'ಪಠ್ಯ ಪರಿಷ್ಕರಣೆ ವಿವಾದ, ಶಿಕ್ಷಣದ ಮೂಲಕ ಆರ್ ಎಸ್ ಎಸ್ ತನ್ನ ಅಜೆಂಡಾವನ್ನ ಬಿತ್ತರಿಸುತ್ತಿದೆ'

By Suvarna News  |  First Published May 23, 2022, 5:50 PM IST

* ಪ್ರಾಥಮಿಕ, ಪ್ರೌಢ ಶಾಲೆಯಗಳ ಪಠ್ಯಪುಸ್ತಕ ಪರಿಷ್ಕರಣೆ ವಿವಾದ
* ವಿವಿಧ ಸಂಘಟನೆಗಳಿಂದ ವಿರೋಧ
* ಶಿಕ್ಷಣದ ಮೂಲಕ ಆರ್ ಎಸ್ ಎಸ್ ತನ್ನ ಅಜೆಂಡಾವನ್ನ ಬಿತ್ತರಿಸುತ್ತಿದೆ


ಬೆಂಗಳೂರು, (ಮೇ.23): ಪ್ರಾಥಮಿಕ, ಪ್ರೌಢ ಶಾಲೆಯಗಳ ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಿಲುಕಿದೆ. ಪ್ರಮುಖವಾಗಿ CFI ಸೇರಿದಂತೆ ಹಲವು ಸಂಘಟನೆಗಳು ಶಾಲಾ ಪಠ್ಯ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೋಹಿತ್ ಚಕ್ರತೀರ್ಥ ಸಮಿತಿ ಹೊಸ ಪಠ್ಯ ಸೃಷ್ಟಿಸುತ್ತಿದೆ. ಪಠ್ಯವನ್ನ ಕೇಸರೀಕರಣ, ಬ್ರಾಹ್ಮಣೀಕರಣದ ಹುನ್ನಾರ ಮಾಡುತ್ತಿದೆ ಎಂದು ಕಿಡಿಕಾರಿವೆ..

ಇನ್ನು ಪಠ್ಯಪುಸ್ತಕ ಪರಿಷ್ಕರಣೆಗೆ (Text Book Revision Committee) ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು. ಕೇಸರಿ ಪಠ್ಯಕ್ರಮ ವಿರೋಧಿಸಿ ಇಂದು(ಸೋಮವಾರ) ರಾಜ್ಯ ಮಟ್ಟದ ಸಮಾಲೋಚನಾ ಸಭೆ ನಡೆಸಿದರು. ಶಿಕ್ಷಣ ತಜ್ಞ ಶ್ರೀಪಾದ್ ಭಟ್, ಸಾಹಿತಿ ಎಸ್. ಜಿ. ಸಿದ್ದರಾಮಯ್ಯ,  ಕೆ ಶರೀಫ್, ಸೇರಿದಂತೆ ಹಲವಾರು ಭಾಗಿಯಾಗಿದ್ದು. ಈಗ ಮಾಡಿರುವ ಪಠ್ಯ ಪರಿಷ್ಕರಣೆ ಸಂಪೂರ್ಣ ಆರ್ ಎಸ್ ಎಸ್ ನದ್ದಾಗಿದೆ. ಪಠ್ಯ ಪರಿಷ್ಕರಣೆಯ ಅವಶ್ಯಕತೆಯೇ ಇರಲಿಲ್ಲ. ಸರ್ಕಾರ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದೆ. ಪಠ್ಯ ಕ್ರಮವನ್ನ ಸಂಪೂರ್ಣ ಕೇಸರಿಮಯ ಮಾಡಲಾಗ್ತಿದೆ ಎಂಬ ಬಗ್ಗೆ ಚರ್ಚೆ ಮಾಡಿದರು.

