ವಿಜಯಪುರ: ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಜೀವನ ಪಠ್ಯವಾಗಬೇಕು..!

By Girish Goudar  |  First Published Jan 7, 2023, 2:00 AM IST

ಶಾಲಾ-ಕಾಲೇಜು ಪಠ್ಯದಲ್ಲಿ ಶ್ರೀಗಳ ಚರಿತ್ರೆ ಸೇರ್ಪಡೆಗೆ ಒತ್ತಾಯ. ಸರಳತೆಯ ಸಾಕಾರ ಮೂರ್ತಿಯ ಜೀವನವೇ ಮಕ್ಕಳಿಗೆ ಪಾಠವಾಗಲಿ. 
 


ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಜ.07): ನಡೆದಾಡುವ ದೇವರು, ಸರಳತೆಯ ಸಾಕಾರ ಮೂರ್ತಿ ಸಿದ್ದೇಶ್ವರ ಶ್ರೀಗಳು ಬಯಲಲ್ಲಿ ಬಯಲಾಗಿ ಹೋಗಿದ್ದಾರೆ. ಆದ್ರೆ ಅವರ ನೆನಪು ಭಕ್ತರಲ್ಲಿ ಹಸಿರಾಗಿದೆ. ಅವರು ನೀಡಿದ ಸಂದೇಶ, ಅವರ ಪ್ರವಚನಗಳು ಜನರನ್ನ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿವೆ. ಸರಳತೆಯ ಬದುಕಿನ ಜೊತೆಗೆ ಅತ್ಯದ್ಭುತ ಸಂದೇಶ ನೀಡಿ ಪಂಚಭೂತಗಳಲ್ಲಿ ಲೀನವಾದ ಸಿದ್ದೇಶ್ವರ ಶ್ರೀಗಳ ಜೀವನ ಶೈಲಿ, ಸರಳತೆಯ ಬದುಕು, ಅವರ ಭೋಧಿಸಿದ ತತ್ವಜ್ಞಾನ, ಶಾಲಾ ಮಕ್ಕಳಿಗೆ ಪಠ್ಯವಾಗಬೇಕು ಅನ್ನೋ ಬೇಡಿಕೆ ಶುರುವಾಗಿದೆ.

Latest Videos

undefined

ಜ್ಞಾನಯೋಗಿ ಬದುಕು ಪಠ್ಯವಾಗಬೇಕು..!

ತತ್ವಜ್ಞಾನಿ, ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಬದುಕು ಪಠ್ಯವಾಗಬೇಕು ಅಂತಾ ಭಕ್ತರು ಪಟ್ಟು ಹಿಡಿದಿದ್ದಾರೆ. ಸರಳತೆಗೆ, ಜ್ಞಾನ ಭಂಡಾರಕ್ಕೆ ಮತ್ತೊಂದು ಹೆಸರು ಸಿದ್ದೇಶ್ವರ ಶ್ರೀಗಳು. ತಮ್ಮ ಸರಳತೆ, ಪ್ರವಚನ, ತತ್ವಜ್ಞಾನದಿಂದಾಗಿ ಸಿದ್ದೇಶ್ವರ ಶ್ರೀಗಳು ಮನೆ ಮನಗಳಲ್ಲಿ ಸಾಕ್ಷಾತ್‌ ದೇವರಾಗಿದ್ದಾರೆ. ಇಂಥ ಶ್ರೇಷ್ಠರ ಬದುಕು, ಜೀವನ ಚರಿತ್ರೆ ಶಾಲಾ ಮಕ್ಕಳಿಗೆ ಪಠ್ಯವಾಗಬೇಕು ಅಂತ ಭಕ್ತರು ಆಗ್ರಹಿಸುತ್ತಿದ್ದಾರೆ. ಶಾಲಾ ಮಕ್ಕಳಿಗೆ ಅವರ ಸರಳತೆಯ ಬಗ್ಗೆ, ಪ್ರೌಢ ಶಾಲಾ ಮಕ್ಕಳಿಗೆ ಅವರು ಬರೆದ ಪುಸ್ತಕಗಳು, ಪ್ರವಚನಗಳ ಪರಿಚಯವಾಗಬೇಕು. ಕಾಲೇಜು ವಿದ್ಯಾರ್ಥಿಗಳ ಸಿದ್ದೇಶ್ವ ಶ್ರೀಗಳ ತತ್ವಜ್ಞಾನ ಪಾಠಗಳಾಗಬೇಕು ಅಂತ ಭಕ್ತರು ಆಗ್ರಹಿಸುತ್ತಿದ್ದಾರೆ.

ತಿಕೋಟಾ: ಸಂತನಿಲ್ಲದೇ ಬಿಜ್ಜರಗಿಯಲ್ಲಿ ಈಗಲೂ ನೀರವ ಮೌನ..!

ಪೋಷಕರಿಂದ ಪಠ್ಯಕ್ಕಾಗಿ ಆಗ್ರಹ..!

ಕೋಟ್ಯಾಂತರ ಹೃದಯಗಳಲ್ಲಿ ವಿರಾಜಮಾನರಾಗಿರುವ ಸಿದ್ದೇಶ್ವರ ಶ್ರೀಗಳ ಬದುಕು ಶಾಲಾ ಪಠ್ಯಗಳಲ್ಲಿ ಅಳವಡಿಕೆಯಾಗಬೇಕು. ಮಕ್ಕಳು ಅದನ್ನ ಅಧ್ಯಯನ ಮಾಡಿ ಅವರಂತೆ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಮೇಲಾಗಿ ಶಾಲಾ ಮಕ್ಕಳಲ್ಲಿ ಬಾಲ್ಯದಲ್ಲೆ ಸಿದ್ದೇಶ್ವರ ಶ್ರೀಗಳಂತ ಮಹಾತ್ಮರ ಬದುಕು ಪಾಠವಾದರೇ ಮಕ್ಕಳ ಬದುಕು, ಭವಿಷ್ಯ ಉಜ್ವಲವಾಗುತ್ತೆ ಅನ್ನೋದು ಪೋಷಕರ ಮಾತಾಗಿದೆ. ಹೀಗಾಗಿ ಸ್ವತಃ ಶಾಲಾ ಮಕ್ಕಳ ಪೋಷಕರೆ ಸಿದ್ದೇಶ್ವರ ಶ್ರೀಗಳ ಬದುಕು ಪಾಠವಾಗಲಿ ಎಂದು ಆಗ್ರಹಿಸುತ್ತಿದ್ದಾರೆ.

