ಶಾಲೆಯಲ್ಲಿ ಕೊಳೆತ ತರಕಾರಿ ಬಳಸಿ ಬಿಸಿಯೂಟ ತಯಾರಿಕೆ ಹಿನ್ನೆಲೆ ತಾಲೂಕಿನ ಹೊಳಲೂರಿನ ಸರ್ಕಾರಿ ಮಾದರಿ ಶಾಲೆ ಮುಖ್ಯಶಿಕ್ಷಕಿ ವೀರಮ್ಮ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಷೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಹೊಳೆಹೊನ್ನೂರು (ಆ.3) : ಶಾಲೆಯಲ್ಲಿ ಕೊಳೆತ ತರಕಾರಿ ಬಳಸಿ ಬಿಸಿಯೂಟ ತಯಾರಿಕೆ ಹಿನ್ನೆಲೆ ತಾಲೂಕಿನ ಹೊಳಲೂರಿನ ಸರ್ಕಾರಿ ಮಾದರಿ ಶಾಲೆ ಮುಖ್ಯಶಿಕ್ಷಕಿ ವೀರಮ್ಮ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಷೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಕೊಳೆತ ತರಕಾರಿ ಬಳಸಿ ಬಿಸಿಯೂಟ ತಯಾರಿಸಿದ್ದ ಆರೋಪಕ್ಕೆ ಸಂಬಂಧಿಸಿ ಬಿಇಒ ನಾಗರಾಜ್ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ವೇಳೆ ಗ್ರಾಮಸ್ಥರು ದಾಖಲೆ ಸಮೇತ ಮುಖ್ಯಶಿಕ್ಷಕಿ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಿದರು.
ಶಿಗ್ಗಾಂವಿ: ಬಿಸಿಯೂಟ ಸೇವಿಸಿ 37 ವಿದ್ಯಾರ್ಥಿಗಳು ಅಸ್ವಸ್ಥ
ಮುಖ್ಯಶಿಕ್ಷಕಿಯನ್ನು ಅಧಿಕಾರಿಗಳ ಎದುರೇ ತಿರ್ವವಾಗಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಮುಖ್ಯಶಿಕ್ಷಕಿ ವೀರಪ್ಪ ಸೇವೆ ಹೊಳಲೂರಿಗೆ ಬೇಡ ಎಂದು ಆಕ್ರೋಶ ಹೊರಹಾಕಿದರು. ಶಾಲೆಯಲ್ಲಿ ದುಬರ್ಳಕೆ ಆಗಿರುವ ಸ್ವತ್ತಿನ ಮೌಲ್ಯವನ್ನು ಮುಖ್ಯಶಿಕ್ಷಕಿಯಿಂದಲೇ ವಸೂಲಿ ಮಾಡಲಾಗುವುದು. ಶಿಕ್ಷಕಿಯನ್ನು ಅಮಾನತು ಮಾಡಲು ಮೇಲಧಿಕಾರಿಗಳಿಗೆ ನಿರ್ದೇಶನ ನೀಡುವ ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಸ್ಥಳದಿಂದ ತೆರಳಿದರು.
ಮುಖ್ಯಶಿಕ್ಷಕಿ ವೀರಮ್ಮನಿಗೆ 10 ದಿನ ಕಡ್ಡಾಯ ರಜೆ ಮೇಲೆ ಕಳಿಸಲಾಯಿತು. ಹೊಳಲೂರು ಗ್ರಾಪಂ ಅಧ್ಯಕ್ಷ ಸುರೇಶ್, ತಾಲೂಕು ಸಹಾಯಕ ನಿರ್ದೇಶಕ ದಾದಾಪೀರ್ ಜಿಲ್ಲಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅನ್ಸರ್ ಆಲಿ ಬೇಗ್, ಸಿಆರ್‌ಪಿ ಹನುಮಂತಪ್ಪ, ಪಿಎಸ್‌ಐ ಶ್ರೀಶೈಲ ಸೇರಿದಂತೆ ಇನ್ನಿತರಿದ್ದರು.
150 ವರ್ಷ ಹಳೆಯ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಮಾಜಿ ಶಾಸಕ