Tap to resize

Latest Videos

ಆರ್‌ಎಸ್‌ಎಸ್‌ ಕಾರ್ಯಕರ್ತ ಪಠ್ಯಪುಸ್ತಕ ತಯಾರಿ ಅಧ್ಯಕ್ಷರಾಗಿರೋದು ದುರಂತ: ವಿಶ್ವನಾಥ್‌

ಎಸ್ ಜಿ ಸಿದ್ದರಾಮಯ್ಯ ಪ್ರತಿಕ್ರಿಯೆ
ನಮ್ಮದು ಬಹುತ್ವದ ಭಾರತ, ಇಲ್ಲಿ ಅಸಮಾನತೆ ಅಳಿಸಬೇಕು ಅಂತ ಎಷ್ಟೇ ಪ್ರಯತ್ನಪಟ್ಟರೂ  ಆಗುತ್ತಿಲ್ಲ.ಇವತ್ತಿನ ಎಲ್ಲಾ ಅನಾಹುತಗಳಿಗೆ ಈ ರೀತಿಯ ಶಿಕ್ಷಣ ಕಾರಣ. ಶಿಕ್ಷಣ ಅನ್ನೋದು ವಿವೇಕವನ್ನ ನೀಡುವಂತಾಗಬೇಕು, ಇದು ಶಿಕ್ಷಣದ ಉದ್ದೇಶ. ಆದ್ರೆ ಈಗ ಶಿಕ್ಷಣದ ಉದ್ದೇಶವನ್ನೇ ಬದಲಾವಣೆ ಮಾಡ್ತಾ ಇದ್ದಾರೆ. ಶಿಕ್ಷಣದ ಮೂಲಕ ಆರ್ ಎಸ್ ಎಸ್ ತನ್ನ ಅಜೆಂಡಾವನ್ನ ಬಿತ್ತರಿಸುತ್ತಿದೆ. ಎಲ್ಲವು ನಮ್ಮ ಕಂಟ್ರೋಲ್ ನಲ್ಲಿ ಇರಬೇಕು ಅಂತ ಆರ್ ಎಸ್ ಎಸ್ ಹೀಗೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ರೀತಿ ಪಠ್ಯ ಪರಿಷ್ಕರಣೆಗೆ ಕೈ ಹಾಕಿದೆ, ಇದರ ಹಿಂದಿನ ಉದ್ದೇಶವೇ ಇದಾಗಿದೆ. ಇತಿಹಾಸ, ಸಮಾಜ ಶಾಸ್ತ್ರ, ಸಾಹಿತ್ಯ ವಿಷಯದಲ್ಲಿ ಮಕ್ಕಳ ತಲೆ ಕೆಡಿಸೋಕೆ ಈ ರೀತಿ ಮಾಡಿದ್ದಾರೆ. ದೇಶ ಭಕ್ತಿ ಹೆಸರಿನಲ್ಲಿ ರಾಜಕೀಯ ಮಾಡಲಾಗ್ತಿದೆ. ಹೆಡಗೆವಾರ್ ಪಾಠ ಓದಿದ್ರೆ ನಾಳೆ ನಮ್ಮ ಮಕ್ಕಳೆಲ್ಲ ಆರ್ ಎಸ್ ಎಸ್ ಬೈಟೆಕ್ ಗೆ ಹೋಗಿ ಕುರ್ತಾರೆ. ನಮ್ಮ ಮಕ್ಕಳು ಹೋಗಲ್ಲ ಅಂತ ಅಂದ್ರೂ ಆರ್ ಎಸ್ ಎಸ್ ನವರು ಕರೆಸಿಕೊಳ್ತಾರೆ. ಎಲ್ಲಾ ಭಾಗದಲ್ಲಿಯು ಅವರ ವಕ್ತಾರರು ಇದ್ದಾರೆ ಎಂದರು.

ಸಾಹಿತ್ಯ ಕ್ಷೇತ್ರದ ಪರಿಣಿತರನ್ನ ಆಯ್ಕೆ ಮಾಡಿ ಸಮಿತಿ ರಚಿಸಿ ಪಠ್ಯ ಪರಿಷ್ಕರಣೆ ಮಾಡಬೇಕಿತ್ತು. ಈ ಪಠ್ಯ ಪರಿಷ್ಕರಣ ಸಮಿತಿಯಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ. ಈ ಸಮಿತಿ ಅಕ್ರಮದ, ಅನೈತಿಕವಾದ ಸಮಿತಿ. ಈ ಸಮಿತಿ ಸಂವಿಧಾನಕ್ಕೆ ಮರ್ಯಾದೆ ಕೊಡುವ ಸಮಿತಿ ಅಲ್ಲ ಎಂದು ಹೇಳಿದರು.

ಶಿಕ್ಷಣ ತಜ್ಞ ಅಲ್ಲದಂತ, ಪಠ್ಯಪುಸ್ತಕರ ರಚನೆಯ ಗಂಧ ಗಾಳಿಗೊತ್ತಿಲ್ಲದಂತ ಒಬ್ಬ ಟ್ರೋಲರ್‌  ರೋಹಿತ್ ಚಕ್ರತೀರ್ಥನನ್ನು ಪಠ್ಯಪುಸ್ತಕರ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದರ ಬಗ್ಗೆ ಅನೇಕ ಸಂಘಟನೆಗಳು, ಪ್ರಗತಿಪರರು, ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು  ತೀವ್ರ ವಿರೋಧ  ವ್ಯಕ್ತಪಡಿಸಿದ್ದಾರೆ. 

ಜೊತೆಗೆ ಪರಿಷ್ಕರಣೆ ಪಠ್ಯಗಳಲ್ಲಿನ ಒಂದೊಂದೇ ತಪ್ಪುಗಳನ್ನು ದಿನಕ್ಕೊಂದು ಹೊರಬರುತ್ತಿದ್ದು RejectBrahminTextBooks #RejectRSSTextBooks ಎಂಬ ಹ್ಯಾಶ್ ಟ್ಯಾಗ್ ನಡಿ ನಾಡಿನ ಜನತೆ ಸ್ವಯಂ ಪ್ರೇರಿತವಾಗಿ ಟ್ವೀಟರ್  ಅಭಿಯಾನ ನಡೆಸಿದ್ದು, 25 ಸಾವಿರಕ್ಕು ಹೆಚ್ಚು ಟ್ವೀಟ್‌‌ ಮತ್ತು ರಿ ಟ್ವೀಟ್‌ ಆಗಿದ್ದು, ದೇಶದಲ್ಲಿಯೇ ಮೊದಲ ಟ್ರೆಂಡ್‌ ಕ್ರಿಯೇಟ್‌ ಆಗಿದೆ.

