ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ, ಕೊಡಗು ಸೈನಿಕ ಶಾಲೆ ಸೇರ ಬಯಸುವವರಿಗೆ ಸುವರ್ಣಾವಕಾಶ

Published : Nov 11, 2026, 10:14 PM IST
Sainik School Kodagu

ಸಾರಾಂಶ

ಕೊಡಗಿನ ಕೂಡಿಗೆಯಲ್ಲಿರುವ ಸೈನಿಕ ಶಾಲೆಯಲ್ಲಿ 2027-28ನೇ ಸಾಲಿನ 6ನೇ ಮತ್ತು 9ನೇ ತರಗತಿಗಳ ಪ್ರವೇಶಾತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಎನ್‌ಟಿಎ ನಡೆಸುವ ಈ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಮತ್ತು ವಿದ್ಯಾರ್ಥಿವೇತನ ಲಭ್ಯ.

ದಾವಣಗೆರೆ: ಭಾರತ ಸರ್ಕಾರದ ರಕ್ಷಣೆ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೊಡಗಿನ ಕೂಡಿಗೆಯಲ್ಲಿರುವ ಸೈನಿಕ ಶಾಲೆಯಲ್ಲಿ 2027-28ನೇ ಶೈಕ್ಷಣಿಕ ಸಾಲಿಗಾಗಿ 6ನೇ ಮತ್ತು 9ನೇ ತರಗತಿಗಳ ಪ್ರವೇಶಾತಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಲಿರುವ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸೈನಿಕ ಶಾಲೆಯು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ ಸಂಯೋಜಿತಗೊಂಡಿದ್ದು, ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ, ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸಜ್ಜುಗೊಳಿಸಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಭಾರತೀಯ ನೌಕಾ ಅಕಾಡೆಮಿ ಮತ್ತು ಇತರ ಸೇನಾ ಸಂಸ್ಥೆಗಳಲ್ಲಿ ಉನ್ನತ ಅಧಿಕಾರಿಗಳಾಗಿ ಸೇರ್ಪಡೆಗೊಳಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಕರ್ನಾಟಕ ಮೂಲದ ಅರ್ಹ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ರಕ್ಷಣಾ ಸಚಿವಾಲಯದಿಂದ ವಿದ್ಯಾರ್ಥಿ ವೇತನದ ಸೌಲಭ್ಯವೂ ದೊರೆಯಲಿದೆ. ಬಾಲಕರೊಂದಿಗೆ ಬಾಲಕಿಯರಿಗೂ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈ ಪ್ರವೇಶ ಪರೀಕ್ಷೆ ನಡೆಸಲಿದ್ದು, ಪರೀಕ್ಷೆಯು 2027ರ ಜ.31 ರಂದು ನಡೆಯಲಿದೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳನ್ನಾಗಿ ರೂಪಿಸಲು ಅಗತ್ಯವಿರುವ ಶೈಕ್ಷಣಿಕ ಮತ್ತು ದೈಹಿಕ ತರಬೇತಿ ಈ ವಸತಿ ಶಾಲೆಯಲ್ಲಿ ನೀಡಲಾಗುತ್ತದೆ. ಕರ್ನಾಟಕದ ಮೂಲ ನಿವಾಸಿಗಳಾಗಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಹಾಗೂ ರಕ್ಷಣಾ ಸಚಿವಾಲಯದ ವತಿಯಿಂದ ವಿದ್ಯಾರ್ಥಿವೇತನ (ಸ್ಕಾಲರ್ ಶಿಪ್) ಸೌಲಭ್ಯವೂ ಲಭ್ಯವಿದೆ.

ಅರ್ಜಿಗಳನ್ನು ಡಿ.2ರೊಳಗೆ ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್: ** https://exams.nta.nic.in/sainik-school-society **ಅಥವಾ ಸೈನಿಕ ಶಾಲೆ ಕೊಡಗಿನ ವೆಬ್‌ಸೈಟ್: ** www.sainikschoolkodagu.edu.in ** ಮುಖಾಂತರ ಸಲ್ಲಿಸಬಹುದು. ಪ್ರವೇಶ ಪರೀಕ್ಷೆ ಜನವರಿ 31, 2027ಕ್ಕೆ.

ಪರೀಕ್ಷಾ ಪದ್ಧತಿ, ವಯೋಮಿತಿ, ಸೀಟುಗಳ ಮೀಸಲಾತಿ, ಪರೀಕ್ಷಾ ಕೇಂದ್ರಗಳು ಮತ್ತು ಶುಲ್ಕ ವಿವರಗಳಿಗಾಗಿ ಅಭ್ಯರ್ಥಿಗಳು ಹಾಗೂ ಪೋಷಕರು ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ ಎಂದು ಸೈನಿಕ ಶಾಲೆ ಕೊಡಗು ಶಾಲೆಯ ಆಡಳಿತಾಧಿಕಾರಿಗಳು/ ಪ್ರಾಂಶುಪಾಲರು ತಿಳಿಸಿದ್ದಾರೆ.

ಶತಮಾನದ ಶಾಲೆ ಈಗ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಣ

ಮೇಲುಕೋಟೆ: 150 ವರ್ಷ ಪೂರೈಸಿದ ಜಿಲ್ಲೆಯ ಪ್ರಪ್ರಥಮ ಶತಮಾನದ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಣವಾಗಲಿರುವುದು ಸಂತಸ ತಂದಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯಶಿಕ್ಷಕ ವಿ.ವೆಂಕಟರಾಮೇಗೌಡ ಆಶಯ ವ್ಯಕ್ತಪಡಿಸಿದರು.

