ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು, ಎಂದು ಪಠ್ಯಪುಸ್ತಕ ಸಮೇತ ಸ್ಪಷ್ಟನೆ ನೀಡಿದ ಬಿಸಿ ನಾಗೇಶ್
ಬೆಂಗಳೂರು (ಮೇ.23): ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವುದು ಮತ್ತು ಪಠ್ಯ ಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು (Kuvempu) ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಅರೋಪ ಮಾಡುತ್ತಿರುವವರ ವಿರುದ್ಧ ಗರಂ ಆಗಿದ್ದಾರೆ.
ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು, ಎಂದು ಪಠ್ಯಪುಸ್ತಕ ಸಮೇತ ಬಂದು ಸುದ್ದಿಗೋಷ್ಠಿ ನಡೆಸಿದರು. ಇವತ್ತು ಕುವೆಂಪು ಬಗ್ಗೆ ಅವಹೇಳನ ಮಾಡಿದ್ದಾರೆ ಅಂತಿದ್ದಾರೆ. ಅನೇಕ ಪಠ್ಯಗಳನ್ನ ಕೈಬಿಟ್ಟಿದ್ದಾರೆ, ಆಗ ಮಾತಾಡದವ್ರು ಈಗ ಧ್ವನಿ ಎತ್ತುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಇರುವುವಾಗಲೇ ಇತಿಹಾಸ ಪುಸ್ತಕದಲ್ಲಿ ಓವರ್ ಬರ್ಡನ್ ಆಗ್ತಿದೆ ಅಂತ ಶಿಕ್ಷಕರು ಹೇಳ್ತಿದ್ದರು. ಹತ್ತನೇ ತರಗತಿಯ ನಾರಾಯಣ ಗುರು ಅವ್ರ ಪಠ್ಯ ಇದೆ ಅದನ್ನ ಎಲ್ಲೂ ತೆಗೆದಿಲ್ಲ. ಸುಳ್ಳು ಪ್ರಚಾರ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ರಾಜಕೀಯ ನಾಯಕರೆಲ್ಲ, ಹಿರಿಯರು ಟೀಟ್ವ್ ಮಾಡ್ತಾರೆ. ಸುಳ್ಳುನ್ನ ನೂರು ಸರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕಳೆದ ವರ್ಷ ಶಾಲೆಗಳು ಆರಂಭವಾಗಲ್ಲ ಅಂದರು. ಒಂದಷ್ಟು ಜನ ಮಕ್ಕಳಿಗೆ ರಿಸ್ಕ್ ಮಾಡ್ತಿದ್ದಾರೆ. ಬಡ ಮಕ್ಕಳ ಪ್ರಾಣಕ್ಕೆ ಅಪಾಯ ತರ್ತಿದ್ದಾರೆ ಅಂದರು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸರ್ಕಾರ ರಿಸ್ಕ್ ತಗೊಂಡಿದ್ದು ಕೆಲವರಿಗೆ ಸಹಿಸಕೊಳ್ಳಲು ಆಗ್ತಿಲ್ಲ. ಹಿಜಾಬ್ ಪ್ರಕರಣ ತಗೊಂಡು, ವೋಟ್ ಬ್ಯಾಂಕ್ ರಾಜಕೀಯ ಮಾಡಿದರು. ಆದರಲ್ಲೂ ಸೋತು ಮುಖಭಂಗ ಆಯ್ತು. ಇದೀಗ ಬೊಮ್ಮಯಿ ಸರ್ಕಾರ ಶಿಕ್ಷಣಕ್ಕೆ ಒತ್ತು ಕೊಟ್ಟಿರೋದು ಗಮನಿಸಿದ್ದಾರೆ ಎಂದರು.
ರಾಜ್ಯದಲ್ಲಿ ಶೀಘ್ರವೇ ಡಿಸೈನ್ ನೀತಿ, ಬಿಟಿಎಸ್ ಜತೆಯಲ್ಲೇ ಬೆಂಗಳೂರು ಡಿಸೈನ್ ಫೆಸ್ಟಿವಲ್ ಆಯೋಜನೆ
ಶಿಕ್ಷಕರ ನೇಮಕಾತಿ ಮಾಡಿದ್ದು, 27,000 ಅತಿಥಿ ಶಿಕ್ಷಕರ ನೇಮಕ, 7,000 ಹೊಸ ಕಟ್ಟಡ ನೀಡ್ತಿವಿ ಅಂದಾಗ ಅವ್ರಿಗೆ ತಡೆಯಲು ಆಗಲಿಲ್ಲ. ದೇಶದಲ್ಲಿ ಮಕ್ಕಳ ಅಭ್ಯಾಸದಲ್ಲಿ ತೊಂದರೆ ಆಗಿದೆ ಅಂದಾಗ, ಕಲಿಕಾ ಚೇತರಿಕೆ ತಂದೆವು. ಅದಕ್ಕೂ ಕೊಂಕು ಮಾತು ಆಡಿದರು. ಈಗ ಎಸ್ಎಸ್ಎಲ್ ಸಿ ವ್ಯಾಲುವೇಷನ್, ಪಿಯುಸಿ ಎಕ್ಸಾಂ ಎಲ್ಲಾ ಸುಸೂತ್ರವಾಗಿ ನಡೆದಿರುವುದು ಸಹಿಸಲು ಆಗ್ತಿಲ್ಲ. ಸುಳ್ಳು ಹೇಳುವ ಕೆಲಸ ಶುರು ಮಾಡಿದ್ದಾರೆ. ಪಠ್ಯಪುಸ್ತಕದ ಕಮಿಟಿ ರಿಪೋರ್ಟ್ ಬರುವ ಮುನ್ನವೇ ಟಿಪ್ಪು ಪಠ್ಯ, ಭಗತ್ ಸಿಂಗ್ ಪಾಠ ಬಿಟ್ಟಿದ್ದಾರೆ ಎಂದು ಪ್ರಚಾರ ಹಬ್ಬಿಸಿದರು ಎಂದು ಕಿಡಿ ಕಾರಿದರು.