ಪಠ್ಯದಲ್ಲಿ ಸಿದ್ದೇಶ್ವರ ಶ್ರೀಗಳ ಅಳವಡಿಕೆ ಎಲ್ಲರ ಆಶಯ: ಎಂ.ಬಿ.ಪಾಟೀಲ

ಶ್ರೀಗಳ ಶರ್ಟ್‌ಗೆ ಜೇಬುಗಳೇ ಇರಲಿಲ್ಲ, ಬ್ಯಾಂಕಲ್ಲಿ ಅಕೌಂಟ್ ಇಲ್ಲ..!

ಸಿದ್ದೇಶ್ವರ ಶ್ರೀಗಳಂತ ಸರಳತೆ ನಮಗೆ ಈ ಶತಮಾನದಲ್ಲಿ ಮತ್ಯಾರಲ್ಲಿಯೂ ನೋಡಲು, ಕೇಳಲು  ಸಿಗದು. ಆ ರೀತಿಯಲ್ಲಿ ಸರಳತೆಯನ್ನ ರೂಢಿಸಿಕೊಂಡವರು ಸಿದ್ದೇಶ್ವರ ಶ್ರೀಗಳು. ಸಿದ್ದೇಶ್ವರ ಸ್ವಾಮೀಜಿಗಳು ಅದೆಷ್ಟು ಸಿಂಪಲ್‌ ಅಂದ್ರೆ ಅವರ ವೇಶಭೂಷಣಗಳೆ ಅದನ್ನ ಸಾರಿ ಸಾರಿ ಹೇಳುತ್ವೆ. ಬಿಳಿ ಪಂಚೆ, ಬಿಳಿಯ ತೆಳುವ ಒಂದು ಶರ್ಟ್‌ ಅವರ ಖಾಯಂ ಉಡುಗೆ. ಅವು ಸಹ ಅವಶ್ಯಕತೆಗಿಂತ ಹೆಚ್ಚಿಲ್ಲ. ಅವರ ಶರ್ಟ್‌ ಗೆ ಜೇಬುಗಳು ಇರಲಿಲ್ಲ. ಪಾಸ್‌ ಬುಕ್‌ ಇಲ್ಲ, ಬ್ಯಾಂಕ್‌ ಅಕೌಂಟ್‌ ಇಲ್ಲ, ಸ್ವಂತ ವಾಹನ ಇಲ್ಲ, ಜಮೀನು, ಜಾಗ ಮತ್ತೊಂದು ಮಗದೊಂದು ಆಸ್ತಿ ಎನ್ನುವಂತದ್ದು ಇರಲಿಲ್ಲ. ಇದೀಷ್ಟೆ ಯಾಕೆ ಆಧಾರ್‌, ಎಲೆಕ್ಷನ್‌ ಕಾರ್ಡ್‌, ಕೊನೆ ಪಕ್ಷ ಹತ್ತಿರ ಕಮ್ಯೂನಿಕೇಶನ್‌ ಗಾಗಿ ಚಿಕ್ಕ ಮೊಬೈಲ್‌ ಹ್ಯಾಂಡ್‌ ಸೆಟ್‌ ಕೂಡ ಇರಲಿಲ್ಲ. ಇಷ್ಟೊಂದು ಸರಳವಾಗಿದ್ರು, ತಾವು ಇಷ್ಟು ಸರಳವಾಗಿದ್ದೇವೆ ಎಂತಲು ಅವರಿಗೆ ಗೊತ್ತಿರಲಿಲ್ಲ, ಅಷ್ಟೊಂದು ಸರಳತೆ ಸಿದ್ದೇಶ್ವರ ಶ್ರೀಗಳಲ್ಲಿತ್ತು..

ಸಿದ್ದೇಶ್ವರ ಶ್ರೀಗಳ ಪಠ್ಯದ ಬಗ್ಗೆ ಸಿಎಂ ಹೇಳಿದ್ದೇನು..!

ಇಂದು ಹಾವೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬಸವರಾಜ್‌ ಬೊಮ್ಮಾಯಿ ಸಿದ್ದೇಶ್ವರ ಶ್ರೀಗಳ ಪಠ್ಯ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದೇಶ್ವರ ಶ್ರೀಗಳು 2014 ರಲ್ಲಿ ತಮ್ಮ ಬದುಕಿನ ಪಯಣ ಮುಗಿದ ಮೇಲೆ ಏನು ಮಾಡಬೇಕು.. ಏನು ಮಾಡಬಾರದು ಅನ್ನೋದರ ಬಗ್ಗೆ ಬರೆದಿಟ್ಟಿರುವ ವಿಲ್‌ ಬಗ್ಗೆ ಪ್ರಸ್ತಾಪಿಸಿದ್ದಾರೆ. ಶ್ರೀಗಳ ಬರೆದಿಟ್ಟಿರುವ ವಿಲ್‌ ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷರು ಬಸವಲಿಂಗ ಶ್ರೀಗಳು ಹಾಗೂ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಜೊತೆಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

click me!