ಕೋಲಾರದಲ್ಲಿ ಮೂವತ್ತಕ್ಕೂ ಹೆಚ್ಚು ಸರ್ಕಾರಿ ಪಿಯೂ ಕಾಲೇಜುಗಳಿವೆ. ಈ ಪೈಕಿ ಮಾಲೂರು ಪಟ್ಟಣದ ಸರ್ಕಾರಿ ಪಿಯೂ ಕಾಲೇಜು ಕಟ್ಟಡಕ್ಕೆ ಮಾತ್ರ ಸೌರಶಕ್ತಿ ವಿದ್ಯುತ್ ಅಳವಡಿಸಿಕೊಳ್ಳಲಾಗಿದೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,
ಕೋಲಾರ (ಜು.21): ರಾಜ್ಯದ ಸರ್ಕಾರಿ ಪಿಯೂ ಕಾಲೇಜು ಕಟ್ಟಡಗಳಲ್ಲಿ ಸೌರಶಕ್ತಿ ವಿದ್ಯುತ್ ಸಂಪರ್ಕ ಒದಗಿಸುವ ರಾಜ್ಯ ಸರ್ಕಾರದ ಪ್ರಯತ್ನವು ಕುಂಟುತ್ತಾ ಸಾಗಿದೆ. ದಾನಿಗಳ ನೆರವಿನಿಂದ ಒದಗಿಸಲು ರೂಪಿಸಿರುವ ಈ ಯೋಜನೆಗೆ ಪ್ರೋತ್ಸಾಹ ಮತ್ತು ಪ್ರಚಾರದ ಕೊರತೆಯು ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯ ಬಗ್ಗೆ ಈಗ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಪಿಯೂ ಕಾಲೇಜುಗಳಲ್ಲಿನ ವಿದ್ಯುತ್ ಪೂರೈಕೆ ಕುರಿತಾದ ಸ್ಟೋರಿಯಿದು.
ರಾಜ್ಯದ ಹಲವಾರು ಕಾಲೇಜು ಕಟ್ಟಡಗಳಿಗೆ ಅಳವಡಿಸಿರುವ ವಿದ್ಯುತ್ ಸಂಪರ್ಕವು ಉತ್ತಮ ಸ್ಥಿತಿಯಲ್ಲಿದೆ. ಹಾಗೆಯೇ, ಇನ್ನೊಂದಿಷ್ಟು ಕಾಲೇಜು ಕಟ್ಟಡಗಳಿಗೆ ಒದಗಿಸಿರುವ ವಿದ್ಯುತ್ ಸಂಪರ್ಕದ ವ್ಯವಸ್ಥೆಯು ಕಳಪೆ ಸ್ಥಿತಿಯಲ್ಲಿದೆ. ಈ ಎಲ್ಲ ಕಾಲೇಜುಗಳಿಗೆ ಬರುತ್ತಿರುವ ವಿದ್ಯುತ್ ಶುಲ್ಕವು ಲಕ್ಷಾಂತರ ರುಪಾಯಿಗಳಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರೂಪಿಸಿದ ಸೌರಶಕ್ತಿ ವಿದ್ಯುತ್ ಸಂಪರ್ಕ ಯೋಜನೆಯ ಅನಿವಾರ್ಯತೆಯು ಎದ್ದು ಕಾಣುತ್ತಿದೆ.
ನೀಟ್ ತೇರ್ಗಡೆಯಾಗಿ ವೃತ್ತಿಪರ ಕೋರ್ಸುಗಳ ಪ್ರವೇಶಾತಿ ಬಯಸಿರುವವರ ದಾಖಲೆ ಪರಿಶೀಲನೆ
ಕೋಲಾರ ಜಿಲ್ಲೆಯಲ್ಲಿ ಮೂವತ್ತಕ್ಕೂ ಹೆಚ್ಚು ಸರ್ಕಾರಿ ಪಿಯೂ ಕಾಲೇಜುಗಳಿವೆ. ಈ ಪೈಕಿ ಮಾಲೂರು ಪಟ್ಟಣದ ಸರ್ಕಾರಿ ಪಿಯೂ ಕಾಲೇಜು ಕಟ್ಟಡಕ್ಕೆ ಮಾತ್ರ ಸೌರಶಕ್ತಿ ವಿದ್ಯುತ್ ಅಳವಡಿಸಿಕೊಳ್ಳಲಾಗಿದೆ. ಐದು ವರ್ಷಗಳ ಹಿಂದೆ ಅಳವಡಿಸಿದ ಸೌರಶಕ್ತಿ ವಿದ್ಯುತ್ ಸಂಪರ್ಕದಿಂದಾಗಿ ಕಾಲೇಜು ಕಟ್ಟಡಕ್ಕೆ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗಿದೆ. ಹಾಗೆಯೇ, ವಿದ್ಯುತ್ ಶುಲ್ಕದಿಂದಲೂ ವಿನಾಯಿತಿ ಸಿಕ್ಕಿದೆ.
ಕೋಲಾರ ಜಿಲ್ಲೆಯಲ್ಲಿ ಈ ಆರು ವರ್ಷದಲ್ಲಿ ಒಂದೇ-ಒಂದು ಕಾಲೇಜು ಕಟ್ಟಡಕ್ಕೆ ಮಾತ್ರ ಸೌರಶಕ್ತಿ ವಿದ್ಯುತ್ ಅಳವಡಿಸಲು ಸಾಧ್ಯವಾಗಿದೆ. ದಾನಿಗಳ ಆರ್ಥಿಕ ನೆರವಿನಿಂದ ಈ ಯೋಜನೆ ಜಾರಿ ಮಾಡಬೇಕಾಗಿರುವುದರಿಂದ ಹಿನ್ನಡೆಯಾಗಿರುವುದು ಸಹಜವಾಗಿದೆ. ಇದಕ್ಕೆ ಪ್ರಚಾರದ ಕೊರತೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರಾಸಕ್ತಿಯೂ ಕಾರಣವಾಗಿದೆ.
ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದ MMMUT ಭಾರತೀಯ ವಿದ್ಯಾರ್ಥಿನಿ!
ಒಟ್ನಲ್ಲಿ, ಸರ್ಕಾರಿ ಪಿಯೂ ಕಾಲೇಜುಗಳಿಗೆ ಸೌರಶಕ್ತಿ ವಿದ್ಯುತ್ ಪೂರೈಕೆ ಯೋಜನೆಯು ಉತ್ತಮ ಪ್ರಯತ್ನವಾಗಿದೆ.ಅಧಿಕ ವೆಚ್ಚದ ವಿದ್ಯುತ್ ಬಳಕೆಯನ್ನು ನಿಲ್ಲಿಸುವ ದೃಷ್ಟಿಯಿಂದ ಸೌರಶಕ್ತಿ ಯೋಜನೆಯನ್ನು ಬೆಂಬಲಿಸಲು ಅಗತ್ಯ ಕ್ರಮ ಜರುಗಿಸಬೇಕಾಗಿದೆ.