ಟಿಪ್ಪು ಪಠ್ಯ ಕೈಬಿಟ್ಟ ವಿಚಾರ: ಬ್ರಿಟಿಷ್ ವಿರುದ್ಧ ಹೋರಾಡಿದವನು ಟಿಪ್ಪು ಒಬ್ಬರೆನಾ? ಬೇರೆ ಯಾರು ಇಲ್ವಾ? ಪೆರಿಯಾರ್ ಬಗ್ಗೆ ಒಂದಷ್ಟು ಲೈನ್ ತೆಗೆದಿದ್ದೀವೆ. ರಾಮ ವೈದಿಕ ಸಂಸ್ಕೃತಿಯನ್ನು ಪ್ರತಿನಿಧಿದರೆ, ರಾವಣ ದ್ರಾವಿಡ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಅಂತ ಇತ್ತು. ಇಂತದ್ದನ್ನು ನಮ್ಮ ಮಕ್ಕಳ ಕಲಿಯಬೇಕಾ..? ಕಾಂಗ್ರೆಸಿವ್ರಿಗೆ ಹಾಗೂ ಸೋ ಕಾಲ್ಡ್ ಬುದ್ದಿಜೀವಿಗಳಿಗೆ ರಾಮ ಬೇಡ, ರಾವಣ ಬೇಕು. ಮಕ್ಕಳಲ್ಲಿ ಜಾತಿ ವಿಷ ಬೀಜ ಬಿತ್ತುವ ಕೆಲಸ ಮಾಡ್ತಿದ್ದಾರೆ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
4 ವರ್ಷದಲ್ಲಿ ಕರ್ನಾಟಕದಲ್ಲಿ 7 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ: ಸಚಿವ ನಾಗೇಶ್
ಸುಳ್ಳನ್ನು ನೂರು ಸಾರಿ ಹೇಳಿ ಅದನ್ನ ಸರಿ ಮಾಡಲು ಹೊರಟಿದ್ದಾರೆ. ನಾರಾಯಣ ಗುರು ಪಠ್ಯ ಇತಿಹಾಸದಿಂದ ಕನ್ನಡ 10 ನೇ ತರಗತಿಗೆ ಸೇರಿಸಿದ್ದೇವೆ. ಅನೇಕ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದರು. ಸುಳ್ಳು ಹೇಳುವ ಕೆಲಸ ಮಾಡಿದರು. ರಾಜ್ ಗುರು, ಸುಖದೇವ್ ಬಗ್ಗೆ ಭಗತ್ ಸಿಂಗ್ ಜೊತೆ ಸೇರಿಸಲಾಗಿದೆ. ಭಗತ್ ಸಿಂಗ್ ಪಠ್ಯವೂ ತೆಗೆದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬರಗೂರು ಸಮಿತಿ ವಿರುದ್ಧ ಕಿಡಿಕಾರಿದ ಸಚಿವರು: ಇತಿಹಾಸದ ಬಗ್ಗೆ ಬರಗೂರು ಸಮಿತಿ ಪರಿಚಯ ಮಾಡಿಕೊಟ್ಟಿತ್ತು. ಇತಿಹಾಸದ ಪಿತಾಮಹ ಹೆರೋಡೇಟಸ್ ಅಂತ ಮುದ್ರಣ ಮಾಡಿತ್ತು. ಮ್ಯಾಕ್ಸ್ ಮುಲ್ಲರ್ ಬಗ್ಗೆ ಪ್ರಸ್ತಾಪ ಮಾಡಿತ್ತು. 6 ನೇ ತರಗತಿ ಮಕ್ಕಳಿಗೆ ಇವೆಲ್ಲವನ್ನೂ ಮುದ್ರಿಸಿತ್ತು. ಅಬಿ ಡೂಬೋಸ್ ಅನ್ನೋರ ಟಿಪ್ಪು ಪಠ್ಯ ಸೇರ್ಪಡೆ ಮಾಡಿದ್ರು. ವಿಕಿಪೀಡಿಯದಿಂದ ಮಾಹಿತಿ ಪಡೆದು ಹಾಕಿದ್ದಾರೆ. ಅದರಲ್ಲೂ ಟಿಪ್ಪು ಬಗ್ಗೆ ಹೇಳಿರೋದನ್ನ ಕೈ ಬಿಟ್ಟಿದ್ದಾರೆ. ಟಿಪ್ಪು ಮತಾಂತರ ಮಾಡಿದ್ದಾ ಅನ್ನೋ ವಿಷಯವನ್ನ ಬರಗೂರು ತೆಗೆದಿದ್ದರು. ಟಿಪ್ಪು ಬಗ್ಗೆ ವಿರೋಧವಾಗಿ ಇದ್ದ ಎಲ್ಲಾ ವಿಷಯ ಬರಗೂರು ಸಮಿತಿ ತೆಗೆದಿತ್ತು.
