ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರದ ಜತೆಗೆ ಮುಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಯೋಜನೆ ಸಿದ್ಧಪಡಿಸುತ್ತಿದ್ದು, ಅಜೀಂ ಪ್ರೇಮ್‌ಜೀ, ಇನ್ಫೋಸಿಸ್‌ನಂಥ ಖಾಸಗಿ ಸಂಸ್ಥೆಗಳಿಂದ ಶಿಕ್ಷಕರಿಗೆ ತರಬೇತಿ ಕೊಡಿಸಲಾಗುವುದು: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ(ಅ.28): ಶಾಲಾ ಮಕ್ಕಳಿಗೆ ನ.23ರಿಂದ ಮೊಟ್ಟೆಯ ಜತೆಗೆ ವಿಶೇಷ ಪೌಷ್ಠಿಕಾಂಶವುಳ್ಳ ಆಹಾರ ನೀಡಲು ಸಿದ್ಧತೆ ನಡೆಯುತ್ತಿದೆ ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರದ ಜತೆಗೆ ಮುಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಯೋಜನೆ ಸಿದ್ಧಪಡಿಸುತ್ತಿದ್ದು, ಅಜೀಂ ಪ್ರೇಮ್‌ಜೀ, ಇನ್ಫೋಸಿಸ್‌ನಂಥ ಖಾಸಗಿ ಸಂಸ್ಥೆಗಳಿಂದ ಶಿಕ್ಷಕರಿಗೆ ತರಬೇತಿ ಕೊಡಿಸಲಾಗುವುದು. ಇದರ ಜತೆಗೆ ಪಠ್ಯಪುಸ್ತಕ ಗಾತ್ರ ಕಡಿಮೆ ಆಗಬೇಕು ಎನ್ನುವ ನಿಟ್ಟಿನಲ್ಲೂ ಚರ್ಚೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
undefined
ಮುಳುಗಡೆ ರೈತರ ಬೆನ್ನಿಗೆ ನಿಲ್ಲುವ ಅವಕಾಶ ನನ್ನ ಭಾಗ್ಯ: ಸಚಿವ ಮಧು ಬಂಗಾರಪ್ಪ
20 ಸಾವಿರ ಶಿಕ್ಷಕರ ನೇಮಕಾತಿ
ಮುಂದಿನ ವರ್ಷ 20 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. 20 ಸಾವಿರದಲ್ಲಿ 15 ಸಾವಿರ ರೆಗ್ಯುಲರ್ ಟೀಚರ್ ಹಾಗೂ 5 ಸಾವಿರ ಸಂಗೀತ, ಪಿಇ ಶಿಕ್ಷಕರು ಆಗಿರಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ, ಕಲ್ಯಾಣ ಕರ್ನಾಟಕದಲ್ಲಿ 9 ಸಾವಿರ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ. ಇನ್ನೂ 4 ಸಾವಿರ ಶಿಕ್ಷಕರ ನೇಮಕ ಆಗಬೇಕಿದೆ. ಆದರೆ ಕೆಲವರು ನೇಮಕಾತಿಗೆ ಸಂಬಂಧಿಸಿ ಕೋರ್ಟ್‌ಗೆ ಹೋಗಿರುವುದರಿಂದ ಸಮಸ್ಯೆಯಾಗಿದೆ. ಅ.30ರಂದು ಈ ಪ್ರಕರಣ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ. ಇದು ಇತ್ಯರ್ಥವಾದರೆ 4 ಸಾವಿರ ಶಿಕ್ಷಕರ ನೇಮಕ ಆಗಲಿದೆ ಎಂದು ತಿಳಿಸಿದರು.
ಶಿಶುಪಾಲನಾ ಕೇಂದ್ರ ಸ್ಥಗಿತ ಮಾಡುತ್ತಾ ಸರ್ಕಾರ? :
ಗ್ಯಾರಂಟಿಯಿಂದ ಗದ್ದುಗೆ ಹಿಡಿದ ಕಾಂಗ್ರೆಸ್ ಅನುದಾನಗಳಿಗೆ ಕತ್ತರಿ ಹಾಕ್ತಿದೆ. ಶಾಸಕರ ಕ್ಷೇತ್ರಗಳಿಗೂ ಹಣ ಬಿಡುಗಡೆ ವಿಳಂಬವಾಗ್ತಿದೆ. ಈಗ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಯನ್ನು ಮಾಡುತ್ತಿದೆ. ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಈಗ ಕತ್ತರಿ ಹಾಕಲು ಮುಂದಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಕೂಲಿ ಕಾರ್ಮಿಕ ಮಕ್ಕಳ ಶಿಶುಪಾಲ ಕೇಂದ್ರಗಳಿಗೆ ಬೀಗ ಜಡಿಯಲು ನಿರ್ಧಾರಿಸಿದೆ ಅನ್ನೋದು ಆರೋಪ. ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಶಿಶುಪಾಲನ ಕೇಂದ್ರ ತೆರೆಯಲಾಗಿತ್ತು. ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣ ಸಿಗಬೇಕು ಅಂತಾ ಆದ್ಯತೆ ನೀಡಲಾಗಿತ್ತು.ಜೊತೆಗೆ ಇದನ್ನು 3 ವರ್ಷಗಳಿಂದ ಎಂಪೈರ್ ಫೌಂಡೇಶನ್ ಸಂಸ್ಥೆಗೆ ಗುತ್ತಿಗೆ ಸಹ ನೀಡಿತ್ತು. ಆದ್ರೆ ಈಗ ಗುತ್ತಿಗೆ ಅವಧಿ ನವೆಂಬರ್ 30ಕ್ಕೆ ಮುಗಿಯಲಿದ್ದು..ಡಿಸೆಂಬರ್ 1 ರಿಂದಲೇ ಎಂಪೈರ್ ಫೌಂಡೇಶನ್ ಸಂಸ್ಥೆ ಶಿಶುಪಾಲನ ಕೇಂದ್ರ ಮುಚ್ಚಲು ಮುಂದಾಗಿದೆ. ಇದ್ರಿಂದ ಕಾರ್ಮಿಕರ ಮಕ್ಕಳಿಗೆ ಆತಂಕ ಎದುರಾಗಿದೆ.