ಯುಕೆಜಿ ಮಗುವನ್ನು ಶಿಕ್ಷಕರು ಫೇಲ್‌ ಮಾಡಿಲ್ಲ: ಶಾಲೆಯಲ್ಲಿ ಬಳಸುತ್ತಿರುವ ಆ್ಯಪ್ ಮಾಡಿದ ಕಿತಾಪತಿ

By Sathish Kumar KHFirst Published Feb 9, 2023, 4:04 PM IST
Highlights

ಖಾಸಗಿ ಶಾಲೆಯಲ್ಲಿ ಯುಕೆಜಿ ಮಗುವನ್ನು ಫೇಲ್‌ ಮಾಡಿದ ಆರೋಪ.
ಸಾಮಾಜಿಕ ಜಾಲತಾಣದಲ್ಲಿ ಪೋಷಕರಿಂದ ಶಾಲೆಯ ಮೇಲೆ ಕಿಡಿ.
ಪೋಷಕರ ಟ್ವೀಟ್ ಅನ್ನು ರಿ-ಟ್ವೇಟ್ ಮಾಡಿದ ಮಾಜಿ ಶಿಕ್ಷಣ ಸಚಿವರು.

ವರದಿ : ಟಿ.ಮಂಜುನಾಥ, ಹೆಬ್ಬಗೋಡಿ ಏಷ್ಯಾನೆಟ್‌ ಸುವರ್ಣ ನ್ಯೂಸ್ 

ಆನೇಕಲ್ (ಫೆ.09): ಆಟವಾಡುವ ವಯಸ್ಸಿನಲ್ಲೇ ಶಾಲೆಗೆ ಕಲಿಯುವ ಆಸಕ್ತಿ ಕೂಡ ಹೊಂದಿರುವುದಿಲ್ಲದ ಪುಟಾಣಿಗಳು,  ಜೊತೇಗೆ ಮಕ್ಕಳಲ್ಲಿ ಆಸಕ್ತಿಯಿದ್ದು ಬೆಳೆವ ಸಿರಿ ಮೊಳಕೆಯಲ್ಲಿ ಎಂಬ ಮಾತಿದೆ ಆದ್ರೆ ಇಂತಹ ಒಂದು ಗಾದೆ ಮಾತನ್ನು ಈ ಒಂದು ಶಾಲೆ ಕೇಳೆ ಇಲ್ಲ ಅಂತ ಎನಿಸುತ್ತದೆ ಯಾಕೆಂದರೆ ಯುಕೆಜಿ ವಿದ್ಯಾರ್ಥಿನಿಯನ್ನೇ ಅನುತ್ತೀರ್ಣ (ಫೇಲ್‌) ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದು ಶಾಲೆಯ ಆಡಳಿತ ಮಂಡಳಿಗೆ ಶಿಕ್ಷಣ ಇಲಾಖೆ, ನೋಟಿಸ್ ಜಾರಿ ಮಾಡಿದೆ.

ಮಕ್ಕಳ ಬಗ್ಗೆ ಅಪಾರ ಕನಸುಗಳನ್ನ ಕಟ್ಟಿಕೊಂಡಿರುವ ತಂದೆ-ತಾಯಿಗೆ ಯುಕೆಜಿಯಲ್ಲೇ ಪೇಲ್ ಹಾಕಿದ್ರೇ ಹೇಗಾಗಬೇಡ. ಮನೋಜ್ ಬಾದಲ್ ಎನ್ನುವವರು ಟ್ವಿಟರ್ ನಲ್ಲಿ ತನ್ನ ಮಗಳನ್ನು ಯುಕೆಜಿಯಲ್ಲಿ ಅನುತ್ತೀರ್ಣ (Fail) ಮಾಡಿದ್ದಾರೆ ಎಂದು ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ಸೆಂಟ್ ಜೋಸೆಫ್ ಶಾಮಿನೇಡ್ ಅಕಾಡೆಮಿಯಲ್ಲಿ ಯುಕೆಜಿ ಓದುತ್ತಿದ್ದ ವಿದ್ಯಾರ್ಥಿನಿ ನಂದಿನಿಯನ್ನು ಅನುತ್ತೀರ್ಣ (Fail) ಮಾಡಿದ್ದಾರೆ ಎನ್ನುವ ಟ್ವೀಟ್ ಎಲ್ಲೆಡೆ ಹರಿದಾಡುತ್ತಿತ್ತು.

Bengaluru: ಕ್ರಿಕೆಟಿಗ ಧೋನಿ ಶಾಲೆ ಸೇರಿ 500+ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್‌

ರಿ-ಟ್ವೀಟ್‌ ಮಾಡಿದ ಮಾಜಿ ಸಚಿವ: ಇಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಅವರ ಟ್ವೀಟ್‌ ಅನ್ನು ತಾವು ಮರು ಟ್ವೀಟ್‌ ಮಾಡಿಕೊಂಡು ಇಂತಹ ಘನಂದಾರಿ ಕೆಲಸ ಮಾಡಿದ ಶಾಲೆಗೆ ನಾನೊಮ್ಮೆ ಭೇಟಿ ನೀಡಲೇಬೇಕು ಎಂದು ಬರೆದುಕೊಂಡಿದ್ದರು. ಪೋಷಕರು ಮಾಡಿದ ಆರೋಪವನ್ನು ಟ್ವೀಟ್ ಮೂಲಕ ಮಹಾಕೃತ್ಯ ಎಂದು ಬಿಂಬಿಸಿರುವ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ-ಹೃದಯ ಮೊದಲೇ ಇಲ್ಲ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ಮಾಜಿ ಸಚಿವರು ಆಕ್ರೋಶ ಹೊರ ಹಾಕುತ್ತಿದ್ದಂತೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದೆ. ಇದನ್ನು ಪರಿಶೀಲಿಸಿ ಯುಕೆಜಿ ಮಗುವನ್ನು ಫೇಲ್‌ ಮಾಡಿರುವ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಶಾಲೆಗೆ ಆನೇಕಲ್ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ನೋಟಿಸ್ ಜಾರಿ ಮಾಡಿದ್ದಾರೆ.

ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ:  ಶಿಕ್ಷಣ ಇಲಾಖೆಯಿಂದ ನೋಟಿಸ್ ಜಾರಿ ಮಾಡುತ್ತಿದ್ದಂತೆ ಎಚ್ಚೆತ್ತ ಶಾಲೆಯ ಆಡಳಿತ ಮಂಡಳಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಬೇಸಿಗೆ ಸಂಬಂಧ ಶಾಲೆಯಲ್ಲಿ ಪರೀಕ್ಷೆಯನ್ನು ಮಾಡಲಾಗಿತ್ತು. ಈ ಒಂದು ಪರೀಕ್ಷೆಯಲ್ಲಿ ರೈಮ್ಸ್ ವಿಭಾಗದಲ್ಲಿ 40ಕ್ಕೆ ಕೇವಲ ೫ ಅಂಕವನ್ನು ಮಗು ಪಡೆದಿದ್ದು ಮುಂದಿನ ಭವಿಷ್ಯದ ಕಾರಣಕ್ಕೆ ಸಿ ಗ್ರೇಡ್ ನೀಡಲಾಗಿತ್ತು. ಪೋಷಕರಿಗೆ ನೀಡಿದ ಮಾರ್ಕ್ಸ್ ಕಾರ್ಡ್ ನಲ್ಲಿ ಎಲ್ಲಿಯೂ ಕೂಡ ಶಾಲೆಯ ಆಡಳಿತ ಮಂಡಳಿ ಮಗು ಫೇಲ್‌ ಆಗಿದೆ ಎಂದು ನಮೂದು ಮಾಡಿಲ್ಲ. 

ಮಗುವಿನ ಪೋಷಕರಿಗೆ ಇ-ಮೇಲ್‌ ಮೂಲಕ ಮಾಹಿತಿ:  ಮಗುವಿನ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಮಾಹಿತಿ ಆಧರಿಸಿ ಶಾಲೆಯಿಂದ ಇ-ಮೇಲ್‌ ಕಳುಹಿಸಿದ್ದು ಇದಕ್ಕೆ ಪೋಷಕರು ಹೊರ ರಾಜ್ಯದಲ್ಲಿರುವುದಾಗಿ ಉತ್ತರಿಸಿದ್ದಾರೆ. ಶಾಲೆಯ ಪೋಷಕರ ಜೊತೆ ಸಂಪರ್ಕದಲ್ಲಿರುವ ಸಲುವಾಗಿ ಆ್ಯಪ್ ಮೂಲಕ ಸಂಪರ್ಕದಲ್ಲಿ ಇರಲಾಗಿತ್ತು. ಆದರೆ ಈ ಶಾಲೆಯ ಪ್ರತ್ಯೇಕ ಆ್ಯಪ್‌ನಲ್ಲಿ 35% ಕೆಳಗೆ ಇರುವುದನ್ನು ಫೇಲ್‌ ಎಂದು ತೋರಿಸಿದ್ದು ಈ ಕುರಿತು ಶಾಲೆಯಿಂದಲೂ ಕಂಪನಿಗೆ ಪತ್ರವನ್ನು ಬರೆಯಲಾಗಿದೆ. ಆ್ಯಪ್ ಮಾಡಿದ ಎಡವಟ್ಟಿನಿಂದಾಗಿ ಈ ಸಮಸ್ಯೆ ಎದುರಾಗಿದ್ದು ಇನ್ನು ಮುಂದೆ ಇಂತಹ ಪ್ರಮಾದ ಆಗದಂತೆ ನೋಡಿಕೊಳ್ಳಲಾಗುವುದು ಸಮಸ್ಯೆ ಆಗಿರುವುದಕ್ಕೆ ಶಾಲೆಯ ಪ್ರಾಂಶುಪಾಲ‌ ಸಾಜ ಕ್ಷಮೆ ಕೇಳಿದ್ದಾರೆ.

Dharwad: ಶಾಲೆಯಿಂದ ಹೊರಗುಳಿದ 688 ಮಕ್ಕಳು!

ಒಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ ಮಾಡಿದ ಎಡವಟ್ಟಿನಿಂದ ಫೇಲ್‌ ಹಾಗೂ ಪಾಸ್ ಎಂದರೆ ಏನೆಂದು ತಿಳಿಯದ ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುವ ಹಿನ್ನೆಲೆ ಇನ್ನಾದರೂ ಇಂತಹ ಘಟನೆಗಳು ಆಗುವ ಮುನ್ನ ಶಾಲೆಯ ಆಡಳಿತ ಮಂಡಳಿಗಳು ಎಚ್ಚೆತ್ತುಕೊಳ್ಳಬೇಕಿದೆ.

click me!