Textbook controversy ಪಿಯುಸಿ ಪಠ್ಯ ಪರಿಷ್ಕರಣಾ ಸಮಿತಿಗೂ ರೋಹಿತ್ ಚಕ್ರತೀರ್ಥ ಅಧ್ಯಕ್ಷ

By Suvarna News  |  First Published May 23, 2022, 5:55 PM IST

ಪದವಿಪೂರ್ವ ಶಿಕ್ಷಣ ಇಲಾಖೆ ಇತಿಹಾಸ ಪುಸ್ತಕ ಪರಿಷ್ಕರಣೆಗೂ ಮುಂದಾಗಿದ್ದು, ಆ ಸಮಿತಿಗೂ ರೋಹಿತ್ ಚಕ್ರತೀರ್ಥ  ಅವರನ್ನೇ ಅಧ್ಯಕ್ಷನ್ನಾಗಿ ಮಾಡಲಾಗಿದೆ.


ಬೆಂಗಳೂರು (ಮೇ.23): ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಗಳು ತಣ್ಣಗಾಗುವ ಮೊದಲೇ ಪದವಿಪೂರ್ವ ಶಿಕ್ಷಣ ಇಲಾಖೆ ಇತಿಹಾಸ ಪುಸ್ತಕ ಪರಿಷ್ಕರಣೆಗೂ ಮುಂದಾಗಿದ್ದು, ಆ ಸಮಿತಿಗೂ ರೋಹಿತ್ ಚಕ್ರತೀರ್ಥ (Rohith Chakrathirtha) ಅವರನ್ನೇ ಅಧ್ಯಕ್ಷನ್ನಾಗಿ ಮಾಡಿದೆ. 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್  (BC Nagesh)  ಅವರು ಕಳೆದ ಫೆಬ್ರವರಿ 17ರಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ದ್ವಿತೀಯ ಪಿಯುಸಿ ಇತಿಹಾಸ ವಿಭಾಗದ ಪಠ್ಯಪುಸ್ತಕಕ್ಕೆ ಸಂಬಂಧಿಸಿ ಭಾರತ ಇತಿಹಾಸ (ಕರ್ನಾಟಕ ವಿಶೇಷ ಉಲ್ಲೇಖಗಳೊಂದಿಗೆ) ಪಠ್ಯ ಪುಸ್ತಕದ 42ನೇ ಅಧ್ಯಾಯ ಹೊಸ ಧರ್ಮಗಳ ಉದಯ ಪಠ್ಯ ಭಾಗದಲ್ಲಿ ನಿರ್ದಿಷ್ಠ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹಃ ವಿಷಯ ಇರುವ ದೂರುಗಳು ಬಂದಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

Tap to resize

Latest Videos

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ 6ರಿಂದ 10ನೇ ತರಗತಿವರೆಗೆ ಸಮಾಜ ವಿಜ್ಞಾನ, 1ರಿಂದ 10ನೇ ತರಗತಿವರೆಗಿನ ಕನ್ನಡ ಭಾಷಾ ಪಠ್ಯಕ್ರಮದ ಪರಿಷ್ಕರಣೆಯನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಬದಲಾವಣೆ ಮಾಡಿತ್ತು. ಇದೀಗ  ದ್ವಿತೀಯ ಪಿಯುಸಿಯ ಇತಿಹಾಸ ಪಠ್ಯಕ್ರಮದ 42ನೇ ಅಧ್ಯಾಯವನ್ನು ಪರಿಶೀಲಿಸಿ ಸೂಕ್ತ ಪರಿಷ್ಕರಣೆ ಮಾಡುವಂತೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನೇ (Text Book Revision Committee ) ನೇಮಿಸಲಾಗಿದೆ. ಶಿಕ್ಷಣ ಸಚಿವ ನಾಗೇಶ್ ಅವರು 2022-23ನೇ ಸಾಲಿನ ಪರಿಷ್ಕರಣೆ ಮಾಡಿದ ಪಠ್ಯಕ್ರಮದ ಮುದ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಮಿತಿಗೆ ಇದೇ ಮೇ.15 ರಂದು ಶಿಫಾರಸ್ಸು ಮಾಡಿದ್ದಾರೆ.

KARNATAKA TEXTBOOK CONTROVERSY ಕುವೆಂಪುಗೆ ಅವಮಾನ ಆರೋಪಕ್ಕೆ ಸಚಿವ ನಾಗೇಶ್ ಗರಂ

ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಈ ನಡುವಲ್ಲೇ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ವಿರೋಧ ಪಕ್ಷಗಳ ನಾಯಕರು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದು, ಬಿಜೆಪಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ.

