ಆರ್.ವಿ. ಇಂಜಿನಿಯರಿಂಗ್ ಕಾಲೇಜು: ಸೆಮಿಕಂಡಕ್ಟರ್ ತಂತ್ರಜ್ಞಾನ ಕುರಿತ 12 ದಿನದ ತರಬೇತಿ ಕಾರ್ಯಾಗಾರ ಆರಂಭ!

By Sathish Kumar KH  |  First Published Aug 12, 2024, 6:12 PM IST

ಆರ್.ವಿ. ಕಾಲೇಜಿನಲ್ಲಿ ಭವಿಷ್ಯದ ಸೆಮಿಕಂಡಕ್ಟರ್ ತಂತ್ರಜ್ಞಾನದ ಕುರಿತಂತೆ 12 ದಿನಗಳ ಅಧ್ಯಾಪಕರ ತರಬೇತಿ ಕಾರ್ಯಾಗಾರ ಆರಂಭ.


ಬೆಂಗಳೂರು (ಆ.12): ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಆರ್.ವಿ. ಇಂಜಿನಿಯರಿಂಗ್ ಕಾಲೇಜು) ಭವಿಷ್ಯದ ಸೆಮಿಕಂಡಕ್ಟರ್ ತಂತ್ರಜ್ಞಾನದ ಕುರಿತಂತೆ 12 ದಿನಗಳ ಅಧ್ಯಾಪಕರ ತರಬೇತಿ ಕಾರ್ಯಾಗಾರಕ್ಕೆ ಸೋಮವಾರ ವಿಎಲ್‌ಎಸ್‌ಐ ವಿನ್ಯಾಸ ವ್ಯವಸ್ಥೆ (VLSI System design) ಸಂಸ್ಥೆಯ ಸಂಸ್ಥಾಪಕ ಸಿಇಒ ಕುನಾಲ್ ಘೋಷಾಲ್ ಚಾಲನೆ ನೀಡಿದರು.

ಎಐಸಿಟಿಇ ಅಂಗಸಂಸ್ಥೆ ಹಾಗೂ ಎಟಿಎಲ್ ಸಂಸ್ಥೆ ವತಿಯಿಂದ ವಿದ್ಯುನ್ಮಾನ ಮತ್ತು ಸಂವಹನ ತಂತ್ರಶಾಸ್ತ್ರ, ವಿಎಲ್‌ಎಸ್‌ಐ ವಿನ್ಯಾಸ ವ್ಯವಸ್ಥೆ, ಐಇಇಇ ಸಿಎಎಸ್‌ಎಸ್‌ ಬೆಂಗಳೂರು ವಿಭಾಗ, ವಿದ್ಯಾರ್ಥಿ ಶಾಖೆ ಮತ್ತು ಐಸಿಎಎಸ್‌ ಸಂಸ್ಥೆಗಳು ತಾಂತ್ರಿಕ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಅಧ್ಯಾಪಕ ಸಿಬ್ಬಂದಿ ತರಬೇತಿ ಕಾರ್ಯಾಗಾರಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಕಾರ್ಯಾಗಾರವು ಆ.12ರಿಂದ ಆ.24ರವರೆಗೆ ನಡೆಯಲಿದ್ದು, 'ಭವಿಷ್ಯದ ಸೆಮಿಕಂಡಕ್ಟರ್ ತಂತ್ರಜ್ಞಾನಗಳಿಗೆ ಮುಂದಿನ ಪೀಳಿಗೆಯ ಸಿಸ್ಟಮ್ ಆನ್ ಚಿಪ್ ವಿನ್ಯಾಸ' ಎಂಬ ವಿಷಯದ ಬಗ್ಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಗಳು, ತಂತ್ರಜ್ಞರು, ವಿಜ್ಞಾನಿಗಳು ವಿಸ್ತೃತ ಮಾಹಿತಿ ನೀಡಲಿದ್ದಾರೆ. ಈ ಮೂಲಕ ಅಧ್ಯಾಪಕರಿಗೆ ತರಬೇತಿ ಕಾರ್ಯಾಗಾರದ ಜೊತೆಗೆ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನೂ ರವಾನಿಸಕಾಗುತ್ತಿದೆ. 

