ನ ಅಂದರೆ ಮೇ 11 ಇಲ್ಲವೇ 12ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಚುನಾವಣೆ ಎಫೆಕ್ಟ್: ರಾಜ್ಯದಲ್ಲಿ ಮದ್ಯಕ್ಕೆ 2.5 ಪಟ್ಟು ಡಿಮ್ಯಾಂಡ್, ಮದ್ಯ ಸೇವನೆಗೆ ಮುಗಿ ಬೀಳುತ್ತಿರುವ ಜನ
20 ಸಾವಿರಕ್ಕೆ ಎಸ್ಸೆಸ್ಸೆಲ್ಸಿ, ಪಿಯು ಅಂಕಪಟ್ಟಿ ಬಿಕರಿ: ಸಾರ್ವಜನಿಕರಿಗೆ .4 ಸಾವಿರದಿಂದ .20 ಸಾವಿರಕ್ಕೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ನಕಲಿ ಅಂಕಪಟ್ಟಿಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿದ ಸಿಸಿಬಿ ಪೊಲೀಸರು, ಈ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಯ ಮೂವರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ ವಿದ್ಯಾನಗರದ ಪ್ರಭುರಾಜ ಹೊಸಪೇಟೆ, ಕನಕಪುರ ರಸ್ತೆ ಜರಗನಹಳ್ಳಿ ಎಂ.ಎಸ್.ಲೇಔಟ್ ಮೈಲಾರಿ ಅಲಿಯಾಸ್ ಮೈಲಾರಿ ಪಾಟೀಲ ಹಾಗೂ ಅರಕೆರೆಯ ಡಾಕ್ಟರ್ಸ್ ಲೇಔಟ್ ನಿವಾಸಿ ಮೊಹಮದ್ ತೈಹಿದ್ ಅಹಮದ್ ಬಂಧಿತರಾಗಿದ್ದು, ಆರೋಪಿಗಳಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ 70 ನಕಲಿ ಅಂಕ ಪಟ್ಟಿಗಳು, ನೋಂದಣಿ ಸಂಖ್ಯೆ, ವಿದ್ಯಾರ್ಥಿ ಹೆಸರು ಮುದ್ರಿಸದ 190 ಅಂಕಪಟ್ಟಿ, 7100 ಖಾಲಿ ಅಂಕಪಟ್ಟಿ, 5500 ಉತ್ತರ ಪತ್ರಿಕೆಗಳು, 25 ಅಡ್ಮಿಷನ್ ರಿಜಿಸ್ಟರ್‌ಗಳು ಹಾಗೂ 4 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ.
ಸುಳ್ಳು ಗ್ಯಾರಂಟಿ, ಓಲೈಕೆಯೇ ‘ಕೈ’ ನೀತಿ, ಕಾಂಗ್ರೆಸ್ಸಿನ ಭರವಸೆಗಳು ಹಾಸ್ಯಾಸ್ಪದ: ರಾಜೀವ್ ಚಂದ್ರಶೇಖರ್
ಕೆಲ ದಿನಗಳ ಹಿಂದೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಚಿನ್ ಎಂಬಾತನಿಗೆ .1.8 ಲಕ್ಷ ಪಡೆದು ಹೊರ ರಾಜ್ಯದ ಪ್ರತಿಷ್ಠಿತ ವಿವಿ ಹೆಸರಿನಲ್ಲಿ ನಕಲಿ ಅಂಕ ಪಟ್ಟಿಯನ್ನು ಮೈಲಾರಿ ಪಾಟೀಲ್ ನೀಡಿದ್ದ. ಬಳಿಕ ಉದ್ಯೋಗ ಅರ್ಜಿ ಸಲ್ಲಿಸಿದಾಗ ತನ್ನ ಶೈಕ್ಷಣಿಕ ಪ್ರಮಾಣ ಪತ್ರಗಳು ನಕಲಿ ಎಂಬುದು ಆತನಿಗೆ ಗೊತ್ತಾಗಿದೆ. ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಸಿಸಿಬಿ, ಆರೋಪಿಗಳ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.