ಏನು ಇಲ್ಲದೆ ಹೋದಾಗ ಜಾತಿ ಅಡ್ಡ ತರುತ್ತಿದ್ದಾರೆ. ಟಿಪ್ಪು ಬಗ್ಗೆ ಬರೆದರೆ ಸಂಪೂರ್ಣವಾಗಿ ಬರೆಯಬೇಕು. ಇತಿಹಾಸವನ್ನ ಇವರಿಗೆ ಬೇಕಾದ ಹಾಗೆ ಹಾಕಿದ್ದಾರೆ. ಕರ್ನಾಟಕ ಆಳ್ವಿಕೆಯ ಪ್ರತಿರೋಧಗಳು. ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕರು, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ಬ್ರಿಟಿಷರ ವಿರುದ್ದ ಹೋರಾಡಿದರು. ಅವರ ಬಗ್ಗೆ ಯಾಕೆ ಪಠ್ಯದಲ್ಲಿ ಸೇರಿಸಿಲ್ಲ. ಯಾಕೆ ಇವ್ರೆಲ್ಲ ಹಿಂದೂ ಅಂತ ಸೇರಿಸಿಲ್ಲವಾ? ಬರಗೂರು ಸಮಿತಿ ಹಿಂದೂ ವಿರೋಧಿ ನೀತಿ ಪಠ್ಯದಲ್ಲಿ ಸೇರಿಸಿದ್ದರು. ಹಿಂದೂ ಮಹಾ ಸಾಗರ ಅನ್ನೋ ಪದವನ್ನ ಇಂಡಿಯನ್ ಓಷನ್ ಅಂತ ಸೇರಿಸಿದರು. ಹಿಂದೂ ಅನ್ನೋ ಪದ ಬರುತ್ತೆ ಅಂತ ಇಂಡಿಯನ್ ಓಷನ್ ಅಂತ ಬಳಕೆ ಮಾಡಿದರು ಎಂದು ಬರಗೂರು ಸಮಿತಿ ವಿರುದ್ಧ ಕಿಡಿ ಕಾರಿದ್ದಾರೆ.
ಇಷ್ಟು ಮಾತ್ರವಲ್ಲ ಬರಗೂರು ಸಮಿತಿ ಅಂಬೇಡ್ಕರ್, ಗಾಂಧೀಜಿ ಪಾಠ ತೆಗೆದು ಹಾಕಿದರು. ಆವಾಗ ಯಾರೋಬ್ಬರೂ ಇದನ್ನು ಪ್ರಶ್ನೆ ಮಾಡಲಿಲ್ಲ. ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನುಯ ಬರಗೂರು ಅವರ ಪಠ್ಯ ಪುಸ್ತಕ ಕಮಿಟಿ (Text Book Revision Committee) ಕೈ ಬಿಟ್ಟಿತ್ತು. ಅದನ್ನು ಈಗ ನಾವು ಸೇರಿಸಿದ್ದೇವೆ. ಬರಗೂರು ಅನೇಕ ಪಠ್ಯ ತೆಗೆದಿದ್ದರು. ನಾವು ಅವರ ರಾಜಕೀಯ ಮಾಡಲಿಲ್ಲ. ಅವರು ಚಿಲ್ಲರೆ ಬುದ್ದಿ ಕೆಲಸ ಮಾಡಿದ್ರು. ಏರುತಿಹುದು ಹಾರಿತ್ತಿರುವುದು ಬಾವುಟ ಅನ್ನೋ ಪಾಠ ತೆಗೆದು ಹಾಕಿದರು. ಇವರಿಗೆ ದೇಶದ ಬಾವುಟ ಹಾರಿಸಿದ್ರೆ ಕಷ್ಟ ಆಗುತ್ತೆ. ಹಾಗಾದ್ರೆ ಪಾಕಿಸ್ತಾನದ ಬಾವುಟ ಹಾರಬೇಕಾ? ಇದನ್ನು ನಮ್ಮ ಮಕ್ಕಳು ಕಲಿಯಬೇಕು.