 

ನಾಡಗೀತೆಯನ್ನು ಅವಹೇಳನ‌ ಮಾಡಿದ, ರಾಷ್ಟ್ರಕವಿಯನ್ನು
ಗೇಲಿ ಮಾಡಿದ
ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ ಸರ್ಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಮೊದಲು ಈತನನ್ನು ಕಿತ್ತುಹಾಕಬೇಕು. pic.twitter.com/RLGLIOhTLm

— Siddaramaiah (@siddaramaiah)

ಇನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್​​ ಚಕ್ರತೀರ್ಥ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ  ಕಿಡಿ ಕಾರಿದ್ದು, ಚಕ್ರತೀರ್ಥ ನೇಮಿಸಿದ ಬಿಜೆಪಿಗೆ ಮಾನ ಮರ್ಯಾದೆ ಇಲ್ಲ ಎಂದು ಟ್ವೀಟ್  ಮಾಡಿದ್ದಾರೆ.

ಆರ್‌ಎಸ್‌ಎಸ್‌ ಕಾರ್ಯಕರ್ತ ಪಠ್ಯಪುಸ್ತಕ ತಯಾರಿ ಅಧ್ಯಕ್ಷರಾಗಿರೋದು ದುರಂತ

2017ರಲ್ಲಿ ಚಕ್ರತೀರ್ಥ ಮಾಡಿದ್ದರು ಎನ್ನಲಾದ ಟ್ವೀಟ್ ಉಲ್ಲೇಖಿಸಿ ಪೋಟೋವೊಂದನ್ನು ಹಾಕಿ " ನಾಡಗೀತೆಯನ್ನು ಅವಹೇಳನ‌ ಮಾಡಿದ, ರಾಷ್ಟ್ರಕವಿಯನ್ನು ಗೇಲಿ ಮಾಡಿದ ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಮೊದಲು ಈತನನ್ನು ಕಿತ್ತುಹಾಕಬೇಕು.   ಎಂದು ಟ್ವಿಟ್ಟರ್ ನಲ್ಲಿ ಆಗ್ರಹಿಸಿದ್ದಾರೆ.

 

ಅರ್ಥಪೂರ್ಣ ವಿರೋಧದ ನಡುವೆಯೂ ಮತ್ತೆ ಈತನನ್ನೇ ಪಿಯುಸಿ ಪಠ್ಯ ಪುಸ್ತಕ ಸಮಿತಿಗೆ ಶಿಫಾರಸ್ಸು ಮಾಡಿರುವ ಶಿಕ್ಷಣ ಸಚಿವರಿಂದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕೂಡಲೇ ರಾಜೀನಾಮೆ ಪಡೆದು ಸಮಾಜದ ಪರವಾದ ಕಾಳಜಿ ಉಳ್ಳ ಮತ್ತು ಜ್ಞಾನವಂತರಾದ ಶಿಕ್ಷಣ ತಜ್ಞರನ್ನು ಸಮಿತಿಗೆ ನೇಮಕ ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ

2/2

— Dr H.C.Mahadevappa (@CMahadevappa)

ಇನ್ನು ಇದೇ ಫೋಟೋವನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನ ಹಿರಿಯ ನಾಯಕ ಹೆಚ್‌ಸಿ ಮಹದೇವಪ್ಪ "ಕುವೆಂಪು ನಾಡಗೀತೆಯನ್ನು ಈ ಮಟ್ಟಿಗೆ ಅವಮಾನಿಸುವ, ಧರ್ಮಾಂಧರು ಮಕ್ಕಳು ಏನನ್ನು ಓದಬೇಕು ಎಂಬ ಸಂಗತಿಯನ್ನು ನಿರ್ಧರಿಸುವುದು ಅಪಾಯಕಾರಿ ವಿದ್ಯಮಾನವಾಗಿದೆ. ಈ ನಾಡಿನ ನಾಡಗೀತೆಯನ್ನೇ ಅವಮಾನಿಸಿದವರಿಗೆ ಸರ್ಕಾರ ಮನ್ನಣೆ ನೀಡುತ್ತಿರುವ ಉದ್ದೇಶವಾದರೂ ಏನು? ಎಂದಿದ್ದಾರೆ ಜೊತೆಗೆ ಬಿಸಿ ನಾಗೇಶ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

click me!