ಕೆಜಿ ಸ್ಕೂಲ್‌ ಫೀಸ್‌ ನೋಡಿ ಹೆತ್ತವರು ಶಾಕ್‌, ಪೋಷಕರ ಓರಿಯೆಂಟೇಶನ್ ಶುಲ್ಕ 8400 ರೂ!

By Gowthami K  |  First Published Dec 11, 2023, 12:32 PM IST

2024-25ರ ನರ್ಸರಿ ಮತ್ತು ಜೂನಿಯರ್ ಕೆಜಿ ಬ್ಯಾಚ್‌ಗಾಗಿ ಶಾಲೆಯ ಶುಲ್ಕಕ್ಕೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.


2024-25ರ ನರ್ಸರಿ ಮತ್ತು ಜೂನಿಯರ್ ಕೆಜಿ ಬ್ಯಾಚ್‌ಗಾಗಿ ಶಾಲೆಯ ಶುಲ್ಕಕ್ಕೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಆ ಶಾಲೆಯು ಅವರ ನರ್ಸರಿ ಮತ್ತು ಎಲ್‌ಕೆಜಿ ವಿದ್ಯಾರ್ಥಿಗಳ ಜೊತೆಗೆ ಪೋಷಕರಿಗೆ ಕೂಡ 'ಓರಿಯಂಟೇಶನ್ ಶುಲ್ಕ' ವಿಧಿಸಿದೆ.

ನನ್ನ ತಂದೆ ನನ್ನನ್ನು ಸರ್ಕಾರಿ ಶಾಲೆಗೆ ಏಕೆ ಕಳುಹಿಸಿದ್ದಾರೆಂದು ಈಗ ನನಗೆ ಅರ್ಥವಾಗುತ್ತಿದೆ ಎಂದು ಎಕ್ಸ್‌ನಲ್ಲಿ ಈ ಟ್ವೀಟ್‌ ಅನ್ನು ಹಂಚಿಕೊಳ್ಳಲಾಗಿದೆ.

Tap to resize

Latest Videos

undefined

 

अब समझ आ रहा है, पिता जी ने मुझे सरकारी स्कूल में क्यों पढ़ाया था 😭 pic.twitter.com/fkyPlDT6WP

— Raja Babu (@GaurangBhardwa1)

ಮುದ್ದು ಮಾಡಲು ಬಳಿ ಬಂದ ನಾಯಿಮರಿಯನ್ನು ಹೊಡೆದು ಕೊಂದ ಪಾಪಿ!

2024-25 ಬ್ಯಾಚ್‌ಗಾಗಿ ನರ್ಸರಿ ಮತ್ತು ಜೂನಿಯರ್ ಕೆಜಿ ತರಗತಿಯ ಶುಲ್ಕದ ವಿವರ ಎಷ್ಟಿದೆ ಎಂದು ಈ ಚಿತ್ರ ತೋರಿಸುತ್ತದೆ. ಪ್ರವೇಶ ಶುಲ್ಕಗಳು, ಎಚ್ಚರಿಕೆಯ ಹಣ, ವಾರ್ಷಿಕ ಶುಲ್ಕಗಳು, ಬೋಧನಾ ಶುಲ್ಕಗಳು ಮತ್ತು ಅಭಿವೃದ್ಧಿ ಶುಲ್ಕಗಳಂತಹ ನಿಯಮಿತ ವೆಚ್ಚಗಳ ಜೊತೆಗೆ, ಶಾಲೆಯು ಒಂದು ಬಾರಿ ಓರಿಯಂಟೇಶನ್ ಶುಲ್ಕವಾಗಿ ಪೋಷಕರಿಗೆ ಹೆಚ್ಚುವರಿ  8,400 ಅನ್ನು ವಿಧಿಸಿದೆ

 ಪಾವತಿಸಬೇಕಾದ ಓರಿಯಂಟೇಶನ್ ಶುಲ್ಕವನ್ನು ಹೊರತುಪಡಿಸಿ ಇದರಲ್ಲಿ ಶಾಲೆಯು ಪ್ರವೇಶದ ವೆಚ್ಚವನ್ನು ಸಹ ವಿವರಿಸಿದೆ. ಒಟ್ಟು ರೂ. 1,51,656, ದಾಖಲಾತಿ ಸಮಯದಲ್ಲಿ ಪಾವತಿ ಮಾಡಬೇಕಾದ ಶುಲ್ಕವಾಗಿದೆ.

ಟ್ವೀಟ್ ಅನ್ನು ಡಿಸೆಂಬರ್ 7 ರಂದು ಹಂಚಿಕೊಳ್ಳಲಾಗಿದೆ. ಇದು ಎಂಟು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು,  ಐದು ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಹಲವರು ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ ಮತ್ತು ಅನೇಕರು ಕಾಮೆಂಟ್ಸ್ ಹಾಕಿ ಟೀಕಿಸಿದ್ದಾರೆ.

ದ್ವಿತೀಯ ಪಿಯುಸಿ ಮತ್ತು 10ನೇ ತರಗತಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ವಿವರ

ಇಂಜಿನಿಯರಿಂಗ್ ಒಂದು ವರ್ಷದ ಶುಲ್ಕ ಇದಕ್ಕಿಂತ ಕಡಿಮೆ ಇತ್ತು ಎಂದು ವ್ಯಕ್ತಿಯೊಬ್ಬರು ಕಮೆಂಟ್‌ ಹಾಕಿದ್ದಾರೆ.  ಈ ಶಾಲೆಯ ಶುಲ್ಕವು ನನ್ನ ಬಿಟೆಕ್ ಕಾಲೇಜು ಶುಲ್ಕಕ್ಕಿಂತ ಹೆಚ್ಚಾಗಿದೆ ಮಗದೊಬ್ಬ ಕಮೆಂಟ್ ಮಾಡಿದ್ದಾರೆ.

ಎಲ್ಲಾ ಸೇರಿದಂತೆ ನಾನು ನರ್ಸರಿ ಪ್ರವೇಶಕ್ಕಾಗಿ  ಒಟ್ಟು ₹ 1,95,000 ಪಾವತಿಸಿದ್ದೇನೆ. ಇದರಲ್ಲಿ ಸಾರಿಗೆ, ಊಟ ಮತ್ತು ದೇಣಿಗೆ ಎಲ್ಲವೂ ಸೇರಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

click me!