Latest Videos

undefined

ಚಾಮರಾಜಪೇಟೆ ಕ್ಷೇತ್ರದಲ್ಲಿ 1 ಲಕ್ಷ ಬಾಂಗ್ಲಾ ಮುಸ್ಲಿಮರಿದ್ದಾರೆ; ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್

ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ತಂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ವಿ.ರವೀಶ್ ಆರಾಧ್ಯ ಆರಂಭಿಕ ನುಡಿಗಳನ್ನಾಡಿ ಕಾರ್ಯಾಗಾರಗಳ ಮಹತ್ವವನ್ನು ತಿಳಿಸಿದರು. ಕಾರ್ಯಾಗಾರದ ಮುಖ್ಯ ಸಂಚಾಲಕ ಡಾ.ಶೈಲಶ್ರೀ ಎನ್ ಮಾತನಾಡಿ, ಕಾರ್ಯಾಗಾರದ ಸಂಪೂರ್ಣ ರೂಪುರೇಶೆ, ಉಪನ್ಯಾಸಗಳ ಸೆಸನ್ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದರು. ಜೊತೆಗೆ 12 ದಿನಗಳ ಕಾಲ ನಡೆಯುವ ಕಾರ್ಯಾಗಾರದಲ್ಲಿ ಭಾಗವಹಿಸಲು ಬಂದ ಎಲ್ಲ ಅಭ್ಯರ್ಥಿಗಳಿಗೆ ಉತ್ತಮ ವ್ಯವಸ್ಥೆ ಮಾಡುವುದಾಗಿ ಹೇಳಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ  VLSI System design ಸಂಸ್ಥೆಯ ಸಂಸ್ಥಾಪಕ ಸಿಇಒ ಕುನಾಲ್ ಘೋಷ್ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಆರ್ಥಿಕ ಬುದ್ಧಿಮತ್ತೆಯ ಉಪಯೋಗಗಳು ಹಾಗೂ ತಂತ್ರಜ್ಞಾನದಲ್ಲಿ ಅದರ ಬಳಕೆಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಮುಂದುವರೆದು, ವಿದ್ಯಾನ್ಮಾನ ಉತ್ಪಾದನೆಯಲ್ಲಿ ಅಮೂಲಾಗ್ರ  ಹೆಚ್ಚಳವನ್ನು ತರುವುದಾಗಿ ಹೇಳಿದರು. ನಂತರ ಮಾತನಾಡಿದ ಗೌರವ ಅತಿಥಿ ಅಯಾನ್ ದತ್ತಾ , ತಾಂತ್ರಿಕ ಯೋಜನೆಗಳ ಮೂಲಕ ಶಿಕ್ಷಣವನ್ನು ಹೆಚ್ಚು ಹೆಚ್ಚು ಪಡೆಯಬೇಕು ಎಂದರು. 

ಲಾಲ್‌ಬಾಗ್‌ ಫ್ಲವರ್‌ ಶೋ ,ಗುಡ್ ನ್ಯೂಸ್ ನೀಡಿದ ನಮ್ಮ ಮೆಟ್ರೋ, ಪೇಪರ್ ಟಿಕೆಟ್ ಎಲ್ಲಿ ಸಿಗಲಿದೆ?

ಇನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎನ್.ಸುಬ್ರಮಣ್ಯ ಮಾತನಾಡಿ , ಪ್ರಸ್ತುತ ಉದ್ಯಮದಲ್ಲಿ ನೂತನ ಶಿಕ್ಷಣ ನೀತಿ ಯಾವ ರೀತಿಯಲ್ಲಿ ಬದಲಾವಣೆ ತರಲಿದೆ. ನಮ್ಮ ವಿದ್ಯಾಲಯದಿಂದ ಅಧ್ಯಾಪಕರನ್ನು ಹಾಗೂ ಕೆಲವು ವಿದ್ಯಾರ್ಥಿಗಳನ್ನು ತೈವಾನಿಗೆ ಕಳಿಸಿ ತರಬೇತಿ ಕೊಡಿಸಿ, ಸೆಮಿಕಂಡಕ್ಟರ್ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಪರಿಸರವನ್ನು ವಿದ್ಯಾಲಯದಲ್ಲಿ ನಿರ್ಮಿಸುವುದಾಗಿ ಹೇಳಿದರು.

click me!