ಬೆಳಗಾವಿಯಲ್ಲಿ ಫೆ.27ರಂದು ನಡೆಯಬೇಕಿದ್ದ ಪ್ರಥಮ ಪಿಯುಸಿ ಪರೀಕ್ಷೆ ಮುಂದೂಡಿಕೆ

By Gowthami K  |  First Published Feb 26, 2023, 6:40 PM IST

ಬೆಳಗಾವಿಯಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ, ಸಮಾವೇಶ ಹಿನ್ನೆಲೆ ನಾಳೆ ನಡೆಯಬೇಕಿದ್ದ ಪ್ರಥಮ ಪಿಯುಸಿ ಪರೀಕ್ಷೆ ಮುಂದೂಡಲಾಗಿದೆ‌. ಬೆಳಗಾವಿ ಜಿಲ್ಲೆಯ 19 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬೇಕಿತ್ತು.


ಬೆಳಗಾವಿ (ಫೆ.26): ಬೆಳಗಾವಿಯಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ, ಸಮಾವೇಶ ಹಿನ್ನೆಲೆ ನಾಳೆ ನಡೆಯಬೇಕಿದ್ದ ಪ್ರಥಮ ಪಿಯುಸಿ ಪರೀಕ್ಷೆ ಮುಂದೂಡಲಾಗಿದೆ‌. ಬೆಳಗಾವಿ ಜಿಲ್ಲೆಯ 19 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬೇಕಿತ್ತು. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಎಲ್ಲ ಶಾಲೆ– ಕಾಲೇಜುಗಳ ಪ್ರಾಂಶುಪಾಲರಿಗೆ ಫೆ.24ರಂದು ಸುತ್ತೋಲೆ ಹೊರಡಿಸಿದ್ದು ಮುಂದೂಡಿದ ಪರೀಕ್ಷೆಗಳನ್ನು ಮಾರ್ಚ್‌ 6ರಂದು ನಡೆಸಲು ತೀರ್ಮಾನಿಸಲಾಗಿದೆ. ಪ್ರಧಾನಿ ಮೋದಿ ಆಗಮನ ಹಿನ್ನಲೆ ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ‌ ಕೆಲವಡೆ ನಿರ್ಬಂಧ ಹಿನ್ನೆಲೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅನಾನುಕೂಲ ಆಗಬಹುದೆಂಬ ಕಾರಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.

ಸಂಚಾರ ಬದಲಾವಣೆ: ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಫೆ.27ರಂದು ಬೆಳಗ್ಗೆ 11 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯದವರೆಗೆ ನಗರದಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

Latest Videos

undefined

ಧಾರವಾಡ ಕಿತ್ತೂರು, ಬೈಲಹೊಂಗಲ, ಸವದತ್ತಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲ ವಾಹನಗಳು ಅಲಾರವಾಡ ಅಂಡರ್‌ ಬ್ರಿಡ್ಜ್‌ ಪಕ್ಕದಲ್ಲಿರುವ ವೋಕ್ಸ್‌ವ್ಯಾಗನ್‌ ಶೋ ರೂಂ ಹತ್ತಿರ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಬೇಕು. ಧಾರವಾಡ, ಕಿತ್ತೂರು, ಸವದತ್ತಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್‌ಗಳು ಸುವರ್ಣವಿಧಾನಸೌಧ ಓಪಿ ಪಕ್ಕದ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಬೇಕು. ಅಂದು ಎಲ್ಲ ಭಾರಿ ವಾಹನಗಳು ಎಲ್ಲ ದಿಕ್ಕುಗಳಿಂದ ಬೆಳಗಾವಿ ನಗರ ಪ್ರವೇಶಿಸುವುದನ್ನು ಹಾಗೂ ನಗರದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.

ಬಾಗಲಕೋಟೆ, ಗೋಕಾಕ, ನಿಪ್ಪಾಣಿ, ಕಾಕತಿ ಕಡೆಯಿಂದ ಬರುವ ವಾಹನಗಳು ಯುವರಾಜ ಧಾಬಾ ಮತ್ತು ವಿಆರ್‌ಎಲ್‌ ವರ್ಕ್ಶಾಪ್‌ ಹತ್ತಿರ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಬೇಕು. ಬಾಗಲಕೋಟೆ, ಗೋಕಾಕ, ನಿಪ್ಪಾಣಿ ಕಾಕತಿ ಕಡೆಯಿಂದ ಬರುವ ಬಸ್‌ಗಳು ತಾರಿಹಾಳ ಕ್ರಾಸ್‌ ಮುಖಾಂತರ ಹೋಗಿ ಪೊಲೀಸ್‌ ಟೌನ್‌ಶಿಪ್‌ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಬೇಕು. ಖಾನಾಪುರ, ಅನಗೋಳ, ಪೀರನವಾಡಿ ಕಡೆಯಿಂದ ಬರುವ ವಾಹನಗಳು ಶಹಾಪುರ ಕಲ್ಮೇಶ್ವರ ಮಂದಿರದ ಮಾರ್ಗವಾಗಿ ಕೆರೆಯ ಪಕ್ಕದ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಬೇಕು ಎಂದು ಪೊಲೀಸ್‌ ಆಯುಕ್ತ ಬೋರಲಿಂಗಯ್ಯ ತಿಳಿಸಿದ್ದಾರೆ.

