ಪರೀಕ್ಷೆಗೂ ಮೊದಲೇ ಬೆಂಗಳೂರು ನಗರ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಘಟನೆ ನಡೆದಿದೆ. ಕಾಲೇಜು ಆಡಳಿತ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿದೆ.
ಬೆಂಗಳೂರು (ಮಾ.1): ಪರೀಕ್ಷೆಗೂ ಮೊದಲೇ ಬೆಂಗಳೂರು ನಗರ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಘಟನೆ ನಡೆದಿದೆ. ಕಾಲೇಜು ಆಡಳಿತ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿದೆ. ಕಾಲೇಜು ಆಡಳಿತ ಮಂಡಳಿ ಒಂದು ವಾರದ ಮುಂಚಿತವಾಗಿಯೇ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿರೋ ಆರೋಪ ಕೇಳಿಬಂದಿದೆ. ಈ ಮೂಲಕ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಖಾಸಗಿ ಕಾಲೇಜು ಕಳ್ಳಾಟ ಆಡ್ತಿದೆ. ಇದರ ಜೊತೆಗೆ ಪ್ರತಿ ವಿಧ್ಯಾರ್ಥಿಗಳಿಂದ ಒಂದು ವರ್ಷಕ್ಕೆ 3 ಲಕ್ಷ ಹಣ ವಸೂಲಿ ಆರೋಪ ಕೂಡ ಕೇಳಿಬಂದಿದೆ. IDeA World Collegeನ ಫ್ಯಾಷನ್ ಡಿಸೈನ್ ಮತ್ತು ಇಂಟೀರಿಯರ್ ಪೇಪರ್ ನಲ್ಲಿ ಈ ಅಕ್ರಮ ನಡೆದಿದೆ. ನಗರದ ಕನ್ನಿಂಗ್ ಹ್ಯಾಮ್ ರಸ್ತೆ ಬಳಿ ಇರುವ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜು ಆಡಳಿತ ಮಂಡಳಿ ಶೇ.100% ಫಲಿತಾಂಶ ಗಳಿಸಲು ಅಡ್ಡದಾರಿ ಹಿಡಿದಿದೆ. ಹೀಗಾಗಿ ಪ್ರಾಯೋಗಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನ ವಿದ್ಯಾರ್ಥಿಗಳಿಗೆ ಕಾಲೇಜು ನೀಡಿದೆ.
ಮಾ.5 ರಂದು ಪ್ರತಿಭಾ ಶೋಧ ಪರೀಕ್ಷೆ:
ಮೈಸೂರು: ವಿಜಯರಂಗ ಚಾರಿಟಬಲ್ ಟ್ರಸ್ಟ್ ಲಲಿತಾದ್ರಿನಗರದಲ್ಲಿ ನಡೆಸುತ್ತಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಮಾ.5 ರಂದು ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಶೋಧ ಪರೀಕ್ಷೆ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎ. ಪೆರಿಯ ನಾಯಗಮ್ ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳ ವರ್ಗಾವಣೆ ಪ್ರಕ್ರಿಯೆ ಇನ್ನಷ್ಟು ಸರಳ
ಅಂದು ಬೆಳಗ್ಗೆ 10ಕ್ಕೆ ಪರೀಕ್ಷೆ ನಡೆಯಲಿದ್ದು, ಈ ವೇಳೆ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳ ಮೇಲೆ 50 ಬಹು ಆಯ್ಕೆ ಪ್ರಶ್ನೆ ಪತ್ರಿಕೆ ನೀಡಲಾಗುವುದು. ಇದು ಸುಮಾರು 1.30 ಗಂಟೆ ಅವಧಿಯದ್ದಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೊದಲ ಮೂರು ಸ್ಥಾನಗಳಿಗೆ . 50 ಸಾವಿರ, . 25 ಸಾವಿರ, . 10 ಸಾವಿರ, 4ನೇ ಬಹುಮಾನವಾಗಿ . 5 ಸಾವಿರ ಮತ್ತು 20 ಸಮಾಧಾನಕರ ಬಹುಮಾನ ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂ. 0821- 2950971, ಮೊ. 76765 81441 ಸಂಪರ್ಕಿಸಬಹುದು ಎಂದರು. ಟ್ರಸ್ಟ್ ಅಧ್ಯಕ್ಷ ಸಿದ್ದೇಗೌಡ, ಕಾರ್ಯದರ್ಶಿ ಗಿಣಿಸ್ವಾಮಿ ಇದ್ದರು.
ಅಪೇಕ್ಷೆಯಂತೆ ಕರ್ನಾಟಕಕ್ಕೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಂಜೂರು: