ಶಾಲೆಯೊಂದರಲ್ಲಿ ದೊಡ್ಡ ಮಕ್ಕಳ ಊಟದ ಉಳಿಕೆಯನ್ನು ನಾಯಿಗಳಿಗೆ ಹಾಕಲು ಇಡಲಾಗಿದ್ದ ಬಕೆಟ್‌ನಲ್ಲಿ ಚಿಕ್ಕ ಮಕ್ಕಳಿಗೆ ಊಟ ಬಡಿಸಿರುವುದು ಬೆಳಕಿಗೆ ಬಂದಿದೆ. ಪೋಷಕರು ಶಾಲೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಊಟ ಕೊಡುತ್ತಿದ್ದರು. ದೊಡ್ಡ ಮಕ್ಕಳು ಊಟ ಮಾಡಿ ಮುಗಿಸಿದ ನಂತರ ಚಿಕ್ಕ ಮಕ್ಕಳಿಗೆ ಊಟವನ್ನು ಕೊಡುತ್ತಿದ್ದರು. ಆದರೆ, ಇಲ್ಲಿ ದೊಡ್ಡ ಮಕ್ಕಳು ಊಟ ಮಾಡಿ ಮುಗಿಸಿದ ನಂತರ ಅವರು ನಾಯಿಗಳಿಗೆ ಇಡಲಾದ ಬಕೆಟ್‌ನಲ್ಲಿ ಸುರಿಯುತ್ತಿದ್ದ ಆಹಾರವನ್ನು ಚಿಕ್ಕ ಮಕ್ಕಳಿಗೆ ಊಟ ಬಡಿಸಿದ್ದಾರೆ. ಚಿಕ್ಕ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾಗ ಶಾಲೆಗೆ ಬಂದು ನೋಡಿದಾಗ ಈ ವಿಚಾರ ಪೋಷಕರಿಗೆ ಗೊತ್ತಾಗಿದೆ. ಇದೀಗ ಎಲ್ಲ ಪೋಷಕರು ಶಾಲೆಯ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.
ಈ ಘಟನೆ ಪೂರ್ವ ಚೀನಾದ ಲಿಯೋನಿಂಗ್ ಪ್ರಾಂತ್ಯದ ಹುವಾನ್ರೆನ್ ಕೌಂಟಿಯ ವುಲಿಡಿಯಾನ್ಸಿ ಶಾಲೆಯಲ್ಲಿ ನಡೆದಿದೆ. ಶಾಲೆಯ ವಿರುದ್ಧ ಜನರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ವುಲಿಡಿಯಾನ್ಸಿ ಶಾಲೆಯಲ್ಲಿ ಮಕ್ಕಳಿಗೆ ನಾಯಿಗಳ ಊಟದ ಬಕೆಟ್‌ನಲ್ಲಿ ಊಟ ಹಾಕಿದ್ದೇ ಇದಕ್ಕೆ ಕಾರಣ. ದೊಡ್ಡ ಮಕ್ಕಳು ತಿಂದು ಉಳಿಸಿದ ಊಟವನ್ನು ನಾಯಿಗಳಿಗೆ ಹಾಕಲು ಈ ಬಕೆಟ್‌ನಲ್ಲಿ ಸಂಗ್ರಹಿಸಲಾಗುತ್ತಿತ್ತು. ಇದೇ ಬಕೆಟ್‌ನಲ್ಲಿ ಚಿಕ್ಕ ಮಕ್ಕಳಿಗೆ ಊಟ ಹಾಕಿದ್ದರಿಂದ ಜನರಿಂದ ಆಕ್ರೋಶ ವ್ಯಕ್ತವಾಗಿದೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ದೊಡ್ಡ ಮಕ್ಕಳು ತಿಂದು ಉಳಿಸಿದ ಊಟವನ್ನು ಸಂಗ್ರಹಿಸಲು ಶಾಲಾ ಸಿಬ್ಬಂದಿ ಈ ಬಕೆಟ್ ಇಟ್ಟಿದ್ದರು. ನಂತರ ಈ ಊಟವನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಸಾಕುಪ್ರಾಣಿಗಳಿಗೆ ತಿನ್ನಿಸುತ್ತಿದ್ದರು ಎಂದು ವರದಿಯಾಗಿದೆ. ದೊಡ್ಡ ಮಕ್ಕಳು ಕ್ಯಾಂಟೀನ್‌ನಲ್ಲಿ ಊಟ ಮಾಡುವಾಗ ಶಾಲಾ ಸಿಬ್ಬಂದಿ ಈ ಬಕೆಟ್‌ನಲ್ಲಿ ಚಿಕ್ಕ ಮಕ್ಕಳಿಗೆ ಊಟ ಹಾಕಿರುವುದನ್ನು ನೋಡಿದ್ದಾರೆ. ಇದರಿಂದ ಈ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ದೇಶದ ಎಲ್ಲಾ ಮನೆಗಳ ಕಿಟಕಿ ಕ್ಲೋಸ್ ಮಾಡಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೊಸ ರೂಲ್ಸ್!
ಈ ವಿಷಯ ತಿಳಿದ ಪೋಷಕರು ಶಾಲೆಗೆ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು. ಶಾಲಾಡಳಿತ ಮಂಡಳಿ ದೃಶ್ಯಾವಳಿಗಳನ್ನು ಪೋಷಕರಿಗೆ ತೋರಿಸಿದೆ. ದೃಶ್ಯಾವಳಿಗಳನ್ನು ನೋಡಿದ ಪೋಷಕರು ಕಣ್ಣೀರು ಹಾಕಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಶಾಲೆಯ ಪರವಾನಗಿಯನ್ನು ರದ್ದುಗೊಳಿಸಬೇಕು ಮತ್ತು ತಪ್ಪಿತಸ್ಥ ಶಾಲಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಜಿಯಾಂಗ್ಸಿ ಪ್ರಾಂತ್ಯದ ಶಾಲೆಯೊಂದರಲ್ಲಿ ಮಕ್ಕಳ ಊಟದಲ್ಲಿ ಇಲಿಯ ತಲೆ ಪತ್ತೆಯಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಶಾಲಾಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: ವಿಶ್ವದ ಕೇಬಲ್ ಟಿವಿ ಪಿತಾಮಹ ಚಾರ್ಲ್ಸ್ ಡೋಲನ್ ಇನ್ನಿಲ್ಲ