Latest Videos

NEET 2022: ಮೇ.21ರಂದೇ PG ಪರೀಕ್ಷೆ, UG ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

By Suvarna NewsFirst Published May 4, 2022, 12:39 PM IST
Highlights

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ನೀಟ್ ಪಿಜಿ ಪರೀಕ್ಷೆ   ಮೇ 21 ರಂದೇ ನಡೆಯಲಿದೆ. ನೀಟ್ ಯುಜಿ ಪರೀಕ್ಷೆಗೆ ಅರ್ಜಿ ಸಲ್ಲಿಕೆಯನ್ನು ವಿಸ್ತರಣೆ ಮಾಡಲಾಗಿದ್ದು, ಮೇ 15 ರವರೆಗೆ  ವಿಸ್ತರಿಸಲಾಗಿದೆ.

ನವದೆಹಲಿ (ಮೇ.4): ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ನೀಟ್ ಪಿಜಿ ಪರೀಕ್ಷೆಯನ್ನು  ಮೇ 21 ರಂದೇ ನಡೆಸಲಾಗುವುದು ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮತ್ತು  ಪದವಿಪೂರ್ವ ವಿದ್ಯಾರ್ಥಿಗಳಿಗೆ ನಡೆಯುವ (NEET UG 2022) ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಕೆಯನ್ನು ವಿಸ್ತರಣೆ ಮಾಡಲಾಗಿದೆ.

NEET PG 2022 ಪರೀಕ್ಷೆ ಮುಂದೂಡಿಕೆ ಇಲ್ಲ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಸ್ನಾತಕೋತ್ತರ 2022 ಪರೀಕ್ಷೆಯನ್ನು ಮುಂದೂಡಲಾಗುವುದಿಲ್ಲ ಮತ್ತು ವೇಳಾಪಟ್ಟಿಯ ಪ್ರಕಾರ ಮೇ 21 ರಂದು ನಡೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ. ಏಪ್ರಿಲ್ 30 ರಂದು ನಡೆದ ಸಭೆಯಲ್ಲಿ ಪರೀಕ್ಷಾ ದಿನಾಂಕಗಳನ್ನು ದೃಢಪಡಿಸಲಾಯಿತು, ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ  ಕೂಡ ಉಪಸ್ಥಿತರಿದ್ದರು.

NEET PG 2021 ಕೌನ್ಸೆಲಿಂಗ್‌ನಲ್ಲಿನ ವಿಳಂಬ ಮತ್ತು ಪ್ರವೇಶ ಪರೀಕ್ಷೆಗಳು ಮತ್ತು ಕೌನ್ಸೆಲಿಂಗ್‌ನ ನಡುವಿನ ಕಡಿಮೆ ಅಂತರದಿಂದಾಗಿ NEET PG 2022 ಪರೀಕ್ಷೆಯ ದಿನಾಂಕವನ್ನು ಮುಂದೂಡುವಂತೆ ಅನೇಕ ಆಕಾಂಕ್ಷಿಗಳು ಒತ್ತಾಯಿಸಿದ್ದರು. ಮೇ 21 ರಂದು NEET PG 2022 ಪರೀಕ್ಷೆಯನ್ನು ನಡೆಸುವುದರಿಂದ ಅನೇಕ ವೈದ್ಯಕೀಯ ಇಂಟರ್ನಿಗಳು ಪರೀಕ್ಷೆಗಳಿಗೆ ಹಾಜರಾಗಲು ಅನರ್ಹರಾಗುತ್ತಾರೆ ಎಂದು ಆಕಾಂಕ್ಷಿಗಳು ಹೇಳಿದ್ದರು. ಆದರೆ ಸಚಿವಾಲಯದ ಮೂಲಗಳ ಪ್ರಕಾರ ಪರೀಕ್ಷೆಗಳನ್ನು ಮುಂದೂಡುವ ಸಾಧ್ಯತೆಯಿಲ್ಲ. 

PSI recruitment scam ಪಿಎಸ್‌ಐ ಹುದ್ದೆಗಳ ಭರ್ತಿಗೆ ಎಎಸ್‌ಐಗಳಿಗೆ ಬಡ್ತಿ

ಇತ್ತೀಚೆಗೆ, ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘ ​​(All India Medical Students Association - AIMSA) ಮಾಂಡವಿಯಾ ಅವರಿಗೆ ಪತ್ರ ಬರೆದು NEET PG 2022 ಪರೀಕ್ಷೆ ಮತ್ತು NEET MDS 2022 ಅನ್ನು 8 ರಿಂದ 10 ವಾರಗಳವರೆಗೆ ಮುಂದೂಡುವಂತೆ ಮನವಿ ಮಾಡಿತ್ತು. NEET PG 2021 ಕೌನ್ಸೆಲಿಂಗ್ ಮೇ 3 ರೊಳಗೆ ಮುಕ್ತಾಯಗೊಳ್ಳಲಿದೆ. 