PM MODI VISIT BELAGAVI: ಮೋದಿ ಸ್ವಾಗತಿಸಲು ಸಜ್ಜಾದ ಕುಂದಾನಗರಿ, 10.7ಕಿಮೀ ಅದ್ಧೂರಿ ರೋಡ್ ಶೋ!

ನಾಳೆ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ಹಲವು ವಿಶೇಷತೆಗಳಿಂದ ಕೂಡಿದೆ. ‌ನಾಳೆಯ ಪ್ರಧಾನಿ ರೋಡ್ ಶೋ ಐತಿಹಾಸಿಕ ಮಾಡಲು ಬಿಜೆಪಿ ಸಿದ್ಧತೆ ಮಾಡಿದ್ದು ರೋಡ್ ಶೋ ಮಾರ್ಗದಲ್ಲಿ ಲೈವ್ ಶೋ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯಿಸಿದ ಶಾಸಕ ಅಭಯ್ ಪಾಟೀಲ್, '10.7ಕಿಮೀ ಮಾರ್ಗದ ರಸ್ತೆಯ ಎರಡು ಬದಿಗಳಲ್ಲಿ 90 ಪಾಯಿಂಟ್ಸ್ ಗುರುತಿಸಿ ಲೈವ್ ಶೋ ಮಾಡಲಿದ್ದು ದೇಶದ 29 ರಾಜ್ಯ 8 ಕೇಂದ್ರಾಡಳಿತ ಪ್ರದೇಶಗಳ ವೇಷಭೂಷಣ ಧರಿಸಿ ಪ್ರಧಾನಿ ಮೋದಿ ನೀಡಿದ ಕೊಡುಗೆ ಬಗ್ಗೆ ತಿಳಿಸಲಾಗುವುದು‌. ರೋಡ್ ಶೋ ಬೆಳಗಾವಿ ದಕ್ಷಿಣ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ 10 ಸಾವಿರ ಮಹಿಳೆಯರು  ಕೇಸರಿ ಪೇಟ ತೊಟ್ಟು, ಪೂರ್ಣಕುಂಭ ಹೊತ್ತು ಪ್ರಧಾನಿ‌‌‌ ಮೋದಿ ಸ್ವಾಗತಿಸಲಿದ್ದಾರೆ‌.

3 ಕ್ಷೇತ್ರಗಳ ಟಿಕೆಟ್‌ಗೆ ಅರ್ಜಿ ಸಲ್ಲಿಕೆ: ಕೆಪಿಸಿಸಿ ಸೂಚಿಸಿದಲ್ಲಿ ಸ್ಪರ್ಧಿಸುತ್ತೇನೆಂದ ಶಾಸಕ ಶಿವಾನಂದ ಪಾಟೀಲ

ನಾಳೆ ಪ್ರಧಾನಿ ಮೋದಿಗೆ ಉಡುಗೊರೆ ಕೊಡಲು ಅವಕಾಶ ಕಲ್ಪಿಸಲು ಬೆಳಗಾವಿ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ವಿವಿಧ ಯೋಜನೆಗಳ ಸುಮಾರು 75 ಸಾವಿರ ಫಲಾನುಭವಿಗಳು ಬೆಳಗಾವಿಗೆ ಆಗಮಿಸಲು ಪ್ರತಿ ಗ್ರಾಮ ಪಂಚಾಯತಿಗೆ ಒಂದು ಬಸ್ ಸೇರಿ ಒಟ್ಟು 1000ಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು ವಾಹನಗಳ ಪಾರ್ಕಿಂಗ್‌ಗೆ 50 ಎಕರೆ ಜಾಗದಲ್ಲಿ ಮೂರು ಕಡೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಊಟದ ವ್ಯವಸ್ಥೆ ಸಹ ಮಾಡಲಾಗಿದೆ.

click me!