ಸಿಎಫ್ಐ ಸಂಘಟನೆಯ ರಾಜ್ಯಾಧ್ಯಕ್ಷರ ಮಾತು
ಈ ಬಗ್ಗೆ ಸಿಎಫ್ಐ ಸಂಘಟನೆಯ ರಾಜ್ಯಾಧ್ಯಕ್ಷ ಅತಾವುಲ್ಲಾ ಗುಂಜಲಕಟ್ಟಿ ಪ್ರತಿಕ್ರಿಯಿಸಿದ್ದು, ಬಿಜೆಪಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಆರಾಜಾಕತೆ ಸೃಷ್ಟಿಸುತ್ತಿದ್ದು, ದೇಶದ್ರೋಹಿ ಸಂಘಟನೆ ಆರೆಎಸ್‌ಎಸ್‌ ಸಂಸ್ಥಾಪಕನ ಬಗ್ಗೆ ಪಠ್ಯದಲ್ಲಿ ಅಳವಡಿಸಲಾಗಿದೆ. ಹೆಡಗೇವಾರ್​ ಬಗ್ಗೆ ಪಠ್ಯ ಅಳವಡಿಸೋ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಪ್ರಶ್ನೆ
ಹೆಡಗೇವಾರ್ ಆದರ್ಶ ಪುರುಷ ಆಗೋಕೆ ಸಾಧ್ಯ ಇಲ್ಲ. ಚಕ್ರವರ್ತಿ ಸೂಲಿಬೆಲೆಯ ಪಾಠ ಯಾಕೆ ಬೇಕಿತ್ತು ? ಸರ್ಕಾರ ಈ ಪಠ್ಯಪರಿಷ್ಕರಣೆಯನ್ನ ಪುರಸ್ಕರಿಸಬಾರದು. ಹೊಸ ಪಠ್ಯ ಜಾರಿಗೆ ತಂದ್ರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಶಿಕ್ಷಣ ಸಚಿವರು ಹಿಂದುತ್ವದ ಅಮಲಿನಲ್ಲಿದ್ದಾರೆ. ಹಿಂದುತ್ವದ ಅಮಲಿನಲ್ಲಿ ಪಠ್ಯ ಪರಿಷ್ಕರಣೆ ಮಾಡಿದ್ದಾರೆ ಇದು ಸಂವಿಧಾನ ವಿರೋಧಿ ಪಠ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಡ್ಗೆವಾರ್ ಮಾತ್ರ ಹಿಂದೂನಾ, ಬಸವರಾಜ್ ಬೊಮ್ಮಾಯಿ ಮಾತ್ರ ಹಿಂದೂನಾ..? ನಾನು ಹಿಂದೂನೇ.  ನಾನು ಎಲ್ಲಾ ಧರ್ಮವನ್ನ ಪ್ರೀತಿ ಮಾಡಲ್ವಾ ಎಂದು ವಿರೊಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ತುಮಕೂರಿನಲ್ಲಿ ಇಂದು(ಸೋಮವಾರ) ಅಲ್ಪಸಂಖ್ಯಾತರ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ  ಸಿದ್ದರಾಮಯ್ಯ, ಗೋ ಹತ್ಯೆ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಿ. ಗೋ ಮಾಂಸವನ್ನ ತಿನ್ನುವರು ಕೇವಲ ಮುಸ್ಲಿಂರಲ್ಲ‌.

ಹಿಂದೂಗಳು ಗೋ ಮಾಂಸವನ್ನ ತಿಂತಾರೆ, ಕಿಶ್ಚಿಯನ್ ಸಹ ತಿಂತಾರೆ. ಇದರ ಬಗ್ಗೆ ವಿಧಾನಸೌಧದಲ್ಲಿ ಪ್ರಶ್ನೆ ಮಾಡ್ದೆ. ಹಾಗಾದ್ರೆ ನೀನು ಗೋ ಮಾಂಸ ತಿಂತಿಯಾ ಅಂತ ನನಗೆ ಪ್ರಶ್ನೆ ಮಾಡಿದ್ರು. ಹೌದು ನಾನು ಇದುವರೆಗೂ ತಿಂದಿಲ್ಲ. ತಿನ್ನಬೇಕು ಅಂದ್ರೆ ತಿಂತಿನಿ ನೀನು ಯಾವನೂ ಕೇಳೋಕೆ ಅಂತ ಉತ್ತರ ಕೊಟ್ಟೆ ಎಂದರು.

 

click me!