*ಜೆಸಿನ್ ಕೇರಳದ ಫುಟ್ಬಾಲ್ ಕ್ರೀಡೆಯಲ್ಲಿ ಒಡಮೂಡಿರುವ ಹೊಸ ತಾರೆ
*ಆಟೋ ಡ್ರೈವರ್ ಅಪ್ಪನ ಕನಸು ನನಸು ಮಾಡಿದ ಫುಟ್ಬಾಲ್ ಪಟು
*ಸಂತೋಷ್ ಟ್ರೋಫಿಯಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದು ಐದು ಗೋಲು
ಪೋಷಕರಿಗೆ ತಮ್ಮ ಮಕ್ಕಳು ಏನಾದ್ರೂ ಸಾಧನೆ ಮಾಡಬೇಕೆಂಬ ಕನಸು ಇದ್ದೇ ಇರುತ್ತೆ. ಮಕ್ಕಳಿಗೆ ಬೆನ್ನುಲುಬಾಗಿ ನಿಲ್ಲುವ ಮೂಲಕ ಅವರ ಗುರಿ ತಲುಪಲು ಸಹಕಾರಿ ಆಗುತ್ತಾರೆ. ಕ್ರಿಕೆಟ್ (Cricket), ಫುಟ್ಬಾಲ್ (Football), ಟೆನ್ನಿಸ್ (Tennis) ಪ್ಲೇಯರ್ - ಹೀಗೆ ಯಾವುದೇ ಕ್ರೀಡೆಯಲ್ಲಿ ಸಕ್ಸಸ್ ಆಗಬೇಕಂದ್ರು ಪೋಷಕರ ಸಪೋರ್ಟ್ ಅತ್ಯಗತ್ಯ. ಇದೀಗ ಕೇರಳ (Kerla)ದ ಆಟೋ ಚಾಲಕನ (Auto Driver) ಪುತ್ರನೊಬ್ಬ ಫುಟ್ಬಾಲ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ. ಸಂತೋಷ್ ಟ್ರೋಫಿ (Santosh Trophy) ಸೆಮಿಫೈನಲ್‌ನಲ್ಲಿ ಕರ್ನಾಟಕ (Karnataka) ವಿರುದ್ಧ ಕೇರಳ ಸೆಣಸಾಡುವಾಗ 22 ವರ್ಷದ ಜೆಸಿನ್ (Jesin), ಎಲ್ಲರ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದ. ಏಪ್ರಿಲ್ 28ರಂದು ನಡೆದ ಸೆಮಿಫೈನಲ್ನಲ್ಲಿ ಜೆಸಿನ್ ಗೋಲುಗಳಿಗೆ ಅಭಿಮಾನಿಗಳು ಫಿದಾ ಆಗಿದ್ರು. ತಂಡದಲ್ಲಿ ಬದಲಿ ಆಟಗಾರನಾಗಿ ಕಣಕ್ಕೆ ಇಳಿದ ಜೆಸಿನ್, ತನ್ನ ತಂಡದ 7-3 ಗೆಲುವಿನಲ್ಲಿ ಐದು ಗೋಲುಗಳನ್ನು ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾನೆ. ಅಂದಹಾಗೇ ಜೆಸಿನ್, ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಮೊಹಮ್ಮದ್ ನಿಜಾರ್ರ ಮಗ. ಮಲಪ್ಪುರಂನ ನಿಲಂಬೂರಿನ ನಿಜಾರ್ಗೆ ಅಂದು ಮಗನ ಆಟವನ್ನು ವೀಕ್ಷಿಸಲು ಬಯಸಿದ್ರೂ ಸಾಧ್ಯವಾಗಲಿಲ್ಲವಂತೆ. ಆಟೋ ಓಡಿಸುವ ಕೆಲಸ ಮುಗಿಸುವ ಹೊತ್ತಿಗೆ, ರಾತ್ರಿ 8.30ರ ಸಮಯವಾಗಿತ್ತು. ಸುಮಾರು 30 ಕಿ.ಮೀ ದೂರದ ಮಂಜೇರಿಯ ಕ್ರೀಡಾಂಗಣವನ್ನು ತಲುಪಲು ಲೇಟ್ ಆಗುತ್ತೆ ಅನ್ನೋ ಕಾರಣಕ್ಕೆ ನಿಜಾರ್, ಅಂತಿಮವಾಗಿ ಲೈವ್ ಸ್ಟ್ರೀಮ್‌ನಲ್ಲಿ ಮಗನ ಆಟವನ್ನು ನೋಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೇವಲ 1 ರೂ.ನಲ್ಲಿ SC ST ಹೆಣ್ಮಕ್ಕಳಿಗೆ ತಾಂತ್ರಿಕ ಶಿಕ್ಷಣ?
ಜೆಸಿನ್ ಈಗ ಸಂತೋಷ್ ಟ್ರೋಫಿ ಇತಿಹಾಸದಲ್ಲಿ ಬದಲಿ ಆಟಗಾರನಾಗಿ ಐದು ಗೋಲು ಗಳಿಸಿದ ಮೊದಲ ಆಟಗಾರ. ಟೂರ್ನ್ಮೆಂಟ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಕೇರಳದ ದಾಖಲೆಯ ಹೊಸ ವೀರ. ಈ ಹಿಂದೆ 1999 ರ ಆವೃತ್ತಿಯಲ್ಲಿ ಬಿಹಾರ ವಿರುದ್ಧ ನಾಲ್ಕು ಬಾರಿಸಿದ್ದ ಆಸಿಫ್ ಸಾಹೀರ್ ದಾಖಲೆ ಹೊಂದಿದ್ದರು.
ಕರ್ನಾಟಕ ವಿರುದ್ಧ ಕೇರಳ ಗೋಲಿನಿಂದ ಹಿನ್ನಡೆ ಅನುಭವಿಸುತ್ತಿದ್ದಾಗ ಕೊನೆಯ 30ನೇ ನಿಮಿಷದಲ್ಲಿ ಜೆಸಿನ್ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟು ಎಲ್ಲರು ಹುಬ್ಬೇರಿಸುವಂತೆ ಆಡಿದ್ದಾನೆ. 'ನಾನು ಯಾವುದೇ ಜಿಲ್ಲಾ ತಂಡದ ಭಾಗವಾಗಿಲ್ಲ. ಆದರೆ ಎಂಇಎಸ್ ಕಾಲೇಜಿನಲ್ಲಿ ನನ್ನ ತರಬೇತುದಾರರಾದ ರಫೀಕ್ ಸರ್, ಮುರುಗನ್ ಸರ್ ಮತ್ತು ಜಾರ್ಜ್ ಸರ್ ಕಾರಣದಿಂದ ನನಗೆ ಐ-ಲೀಗ್ ಎರಡನೇ ಡಿವಿಷನ್, ಕೇರಳ ಪ್ರೀಮಿಯರ್ ಲೀಗ್ ಮತ್ತು ಈಗ ಸಂತೋಷ್ ಟ್ರೋಫಿಯನ್ನು ಆಡುವ ಅವಕಾಶ ಸಿಕ್ಕಿದೆ ಎಂದು ಖುಷಿಪಡುತ್ತಾರೆ ಜೆಸಿನ್.
ಜೆಸಿನ್ ಫುಟ್‌ಬಾಲ್‌ನಲ್ಲಿ ಪ್ರಮುಖ ಪಾತ್ರ ವಹಿಸುವುದರಲ್ಲಿ ಆಕೆಯ ಅಜ್ಜಿ ಪಾತ್ರವೂ ಇದೆಯಂತೆ. ಜೆಸಿನ್ ಚಿಕ್ಕವನಿದ್ದಾಗ ಆಟೋ ಡ್ರೈವರ್ ಆಗಿ ಬಂದ ಅಲ್ಪ ಸಂಪಾದನೆಯಿಂದ ನಿರ್ವಹಣೆ ಕಷ್ಟವಾಯಿತು. ನಾನು ಕೆಲವು ವರ್ಷಗಳ ಕಾಲ ಗಲ್ಫ್‌ಗೆ ಹೋಗಿ ಅಲ್ಲಿ ಕೆಲಸ ಮಾಡಿದೆ. ಆ ಸಮಯದಲ್ಲಿ ನನ್ನ ತಾಯಿ (ಆಮಿನಾ) ಅವರನ್ನು ನಿಲಂಬೂರಿನ ಫುಟ್ಬಾಲ್ ಅಕಾಡೆಮಿಗೆ ಕರೆದುಕೊಂಡು ಹೋಗುತ್ತಿದ್ದರು. ನನ್ನಂತೆಯೇ ಅವನೂ ಫುಟ್ಬಾಲ್ ಆಟಗಾರನಾಗಬೇಕೆಂದು ತಾಯಿ ಬಯಸಿದ್ದಳು. ದುರದೃಷ್ಟವಶಾತ್, ಅವನು ಎಂಟನೇ ತರಗತಿಯಲ್ಲಿದ್ದಾಗ ಅವರು ತೀರಿಹೋದ್ರು. ಈಗ ಅವರು ಇದ್ದಿದ್ರೆ ಅತ್ಯಂತ ಸಂತೋಷಪಡುತ್ತಿದ್ರು ಎಂದು ತನ್ನ ತಾಯಿಯನ್ನ ಸ್ಮರಿಸುತ್ತಾರೆ ನಿಜಾರ್.
ISRO Young Scientist ಕಾರ್ಯಕ್ರಮಕ್ಕೆ ಜಾರ್ಖಂಡ್‌ನ 10ನೇ ತರಗತಿ ವಿದ್ಯಾರ್ಥಿ ಆಯ್ಕೆ
ಪ್ರತಿಭಾವಂತರು ತಮ್ಮ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ತಮ್ಮ ನೈಜ ಪ್ರತಿಭೆಯನ್ನು ಪ್ರದರ್ಶಿಸಲು ಕಾತರಿಸುತ್ತಾರೆ. ಅವಕಾಶ ಸಿಕ್ಕ ತಕ್ಷಣವೇ ತಮ್ಮ ಅಗಾದ ಪ್ರತಿಭನೆಯನ್ನು ಪ್ರದರ್ಶಿಸುವ ಮೂಲಕ ತಾವೆಂಥ ಪ್ರತಿಭಾವಂತರು ಎಂಬುದನ್ನು ನಿರೂಪಿಸುತ್ತಾರೆ. ಈಗ ಜೆಸಿನ್ ವಿಷಯದಲ್ಲೂ ಹೀಗೆ ಆಗಿದೆ. ಅವಕಾಶ ಸಿಗುತ್ತಿದ್ದಂತೆ ತಮ್ಮ ದೈತ್ಯ ಪ್ರತಿಭೆಯನ್ನು ಅನಾವರಣ ಮಾಡಿದ್ದಾರಷ್ಟೇ.