* ಶಾಲೆ ಪ್ರಾರಂಭ ದಿನಾಂಕ ವಿಸ್ತರಣೆ ಬಗ್ಗೆ ಗುಸು-ಗುಸು
* ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ವಿರೋಧ
* ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸಿಎಂಗೆ ಪತ್ರ
ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
ಬೆಂಗಳೂರು, (ಮೇ.09): ಇದೇ ಮೇ 16 ರಿಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭವಾಗ್ತ ಇದೆ. ಈ ಭಾರಿ ಶೈಕ್ಷಣಿಕ ವರ್ಷವನ್ನ 15 ದಿನ ಮುಂಚಿತವಾಗಿ ಶಾಲೆ ಪ್ರಾರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಮೇ 16 ರಿಂದ ಕಲಿಕಾ ಚೇತರಿಕೆ ಪ್ರಾರಂಭಿಸಲು ವೇಳಾಪಟ್ಟಿ ಕೂಡ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.ಶಾಲೆ ಪ್ರಾರಂಭ ದಿನಾಂಕ ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸಿಎಂ ಪತ್ರ ಬರೆದಿದ್ದಾರೆ.
ಆದ್ರೆ ಶಾಲೆ ಪ್ರಾರಂಭದ ದಿನಾಂಕ ವಿಸ್ತರಣೆಗೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ತೀವ್ರವಾಗಿ ವಿರೋಧಿಸಿದೆ.ಕಳೆದ ಎರಡು ವರ್ಷಗಳಿಂದ ಕೊರೊನಾ ದಿಂದ ಶಾಲೆ ಸರಿಯಾಗಿ ನಡೆದಿಲ್ಲ.ಮಕ್ಕಳಿಗೆ ಕಲಿಕಾ ಚೇತರಿಕೆ ಅಂಗವಾಗಿ 15 ದಿನ ಮುಂಚಿತವಾಗಿ ಶಾಲೆ ಪ್ರಾರಂಭಿಸಲು ಮುಂದಾಗಿದೆ ಇದನ್ನ ನಾವು ಸ್ವಾಗತಿಸುತ್ತೇವೆ..ಆದ್ರೆ ಶಾಲೆ ಪ್ರಾರಂಭದ ದಿನಾಂಕವನ್ನು ವಿಸ್ತರಣೆ ಮಾಡಬಾರದು ಅಂತ ಖಾಸಗಿ ಶಾಲೆಗಳ ಒಕ್ಕೂಟದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಬೇಸಿಗೆ ರಜೆ ವಿಸ್ತರಣೆ ಇಲ್ಲ, ನಿಗದಿಯಂತೆ ಶಾಲೆಗಳು ಆರಂಭ, ವಿದ್ಯಾರ್ಥಿಗಳ ಕಲಿಕೆಗೆ ವಿವಿಧ ಕಾರ್ಯಕ್ರಮ
ಷಡಕ್ಷರಿ ಪತ್ರಕ್ಕೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತೀವ್ರ ಆಕ್ರೋಶ
ಷಡಕ್ಷರಿಯವರು ತಮ್ಮ ಸರ್ಕಾರಿ ಹುದ್ದೆಯನ್ನ ಬಳಸಿಕೊಂಡು ಮಕ್ಕಳ ಹಿತಾಸಕ್ತಿ ಬಲಿಕೊಡೋದು ಸರಿಯಲ್ಲ.ಕಳೆದ ಎರಡು ವರ್ಷ ಶಾಲೆ ಮುಚ್ವಿದ ಕಾರಣ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಕೊಡಲು ಸಾಧ್ಯವಾಗಿಲ್ಲ. ಆದ್ರೆ ಷಡಕ್ಷರಿ ಅವರು ಸರ್ಕಾರಿ ನೌಕರರ ಸಂಘದ ಮಾದರಿ ಅಧ್ಯಕ್ಷ ರಾಗಿರಬೇಕು.ಅದನ್ನ ಬಿಟ್ಟು ಸಂಘದ ಹೆಸರಿನಲ್ಲಿ ಕಚೇರಿಗೆ ಹೋಗದೇ ಕೆಲಸ ಮಾಡದೇ ನಮಗೆ ನೈತಿಕ ಪಾಠ ಮಾಡಲು ಅವರ ದಿವಾಳಿತನವನ್ನ ಎತ್ತಿ ತೋರಿಸತ್ತದೆ.ಆಲ್ಲದೆ ತಮ್ಮ ಐಷಾರಾಮಿ ಕಾರುಗಳಲ್ಲಿ ಕೆಲಸ ಮಾಡದ ಸರ್ಕಾರಿ ನೌಕರರನ್ನ ಹಿಂದೆ ಕೂರಿಸಿಕೊಂಡು ಓಡಾಡುವುದೇ ಇವರ ದೊಡ್ಡ ಕೆಲಸ..ಇನ್ನಾದ್ರು ಮಕ್ಕಳ ಶೈಕ್ಷಣಿಕ ಬದುಕಿನ ಕುರಿತು ವ್ಯತಿರಿಕ್ತ ಹೇಳಿಕೆ ಕೊಡದಿರಲಿ
ಅಂತ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂಗೆ ಪತ್ರ ಬರೆದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ
ಷಡಕ್ಷರಿ ಅವರ ಹೇಳಿಕೆಗಳನ್ನ ಪರಿಗಣಿಸದಿರುವಂತೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸಿಎಂಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಶಾಲೆ ಪ್ರಾರಂಭದ ದಿನಾಂಕವನ್ನ ವಿಸ್ತರಣೆ ಮಾಡದೇ ಮೇ 16 ರಿಂದ ಶಾಲೆ ಪ್ರಾರಂಭಿಸುವಂತೆ ಅವರು ಮನವಿ ಮಾಡಿದ್ದಾರೆ.
