Koppal: ಒಬ್ಬ ವಿದ್ಯಾರ್ಥಿಗಾಗಿ 30 ಸಿಬ್ಬಂದಿಯಿಂದ ಪರೀಕ್ಷೆಗೆ ತಯಾರಿ: ಕೊನೆಗೆ ಆತನೇ ಗೈರು ಹಾಜರು

By Suvarna News  |  First Published Apr 1, 2022, 8:59 PM IST

ನೂರಾರು ವಿದ್ಯಾರ್ಥಿಗಳಿಗೆ ಹತ್ತಾರು ಜನ ಸಿಬ್ಬಂದಿಗಳು ಪರೀಕ್ಷಾ ಕಾರ್ಯ ನಿರ್ವಹಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಊರಲ್ಲಿ ಕೇವಲ ಒಬ್ಬ ವಿದ್ಯಾರ್ಥಿಗೆ 30ಕ್ಕೂ ಹೆಚ್ಚು ಜನ ಸಿಬ್ಬಂದಿ ಕಾರ್ಯನಿರ್ವಹಿಸಿರುವ ಅಪರೂಪದ ಪ್ರಸಂಗವೊಂದು ನಡೆದಿದೆ. 


ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಏ.01): ನೂರಾರು ವಿದ್ಯಾರ್ಥಿಗಳಿಗೆ (Students) ಹತ್ತಾರು ಜನ ಸಿಬ್ಬಂದಿಗಳು ಪರೀಕ್ಷಾ (Exam) ಕಾರ್ಯ ನಿರ್ವಹಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಊರಲ್ಲಿ ಕೇವಲ ಒಬ್ಬ ವಿದ್ಯಾರ್ಥಿಗೆ 30ಕ್ಕೂ ಹೆಚ್ಚು ಜನ ಸಿಬ್ಬಂದಿ ಕಾರ್ಯನಿರ್ವಹಿಸಿರುವ ಅಪರೂಪದ ಪ್ರಸಂಗವೊಂದು ನಡೆದಿದೆ. 

Tap to resize

Latest Videos

ಎಲ್ಲಿ ಈ ಪ್ರಸಂಗ ನಡೆದಿರುವುದು: ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Exam) ಸಮಯ. ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿವೆ. ಇದರ ಮದ್ಯೆಯೇ ಕೊಪ್ಪಳದಲ್ಲೊಂದು (Koppal) ಅಪರೂಪದ ಪ್ರಸಂಗ ನಡೆದಿದೆ. ನಗರದ ಸ್ವಾಮೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಪ್ರಸಂಗ ನಡೆದಿದ್ದು, ಕೊನೆಯ ಹೊತ್ತಿನವರೆಗೂ ವಿದ್ಯಾರ್ಥಿ ಪರೀಕ್ಷೆ ಬರೆಯಲು ಬರಲಿಲ್ಲ. ಇದರಿಂದಾಗಿ ವಿದ್ಯಾರ್ಥಿ ಗೈರು ಹಾಜರು (Absent) ಎಂದು ಘೋಷಣೆ ಮಾಡಲಾಯಿತು.  

SSLC Exam: ತಾಯಿ ಸಾವಿನ ದುಃಖದಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ...!

ಕೊಪ್ಪಳ ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ (Swamy Vivekananda English Medium School) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನಲೆಯಲ್ಲಿ ವಿಶೇಷ ಚೇತನರಿಗಾಗಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಅದರಲ್ಲಿ ಒಟ್ಟು 7 ಜನ ವಿಶೇಷ ಚೇತನರು ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ ಇಂದು ಅರ್ಥಶಾಸ್ತ ವಿಷಯದ ಪರೀಕ್ಷೆ ಇತ್ತು. ಈ ವಿಷಯಕ್ಕೆ ಮೆಹಬೂಬ್ ಹುಸೇನ್ ಎನ್ನುವ ವಿದ್ಯಾರ್ಥಿ ಮಾತ್ರ ಪರೀಕ್ಷೆ ಬರೆಯಬೇಕಿತ್ತು. ಆದರೆ ಈ ವಿದ್ಯಾರ್ಥಿ ಇಂದಿನ ಪರೀಕ್ಷೆಗೆ ಗೈರು ಹಾಜರಾಗಿದ್ದರಿಂದ ಸಿಬ್ಬಂದಿ ವಿದ್ಯಾರ್ಥಿಗಾಗಿ ಕಾಯಿಯುತ್ತಾ ಕುಳಿತಿದ್ದರು. ಆದರೆ ಕೊನೆಗೂ ಆ ವಿದ್ಯಾರ್ಥಿ ಗೈರಾದ.

