ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭವಾಗಲಿದೆ. ಕೊರೋನಾ 2ನೇ ಅಲೆ ಭೀತಿಯ ನಡುವೆ ಕ್ಲಾಸ್ ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಬೆಂಗಳೂರು, (ಡಿ.19): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಐದಾರು ತಿಂಗಳು ಕಾಲ ಬಂದ್ ಆಗಿದ್ದ ಶೈಕ್ಷಣಿಕ ಚಟುವಟಿಕೆಗಳು ಹಂತ-ಹಂತವಾಗಿ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ.
ಇದೀಗ ಇದೇ ಜನವರಿ 1ರಿಂದ 10ನೇ ತರಗತಿ ಹಾಗೂ 12ನೇ ತರಗತಿ ಆರಂಭಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಂಬಂಧ ಇಂದು (ಶನಿವಾರ) ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ಜ.1ರಿಂದ ರಿಂದ 6ರಿಂದ 9ನೇ ತರಗತಿಗೆ ವಿದ್ಯಾಗಮ ಆರಂಭವಾಗಲಿದೆ. ಇನ್ನು ಅಂದಿನಿಂದ 10 ಹಾಗೂ 12ನೇ ತರಗತಿ ಕ್ಲಾಸ್‌ಗಳು ಸಹ ಪ್ರಾರಂಭವಾಗಲಿವೆ ಎಂದು ಹೇಳಿದರು.
ಹೊಸ ವರ್ಷಕ್ಕೆ 10, 12ನೇ ಕ್ಲಾಸ್ ಆರಂಭಕ್ಕೆ ಸರ್ಕಾರ ಚಿಂತನೆ
ಇನ್ನು ಹದಿನೈದು ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಇತರ ತರಗತಿ ಪ್ರಾರಂಭಿಸುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.
2021ರ ಜನವರಿ 1 ರಿಂದ, 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಹಾಗೂ 6 ರಿಂದ 9ನೇ ತರಗತಿಗೆ ವಿದ್ಯಾಗಮ ಪ್ರಾರಂಭ; ಹದಿನೈದು ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಇತರ ತರಗತಿ ಪ್ರಾರಂಭಿಸುವ ಕುರಿತು ನಿರ್ಧಾರ. ಮುಖ್ಯಮಂತ್ರಿ ಅಧ್ಯಕ್ಷತೆಯ ಇಂದಿನ ಸಭೆಯಲ್ಲಿ ತೀರ್ಮಾನ.
— CM of Karnataka (@CMofKarnataka)ಸುರೇಶ್ ಕುಮಾರ್ ಮಾತು
SSLC, ದ್ವಿತೀಯ PUCಗೆ ತರಗತಿ ಆರಂಭದ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೋರ್ಡ್ ಎಕ್ಸಾಂ ಇರುವುದರಿಂದ ದ್ವಿತೀಯ ಪಿಯುಸಿ, SSLC ತರಗತಿ ಪ್ರಾರಂಭ ಮಾಡಲು ಸಲಹೆ ಕೊಟ್ಟಿದ್ದಾರೆ. ತರಗತಿಗಳನ್ನು ಪ್ರಾರಂಭ ಮಾಡುವುದಕ್ಕೆ ನಿರ್ಧರಿಸಿದ್ದೇವೆ. ಯಾವ ರೀತಿ ತರಗತಿ, ಎಷ್ಟು ಅವಧಿ ಎಂದು ನಿರ್ಧಾರ ಮಾಡಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.
'ಖಾಸಗಿ ಶಾಲೆಗಳೂ ಕೂಡ ವಿದ್ಯಾಗಮ ಮಾಡಬೇಕು'
ಜ.1ರಿಂದ 6 ರಿಂದ 9ನೇ ತರಗತಿಗೆ ವಿದ್ಯಾಗಮ ಆರಂಭವಾಗುವುದು. ಶಾಲಾ ಆವರಣಗಳಲ್ಲಿ ಮಾತ್ರ 3 ದಿನ ವಿದ್ಯಾಗಮಕ್ಕೆ ವ್ಯವಸ್ಥೆ ಮಾಡಲಾಗುವುದು. ಆದರೆ, ವಿದ್ಯಾಗಮಕ್ಕೆ ಬರಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಶೀತ, ನೆಗಡಿ ಇಲ್ಲ ಎಂದು ಪತ್ರ ನೀಡಬೇಕು. ಜೊತೆಗೆ, ವಿದ್ಯಾಗಮಕ್ಕೆ ಬಳಸುವ ಕೊಠಡಿಗಳನ್ನ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಎಲ್ಲ ಸರ್ಕಾರಿ ಶಾಲೆಗಳ ಕೊಠಡಿಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಖಾಸಗಿ ಶಾಲೆಗಳೂ ಕೂಡ ವಿದ್ಯಾಗಮ ಮಾಡಬೇಕು. ಶಿಕ್ಷಣ ಕಲಿಕೆಗೆ ಖಾಸಗಿ ಶಾಲೆಗಳೂ ಕ್ರಮ ಕೈಗೊಳ್ಳಬೇಕು ಎಂದು ಸುರೇಶ್ ಕುಮಾರ್ ವಿವರಿಸಿದರು.