ಸನ್ಸ್ಟ್ರೋಕ್ ಶಾಕ್ಗೆ ರಾಜ್ಯದ ಜನ ಕಂಗಾಲಾಗಿದ್ದು, ಶಾಲೆ ರಜೆ ವಿಸ್ತರಣೆಗೆ ಬಸವರಾಜ್ ಹೊರಟ್ಟಿ ಮನವಿ ಮಾಡಿದ್ದಾರೆ.
ಇನ್ನೇನು ಬೇಸಿಗೆ ರಜೆ ಮುಗಿಯಲು ಹೆಚ್ಚು ದಿನಗಳು ಬಾಕಿಯಿಲ್ಲ. ಇದೇ ಸಂದರ್ಭದಲ್ಲಿ ಬೇಸಿಗೆಯ ತಾಮಪಾನವೂ ಕಡಿಮೆಯಾಗಿಲ್ಲ. ಮೇ 16ರಿಂದಲೇ ಮಕ್ಕಳು ಶಾಲೆಗೆ ತೆರಳಲು ಆರಂಭಿಸಿದರೆ ಮಕ್ಕಳಿಗೆ ತೀವ್ರ ಬಿಸಿಲಿನಿಂದ ಆರೋಗ್ಯ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಎದುರಾಗಿದೆ. ಹೀಗಾಗಿ ಬೇಸಿಗೆ ರಜೆಯನ್ನು ಇನ್ನಷ್ಟು ದಿನಗಳವರೆಗೆ ವಿಸ್ತರಣೆ ಮಾಡುವಂತೆ ಮನವಿ ಕೇಳಿಬಂದಿದೆ. ಆದ್ರೆ, ಸಚಿವ ನಾಗೇಶ್ ಅವರು ನಿಗದಿಯಂತೆ ಶಾಲೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್‍ನಿಂದಾಗಿ ಕಳೆದ ಎರಡೂವರೆ ವರ್ಷಗಳಿಂದ ಶಾಲೆಗಳಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿಲ್ಲ. ವಿದ್ಯಾರ್ಥಿಗಳು ಸಹ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಹೀಗಾಗಿ ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೀಗಾಗಿ ಅಂದಿನಿಂದಲೇ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಎರಡು ಶೈಕ್ಷಣಿಕ ವರ್ಷ ವಿದ್ಯಾರ್ಥಿಗಳ ಕೌಶಲ್ಯವನ್ನೇ ಕಸಿದುಕೊಂಡಿದೆ. ಇದರಿಂದಾಗಿ ಕಲಿಕಾ ಚೇತರಿಕೆಯ ಕಾರ್ಯಕ್ರಮದ ಮಹತ್ವವನ್ನು ಪೋಷಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಯ ಕೊಠಡಿಗಳಿಗೆ ಬರುವಂತೆ ಮಾಡುವುದು ಹಾಗೂ ಮಕ್ಕಳ ಕಲಿಕೆಯ ನ್ಯೂನ್ಯತೆಯನ್ನು ಪತ್ತೆ ಮಾಡಿ ಉತ್ತಮ ಶಿಕ್ಷಣ ನೀಡಬೇಕಾಗಿದೆ. ಹೀಗಾಗಿ ಮೇ 16ರಿಂದ ಶಾಲೆಗಳು ಪ್ರಾರಂಭವಾಗಲಿದೆ.
ಮಕ್ಕಳ ಕಲಿಕಾ ಹಂತವನ್ನು ಸರಿದೂಗಿಸಲು, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಪ್ರಕ್ರಿಯೆ ಸುಗಮವಾಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮ ಉಪಯೋಗಕಾರಿಯಾಗಲಿದೆ ಎಂಬುದು ಶಿಕ್ಷಣ ಇಲಾಖೆಯ ಅಭಿಪ್ರಾಯವಾಗಿದೆ.