ಕೊಪ್ಪಳ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಮೆಹಬೂಬ್ ಹುಸೇನ್ ಎಂಬ ವಿಶೇಷ ಚೇತನ ವಿದ್ಯಾರ್ಥಿ ಅರ್ಥಶಾಸ್ತ್ರ ಪರೀಕ್ಷೆ ಬರೆಯಬೇಕಿತ್ತು. ಎಂದಿನಂತೆ ಸಿಬ್ಬಂದಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಾಗಿ ಕಾದು ಕುಳಿತರು. 11 ಗಂಟೆಯಾದರೂ ವಿದ್ಯಾರ್ಥಿ ಪರೀಕ್ಷೆಗೆ ಬಾರದೆ ಇರುವದರಿಂದ ನಿಯಮಾನುಸಾರ ಅಭ್ಯರ್ಥಿ ಗೈರು ಹಾಜರಾಗಿದ್ದಾನೆ ಘೋಷಿಸಿದರು. 

ಯಾರೆಲ್ಲ ಸಿಬ್ಬಂದಿ ಕೆಲಸ ನಿರ್ವಹಿಸಿದರು: ಇನ್ನು ಇಂದಿನ ಪರೀಕ್ಷೆಯನ್ನು ಕೇವಲ ಓರ್ವ ವಿದ್ಯಾರ್ಥಿಗಾಗಿ ಮಾತ್ರೆ ಏರ್ಪಡಿಸಲಾಗಿತ್ತು. ಆದರೆ ಕೆಲಸ ಮಾಡಿದ್ದು ಮಾತ್ರ 30 ಕ್ಕೂ ಅಧಿಕ ಜನರು. ಓರ್ವ ವಿದ್ಯಾರ್ಥಿಗಾಗಿ ಓರ್ವ ಮುಖ್ಯ ಅಧೀಕ್ಷಕರು, ಮೂವರು ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಓರ್ವ ಕೊಠಡಿ ಮೇಲ್ವಿಚಾರಕರು, ಕಚೇರಿ ಸಹಾಯಕರು, ಪರಿಚಾರಕರು, ಇಬ್ಬರು ಆಶಾ ಕಾರ್ಯಕರ್ತೆಯರು, ದೈಹಿಕ ಶಿಕ್ಷಕರು, ಓರ್ವ ಪೊಲೀಸ್ ಸಿಬ್ಬಂದಿ, ಒಬ್ಬರು ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು.

Student Death: 'ಉತ್ತರ ಪತ್ರಿಕೆ ಕಿತ್ತುಕೊಂಡಿದ್ದೆ ಮಗಳ ಸಾವಿಗೆ ಕಾರಣ' ತಾಯಿಯ  ನೋವು

3 ಜನ ಫ್ಲೈಯಿಂಗ್ ಸ್ಕ್ವಾಡ್, ಮೂವರು ಮಾರ್ಗಾಧಿಕಾರಿಗಳು, ಇಬ್ಬರು ಖಜಾನೆ ಅಧಿಕಾರಿಗಳು, ಮೂವರು ಚಾಲಕರು ಸೇರಿದಂತೆ 30 ಕ್ಕೂ ಅಧಿಕ ಜನ ಓರ್ವ ವಿದ್ಯಾರ್ಥಿಗಾಗಿ ಕಾರ್ಯನಿರ್ವಹಣೆ ಮಾಡಿದರು. ಒಟ್ಟಿನಲ್ಲಿ ಓರ್ವ ವಿದ್ಯಾರ್ಥಿಗಾಗಿ ಸರಕಾರ ಸಾವಿರಾರು ರೂಪಾಯಿ ಖರ್ಚು ಮಾಡಿ 30 ಕ್ಕೂ ಅಧಿಕ ಸಿಬ್ಬಂದಿಗಳನ್ನು ಶಿಕ್ಷಣ ಇಲಾಖೆ ನಿಯೋಜನೆ ಮಾಡಿತ್ತು.‌ಆದರೆ ವಿದ್ಯಾರ್ಥಿ ಮಾತ್ರ ಗೈರಾಗಿದ್ದು, ನಿಜಕ್ಕೂ ದುರಂತವೇ ಸರಿ.

click me!