NEET PG 2021 ಕೌನ್ಸೆಲಿಂಗ್‌ನಲ್ಲಿ ಸೀಟುಗಳನ್ನು ಪಡೆಯಲು ಸಾಧ್ಯವಾಗದವರು, NEET PG 2022 ಪರೀಕ್ಷೆಗೆ ನೋಂದಾಯಿಸಿಕೊಳ್ಳದವರು ಮತ್ತು ಮಾಪ್-ಅಪ್ ರೌಂಡ್ ಕೌನ್ಸೆಲಿಂಗ್ ರದ್ದತಿಯಿಂದ ಸೀಟುಗಳನ್ನು ಕಳೆದುಕೊಂಡವರು ನೋಂದಣಿ ಮತ್ತು ತಯಾರಿಗಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು AIIMSA ಸೂಚಿಸಿದೆ.

SECR APPRENTICE RECRUITMENT 2022 ರೈಲ್ವೆ ಇಲಾಖೆ ಸೇರ ಬಯಸುವವರಿಗೆ ಸುವರ್ಣಾವಕಾಶ

NEET UG 2022 ಅರ್ಜಿ ಸಲ್ಲಿಕೆ ಮುಂದೂಡಿಕೆ: ಪದವಿಪೂರ್ವ ವಿದ್ಯಾರ್ಥಿಗಳಿಗೆ ನಡೆಯುವ (NEET UG 2022) ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆಯ (NEET) ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency -NTA) ಮೇ 15 ರವರೆಗೆ  ವಿಸ್ತರಿಸಿದೆ. ಈ ಹಿಂದೆ ನೀಟ್ ಯುಜಿಗೆ 2022 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ. 6 ಆಗಿತ್ತು. ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜುಗಳು B.Sc ನರ್ಸಿಂಗ್ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ NEET ಅನ್ನು ಬಳಸಲು ನಿರ್ಧರಿಸಿರುವುದರಿಂದ ದಿನಾಂಕ ವಿಸ್ತರಣೆ ಮಾಡಲಾಗಿದ್ದು, ನೀಟ್ ಪರೀಕ್ಷೆ ಬರೆಯಲು ಉದ್ದೇಶಿಸುವ ಅಭ್ಯರ್ಥಿಗಳು ಅಧಿಕೃತ  ವೆಬ್ ತಾಣ  neet.nta.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲಬಹುದು. 

ನೀಟ್ ಪ್ರವೇಶ ಪರೀಕ್ಷೆಯು ಜೂನ್ 7 ರಂದು ನಡೆಸಲು ದಿನ ನಿಗದಿಯಾಗಿದೆ. ಈ ಪರೀಕ್ಷೆಗೆ ಅರ್ಹತೆ ಪಡೆಯುವ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಸಂಸ್ಥೆಗಳಿಂದ ಎಂಬಿಬಿಎಸ್ ವೈದ್ಯಕೀಯ ಕೋರ್ಸ್‌ಗಳನ್ನು ಮಾಡಲು ಅವಕಾಶವನ್ನು ಪಡೆಯುತ್ತಾರೆ. ಪರೀಕ್ಷೆಯ ಕಾಲಮಿತಿಯನ್ನು ಹೆಚ್ಚಿಸುವ ಮೂಲಕ, ವಿದ್ಯಾರ್ಥಿಗಳು ಸಾಕಷ್ಟು ಪರಿಹಾರವನ್ನು ಪಡೆಯುತ್ತಾರೆ.

ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು NEET (UG) ಅಂಕಗಳನ್ನು ಮಹಿಳಾ ಅಭ್ಯರ್ಥಿಗಳ ಆಯ್ಕೆಗೆ ಮಾತ್ರ B.Sc ಗೆ ಪ್ರವೇಶಕ್ಕಾಗಿ ಬಳಸಲಾಗುತ್ತದೆ ಎಂದು ಮಹಾನಿರ್ದೇಶಕರು ಸಹ ನಿರ್ಧರಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (UG) - 2022 ಗಾಗಿ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

NEET ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದ್ದು, ಅಭ್ಯರ್ಥಿಗಳು ಪದವಿಪೂರ್ವ ವೈದ್ಯಕೀಯ ಮತ್ತು ಸಂಬಂಧಿತ ಕೋರ್ಸ್‌ಗಳಾದ MBBS, BDS, ಆಯುಷ್ ಕೋರ್ಸ್‌ಗಳು, BSc ನರ್ಸಿಂಗ್, BSc ಲೈಫ್ ಸೈನ್ಸಸ್ ಮತ್ತು ಪಶುವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅನುವು ಮಾಡಿಕೊಡುತ್ತದೆ.

click me!