ಪಿಎಂ ಯಂಗ್ ಅಚೀವರ್ಸ್ ವಿದ್ಯಾರ್ಥಿ ವೇತನಕ್ಕೆ ಆಹ್ವಾನ

By Suvarna News  |  First Published Aug 2, 2022, 3:51 PM IST

*ಪಿಎಂ ಯಂಗ್ ಅಚೀವರ್ಸ್  ವಿದ್ಯಾರ್ಥಿ ವೇತನಕ್ಕೆ ಎನ್‌ಟಿಎ ಪರೀಕ್ಷೆ ನಡೆಸುತ್ತದೆ
*ಈ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಜುಲೈ 27ರಿಂದ ಆರಂಭವಾಗಿದ್ದು, ಆ.26 ದಿನವಾಗಿದೆ.
*ಆಯ್ಕೆಯಾದ ವಿದ್ಯಾರ್ಥಿಗಳಿಗೆ 1,25,000 ರೂ.ವರೆಗೂ ವಿದ್ಯಾರ್ಥಿ ವೇತನ
 


ಪ್ರಧಾನ ಮಂತ್ರಿ ಯುವ ಸಾಧಕರ ವಿದ್ಯಾರ್ಥಿವೇತನ (ಯಶಸ್ವಿ ಸ್ಕೀಂ) ಪ್ರವೇಶ ಪರೀಕ್ಷೆಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)  ಅರ್ಜಿಗಳನ್ನು ಆಹ್ವಾನಿಸಿದೆ. ಎನ್ಡಿಎ, ಯಂಗ್ ಅಚೀವರ್ಸ್ ಸ್ಕಾಲರ್‌ಶಿಪ್ ಅವಾರ್ಡ್ ಸ್ಕೀಮ್ ಫಾರ್ ವೈಬ್ರೆಂಟ್ ಇಂಡಿಯಾ (Young Achievers Scholarship Award Scheme for Vibrant India -YASASVI) ಪ್ರಶಸ್ತಿ ಯೋಜನೆಗಾಗಿ ಶಾಲಾ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ವಿದ್ಯಾರ್ಥಿವೇತನಕ್ಕೆ YASASVI ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆಯನ್ನು ನಡೆಸಲಾಗುತ್ತದೆ. ಈಗಾಗಲೇ ಜುಲೈ 27ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಆಗಸ್