ಕಾದಂಬರಿಗೆ ತೂಕ ಬರಬೇಕಾದರೆ ಆಳವಾದ ಚಿಂತನೆ ಬೇಕು: ಎಸ್.ಎಲ್.ಭೈರಪ್ಪ

By Girish Goudar  |  First Published Jul 21, 2023, 9:47 PM IST

ಕಥೆ ಇಲ್ಲದೆ ಹೋದರೆ ಗಂಭೀರ ತತ್ವಗಳನ್ನು ಹೇಳುವುದಕ್ಕೆ ಆಗಲಾರದು. ಕಾದಂಬರಿಗೆ ತೂಕ ಬರಬೇಕಾದರೆ ಅದಕ್ಕೆ ಆಳವಾದ ಚಿಂತನೆ ಬೇಕು. ಆಳವಾದ ಚಿಂತನೆ ಅಧ್ಯಯನದಿಂದ ಮಾತ್ರ ಸಾಧ್ಯ: ಎಸ್. ಎಲ್. ಭೈರಪ್ಪ  


ಸವಿತಾ ಅರುಣ್ ಶೆಟ್ಟಿ

ಮುಂಬೈ(ಜು.21): ನಾವು ಸೌಂದರ್ಯ ಎಂಬ ಪದ ಬಳಕೆಯನ್ನು ವಿವಿಧ ಸನ್ನಿವೇಶಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಬಳಸುತ್ತೇವೆ. ಆದರೆ ಸೌಂದರ್ಯ ಇರುವುದು ಕಲಾತ್ಮಕ ಕೆಲಸಗಳಲ್ಲಿ ಮಾತ್ರ. ನಾವು ಬರೆದ ಯಾವುದೇ ಪ್ರಬಂಧ ಅಥವಾ ಇತರ ಲೇಖನಗಳನ್ನು ಪದೇ ಪದೇ ಪರಿಷ್ಕರಿಸಬೇಕು. ಅದಕ್ಕಾಗಿ ನಾವು ಭಾಷಾಧ್ಯಯನವನ್ನು ಕೈಗೊಳ್ಳಬೇಕು ಎಂದು ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಎಸ್. ಎಲ್. ಭೈರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ. 

Tap to resize

Latest Videos

ಇಂದು (ಜು.21) ಮುಂಬೈ ವಿವಿ ಕನ್ನಡ ವಿಭಾಗದ ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಬರಹಗಾರರು ಕಲ್ಪನಾಶೀಲರಾಗಿರಬೇಕು. ತತ್ವಶಾಸ್ತ್ರವನ್ನು ಹೇಳಲು, ಶಾಸ್ತ್ರದರ್ಶನವನ್ನು ನೀಡಲು ಕಥೆಯ ಮೂಲಕ ಸಾಧ್ಯ. ವೇದೋಪನಿಷತ್ತುಗಳ ಕಾಲದಿಂದಲೂ ತತ್ವಜ್ಞಾನವನ್ನು ಋಷಿಮುನಿಗಳು ಕಥೆಗಳ ಮೂಲಕವೇ ಹೇಳುತ್ತಾ ಬಂದರು. ಕಥೆ ಇಲ್ಲದೆ ಹೋದರೆ ಗಂಭೀರ ತತ್ವಗಳನ್ನು ಹೇಳುವುದಕ್ಕೆ ಆಗಲಾರದು. ಕಾದಂಬರಿಗೆ ತೂಕ ಬರಬೇಕಾದರೆ ಅದಕ್ಕೆ ಆಳವಾದ ಚಿಂತನೆ ಬೇಕು. ಆಳವಾದ ಚಿಂತನೆ ಅಧ್ಯಯನದಿಂದ ಮಾತ್ರ ಸಾಧ್ಯ. ನಮ್ಮ ಕಾದಂಬರಿಗಳಲ್ಲಿ ಎಷ್ಟೇ ವಾಸ್ತವಾಂಶ ಇದ್ದರೂ ಕಲ್ಪನಾಶಕ್ತಿಯಿಂದ ಅದನ್ನು ಬೆಳೆಸಿದಾಗ ಅದು ಒಂದು ಅತ್ಯುತ್ತಮ ಕೃತಿಯಾಗಿ ಮೂಡಿಬರುವುದು ಅಂತ ಹೇಳಿದ್ದಾರೆ. 

ವೀರ್‌ ಸಾವರ್ಕರ್‌ ಕ್ಷಮಾಪಣಾ ಪತ್ರದ ಸತ್ಯ ಬಹಿರಂಗಪಡಿಸಿದ ಸಾಹಿತಿ ಎಸ್.ಎಲ್. ಭೈರಪ್ಪ

ಮುಂಬೈ ವಿಶ್ಕವಿದ್ಯಾನಿಲಯದ ಕಲೀನಾ ಕ್ಯಾಂಪಸ್‌ನ ಜೆ.ಪಿ.ನಾಯಕ್ ಸಭಾಭವನದಲ್ಲಿ ನಡೆದ 'ಭಾಷೆಗಳ ಗಡಿ ಗೆದ್ದ ಭಾರತೀಯ', 'ಮುಂಬಯಿ ಕನ್ನಡ ಪರಿಸರ', 'ಕನ್ನಡ ಸಂಶೋಧನೆಗೆ ಮುಂಬಯಿ ಕೊಡುಗೆ', 'ಸಂಶೋಧನೆಯಲ್ಲಿ ಶಿಸ್ತು ಮತ್ತು ನೈತಿಕ ಪ್ರಜ್ಞೆ ' ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾಡಿದರು. 

ಸಾಹಿತಿ, ವಿಮರ್ಶಕರು ಆದ ಡಾ.ಸುಪ್ರಿಯಾ ಸಹಸ್ರಬುದ್ಧೆ ನೀಡಿದ 'ವಿಶ್ವಮಾನ್ಯ ಲೇಖಕರಾಗಿ ಭೈರಪ್ಪ' ವಿಶೇಷ ಉಪನ್ಯಾಸ ಕಾರ್ಯಕ್ರಮ ಮತ್ತು ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿಶ್ಕವಿದ್ಯಾನಿಲಯ, ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆದ ಡಾ ಜಿ ಎನ್ ಉಪಾಧ್ಯ ಅವರು ವಹಿಸಿದ್ದರು. ಸಂದರ್ಶಕ ಪ್ರಾಧ್ಯಾಪಕ ಡಾ. ಉಮಾ ರಾಮರಾವ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು.

click me!