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ಈ ಶಾಲೆಯನ್ನು ಶಿಕ್ಷಣ ಇಲಾಖೆ ಸರ್ಕಾರಿ ಪ್ರೌಢೆಶಾಲೆ ಆರಂಭಿಸಿ ಕೊಡುಗೆ ನೀಡಿದೆ. ಇದೀಗ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಅನುಮೂದನೆ ದೊರೆತಿರುವುದು ಸಂತಸ ತರಿಸಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಬಡಮಕ್ಕಳ ಶಿಕ್ಷಣಕ್ಕೆ ಚೈತನ್ಯ ತುಂಬಲಿದೆ ಎಂದರು.

ಮುಖ್ಯಶಿಕ್ಷಕರು, ಸಹ ಶಿಕ್ಷಕರ ಕ್ರಿಯಾಶೀಲತೆ ಪರಿಣಾಮ ಕ್ಲಸ್ಟರ್‌ನ ಉತ್ಸಾಹಿ ಶಿಕ್ಷಕರ ಸಹಕಾರದಲ್ಲಿ ಶತಮಾನದ ಸರ್ಕಾರಿ ಬಾಲಕರ ಶಾಲೆಯಲ್ಲಿ ಇಲಾಖೆ ಶೈಕ್ಷಣಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುತ್ತಾ ಬಂದಿರುವುದು ಮಾದರಿಯಾಗಿದೆ ಎಂದರು.

ಮೇಲುಕೋಟೆ ಶೈಕ್ಷಣಿಕ ವೃತ್ತದಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಇಲಾಖೆ ನೀಡಿದ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಮಕ್ಕಳ ಪ್ರತಿಭೆಯನ್ನು ಕಾರಂಜಿಯಂತೆ ಪುಟಿದೇಳುವಂತೆ ಮಾಡಲಾಗುತ್ತಿದೆ ಎಂದರು.

ಪದವೀಧರ ಶಿಕ್ಷಕರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಮೇಲುಕೋಟೆಯ ಪ್ರಮುಖ ಸ್ಥಳದಲ್ಲಿ 10 ಕಿಮೀ ವ್ಯಾಪ್ತಿಯಲ್ಲಿ ಪ್ರೌಢಶಾಲೆ ಇಲ್ಲದೆ ಮಕ್ಕಳು ಶೈಕ್ಷಣಿಕವಾಗಿ ತೊಂದರೆ ಅನುಭವಿಸುತ್ತಿದ್ದರು. ಕಳೆದ ಬಾರಿ ಪ್ರತಿಭಾ ಕಾರಂಜಿಯ ವೇದಿಕೆಯಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸಲು ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಸಂತಾನರಾಮನ್‌ಗೆ ಸಲಹೆ ನೀಡಲಾಗಿತ್ತು. ಮುಖ್ಯಶಿಕ್ಷಕರು ಶಾಸಕರು ಮತ್ತು ಅಧಿಕಾರಿಗಳ ಸಹಕಾರದಲ್ಲಿ ಮೇಲುಕೋಟೆಗೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸಿ ಪ್ರಸಕ್ತ ಸಾಲಿನಲ್ಲೇ ಆರಂಭಿಸಿರುವುದು ಶ್ಲಾಘನೀಯ ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್.ಕೆ.ಜಿಯಿಂದ ಪ್ರೌಢಶಾಲೆಯವರೆಗೆ ತರಗತಿ ಹೊಂದಿರುವ ಶಾಲೆಯನ್ನು ಇದೀಗ ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ ಉನ್ನತೀಕರಿಸಲು ಶ್ರಮಿಸುತ್ತಿರುವುದು ಮಕ್ಕಳಿಗೆ ವರದಾನವಾಗಲಿದೆ. ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸುವ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಸಿಆರ್.ಪಿ ಬೆಟ್ಟಸ್ವಾಮಿಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಮಾರ್, ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್, ಜಕ್ಕನಹಳ್ಳಿ ಶಾಲೆ ಮುಖ್ಯಶಿಕ್ಷಕ ಬಸವರಾಜು, ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಮಹಾಲಕ್ಷ್ಮಿ, ನಿತ್ಯಾ, ಶ್ವೇತ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇದೇ ವೇಳೆ ಚಿತ್ರಕಲೆ, ವಿವಿಧ ವೇಷ, ಕ್ಲೇಮಾಡಲಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ನೂರಾರು ಮಕ್ಕಳು ಭಾಗವಹಿಸಿ ಪ್ರತಿಭೆ ಅನಾವರಣ ಮಾಡಿ ಬಹುಮಾನ ಗಳಿಸಿದರು.

PREV
Read more Articles on
click me!

Recommended Stories

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 171 ಮೇಲ್ವಿಚಾರಕಿ ಹುದ್ದೆಗಳಿಗೆ ನೇಮಕಾತಿ, ತೃತೀಯ ಲಿಂಗಿಗಳಿಗೂ ಅವಕಾಶ
ವಿಷ್ಣುವರ್ಧನ್ ಜೊತೆ ನಟಿಸಿ ಮನೆಮಾತಾಗಿದ್ದ ಕ್ಯೂಟ್ ನಟಿ: 52ರಲ್ಲೂ ಮದುವೆಯಾಗದೆ ಉಳಿದಿದ್ದೇಕೆ?