* ರಾಜ್ಯದಲ್ಲಿ ಶಾಲೆ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್
* ಕೊರೋನಾ ನಿರ್ವಹಣಾ ಸಭೆಯಲ್ಲಿ ತೀರ್ಮಾನ
* ಅಧಿಕೃತ ಘೋಷಿಸಿದಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಬೆಂಗಳೂರು, (ಆ.14): ರಾಜ್ಯಲ್ಲಿ ಶಾಲಾ-ಕಾಲೇಜು ಪ್ರಾರಂಭಕ್ಕೆ ಬೊಮ್ಮಾಯಿ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು. 9ರಿಂದ 12ನೇ ತರಗತಿ ವರೆಗೆ ಆ.23ರಿಂದ ಪ್ರಾರಂಭವಾಗಲಿವೆ.
ಇಂದು (ಆ.14) ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೊರೋನಾ ನಿರ್ವಹಣಾ ಸಭೆಯಲ್ಲಿ ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
23ರಿಂದ ಹೈಸ್ಕೂಲ್, ಕಾಲೇಜು ಆರಂಭಕ್ಕೆ ಶೀಘ್ರ ಮಾರ್ಗಸೂಚಿ
ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೊರೋನಾ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭಿಸಲಾಗುವುದು. ಸೋಂಕು ಹೆಚ್ಚಿರುವ ಗಡಿ ಜಿಲ್ಲೆಗಳಲ್ಲಿ ಶಾಲೆಗಳ ಪ್ರಾರಂಭ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲಾಗುವುದು. ಒಂದು ವಾರ ಶಾಲೆಯನ್ನು ಮುಚ್ಚುವ ಜೊತೆಗೆ ಸ್ಯಾನಿಟೈಸ್ ಮಾಡಿ ವಾರದ ನಂತರ ಶಾಲೆ ಆರಂಭಿಸಲಾಗುವುದು. ಜಿಲ್ಲಾವಾರು ಪಾಸಿಟಿವಿಟಿ ದರ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಪೋಷಕರು, ಶಾಲೆಯ ಶಿಕ್ಷಕ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಸೆಪ್ಟೆಂಬರ್ 23 ರಂದು 9 ರಿಂದ 12 ನೇ ತರಗತಿವರೆಗೆ ಶಾಲೆ ತೆರೆಯಲು ಎಸ್ಓಪಿ ತಯಾರಿಸಲಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡ್ತೇವೆ ಎಂದು ಮಾಹಿತಿ ನೀಡಿದರು.