ಕೊನೆಗೂ ಶಾಲೆಗಳು ಆರಂಭ : ಸಾಮಾಜಿಕ ಅಂತರದೊಂದಿಗೆ ತರಗತಿಗಳು ಶುರು

By Suvarna NewsFirst Published Nov 2, 2020, 3:19 PM IST
Highlights

ಕೊರೋನಾ ವೈರಸ್ ಸೋಂಕು ಹರಡುವಿಕೆ ಪ್ರಮಾಣ ಕೊಂಚ ತಗ್ಗಿದ  ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಪ್ರಾರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಇಂದಿನಿಂದ ಶಾಲೆ ಓಪನ್ ಆಗಿವೆ.

ಹೈದರಾಬಾದ್, (ನ.02):  ಕೋವಿಡ್-19 ಸೋಂಕು ಹರಡುವ ಭೀತಿ ಜಗತ್ತಿನ ಎಲ್ಲ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲೂ ಶೈಕ್ಷಣಿಕ ಕ್ಷೇತ್ರದ ಮೇಲೆ ಭಾರೀ ಹೊಡೆತ ಬಿದ್ದಿದೆ.  ಶೈಕ್ಷಣಿಕ ಕ್ಷೇತ್ರವೂ ಹೊರತಾಗಿಲ್ಲ. ಕಳೆದ ಐದಾರೂ ತಿಂಗಳಿನಿಂದ ಶೈಕ್ಷಣಿಕ ಬಂದ್ ಆಗಿದ್ದ ಚಟುವಟಿಕೆಗಳನ್ನು ಪ್ರಾರಂಭಿಸಲು ಸರ್ಕಾರಗಳು ಮುಂದಾಗಿವೆ. 

"

ಇನ್ನು ಕೆಲ ರಾಜ್ಯಗಳಲ್ಲಿ ಇಂದಿನಿಂದ ಶಾಲೆಗಳು ಪ್ರಾರಂಭವಾಗಿವೆ. ತೆಲಂಗಾಣ, ಆಂಧ್ರಪ್ರದೇಶ ಹಾಗೂ ಅಸ್ಸಾಂ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕೊರೋನಾ ಮಾರ್ಗಸೂಚಿಗಳೊಂದಿಗೆ ಶಾಲೆ ಶುರು ಮಾಡಲಾಗಿದೆ.

ಶಾಲೆ-ಕಾಲೇಜು, ಚಿತ್ರಮಂದಿರ ಪುನಾರಂಭಕ್ಕೆ ಗ್ರೀನ್ ಸಿಗ್ನಲ್

ಆಂಧ್ರಪ್ರದೇಶ ಸರ್ಕಾರ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದ್ದು, ಇಂದಿನಿಂದ (ನ.2) ಬೆಳಗ್ಗೆ 9.15 ರಿಂದ ಮಧ್ಯಾಹ್ನ 1:45ರ ವರೆಗೆ ತರಗತಿಗಳು ನಡೆಸಲು ಅನುಮತಿ ನೀಡಲಾಗಿದೆ. ಅದು ಕೇವಲ 9 ಹಾಗೂ 10 ತರಗತಿ ಮಾತ್ರ.

ಅಲ್ಲದೇ ಸಮ-ಬೆಸ ಸಂಖ್ಯೆ ಆಧಾರದಲ್ಲಿ ತರಗತಿ ಆರಂಭಿಸಲಿದೆ. ಜೊತೆಗೆ ಮಕ್ಕಳ ಮಧ್ಯಾಹ್ನದ ಊಟಕ್ಕೂ ವ್ಯವಸ್ಥೆ ಮಾಡಿದೆ. ಈ ಮೂಲಕ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಆಂಧ್ರಪ್ರದೇಶದಲ್ಲಿ ಶಾಲೆಗಳು ಆರಂಭಗೊಂಡಿವೆ.

 ಬಿಗ್ ನ್ಯೂಸ್: ಕರ್ನಾಟಕದಲ್ಲಿ ಶಾಲೆ ಪ್ರಾರಂಭಿಸಲು ಸಕಲ ಸಿದ್ಧತೆ

ಇನ್ನು ತಮಿಳುನಾಡಿನಲ್ಲಿ ಇದೇ ನವೆಂಬರ್.16ರಿಂದ ಶಾಲೆ, ಕಾಲೇಜು, ಸಂಶೋಧನಾ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಹೋಟೆಲ್ ಗಳನ್ನು ಪುನಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅಧಿಕೃತವಾಗಿ ಘೋಷಿಸಿದ್ದಾರೆ. 9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆ ಆರಂಭಿಸುವುದಕ್ಕೆ ಸೂಚಿಸಿದ್ದಾರೆ.

"

ಕರ್ನಾಟಕದಲ್ಲಿ ಯಾವಾಗ?
ಇನ್ನು ಕರ್ನಾಟಕದಲ್ಲಿ ಶಾಲೆ ಪ್ರಾರಂಭಯವಾಗ ಎನ್ನುವುದು ಭಾರೀ ಚರ್ಚೆಗೆ ನಡೆಯುತ್ತಿದೆ. ಮೂಲಗಳ ಪ್ರಕಾರ ರಾಜ್ಯ ಸರ್ಕಾರ ನವೆಂಬರ್ ಕೊನೆ ವಾರದಲ್ಲಿ ಶಾಲೆ ತೆರೆಯಲು ಚಿಂತನೆ ನಡೆಸಿ ಎಂದು ಮೂಲಗಳು ತಿಳಿಸಿದೆ. ಈಗಾಗಲೇ ಶಾಲೆ ಪ್ರಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಸಹ ಸುತ್ತೋಲೆ ಹೊರಡಿಸಿದೆ.

click me!