* 1 ರಿಂದ 10ನೇ ತರಗತಿವರೆಗಿನ 50 ಮಕ್ಕಳಿಗೆ ಮಕ್ಕಳಿಗೆ ಉಚಿತ ಶಿಕ್ಷಣ
* ಉಚಿತ ಶಿಕ್ಷಣ ನೀಡಲು ಮುಂದಾದ ಇನ್ನೊವೇಟಿವ್ ಇಂಟರ್‌ನ್ಯಾಶನಲ್ ಸ್ಕೂಲ್
* ಇತರರಿಗೆ ಮಾದರಿಯಾಗುವಂತಹ ಕೆಲಸ ಮಾಡಿದ ಖಾಸಗಿ ಶಾಲೆ
ಕಲಬುರಗಿ(ಮೇ.21): ಕೊರೋನಾ ವೈರಸ್ ಪಿಡುಗು, ಲಾಕ್‌ಡೌನ್ ಬಳಿಕ ಸಣ್ಣ ಪುಟ್ಟ ಖಾಸಗಿ ಶಾಲೆಗಳ ಒಂದು ಅವಸ್ಥೆಯಾದರೆ, ದೊಡ್ಡ ದೊಡ್ಡ ಶಾಲೆಗಳ ಕಥೆ ಇನ್ನೊಂದು.
ಬಹುತೇಕ ಶಾಲೆಗಳು ವಿದ್ಯಾರ್ಥಿಗಳನ್ನು ಈಗಲೂ ಫೀಸ್‌ಗಾಗಿ ಪೀಡಿಸುತ್ತಿವೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಟಿ.ಸಿ. ಕೊಡಿ ಅಂದ್ರೂ ಮೊದಲು ಫೀಸ್ ಕಟ್ಟಿ ಅನ್ನುತ್ತಿವೆ ಶಾಲೆಗಳು. ಇವುಗಳ ನಡುವೆ ಕಲಬುರಗಿಯ ಖಾಸಗಿ ಶಾಲೆಯೊಂದು ಇತರರಿಗೆ ಮಾದರಿಯಾಗುವಂತಹ ಕೆಲಸವೊಂದನ್ನ ಮಾಡಿದೆ.
undefined
ಹೌದು, ಕೊರೋನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಕಲಬುರಗಿಯ ಇನ್ನೊವೇಟಿವ್ ಇಂಟರ್‌ನ್ಯಾಶನಲ್ ಸ್ಕೂಲ್ ಮುಂದಾಗಿದೆ. ಕೊರೋನಾವೈರಸ್ ಸೋಂಕಿನಿಂದ ಕುಟುಂಬದ ದುಡಿಯುವ ಸದಸ್ಯರು ಮೃತಪಟ್ಟಿದ್ದರೆ, ಆ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಶಾಲೆಯ ಮುಖ್ಯಸ್ಥ ಜಮೀರ್ ಅಹಮದ್ ಸ್ಪಷ್ಟಪಡಿಸಿದ್ದಾರೆ.
ಕೊರೋನಾದಿಂದ ಅನಾಥರಾದ ಮಕ್ಕಳಿಗೆ ಚುಂಚನಗಿರಿ ಮಠ ಶಿಕ್ಷಣ
ಕೊರೋನಾ ಕಾರಣದಿಂದ ತಂದೆ, ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ, 1 ನೇ ತರಗತಿಯಿಂದ 10ನೇ ತರಗತಿವರೆಗಿನ 50 ಮಕ್ಕಳಿಗೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಸಂಸ್ಥೆಯು ನಿರ್ಧರಿಸಿದೆ. ಅಂತಹ ಮಕ್ಕಳನ್ನು ಗುರುತಿಸಿ ದಾಖಲಿಸುವ ಹೊಣೆಯನ್ನು ಶಾಲಾ ಮಂಡಳಿಯು ಗುಲ್ಬರ್ಗಾ ಎನ್‌ಜಿಓ ಫೆಡರೇಷನ್‌ಗೆ ವಹಿಸಿದೆ. ದಾಖಲಾತಿಗೆ ಜೂನ್ 15 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಎನ್‌ಜಿಓ ಫೆಡರೇಶನ್‌ನ ರಿಯಾಜ್ ಖತೀಬ್ 8792443034, ಅಜೀಮ್ ಶೇಕ್ 9036396949 ಅವರನ್ನು ಸಂಪರ್ಕಿಸಬಹುದಾಗಿದೆ.
ಕೊರೋನಾ ವೈರಸ್ ಸೋಂಕಿನಿಂದ ಕುಟುಂಬದ ದುಡಿಯುವ ಸದಸ್ಯರು ಮೃತಪಟ್ಟಿದ್ದರೆ, ಆ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಶಾಲೆಯ ಮುಖ್ಯಸ್ಥ ಜಮೀರ್ ಅಹಮದ್ ತಿಳಿಸಿದ್ದಾರೆ.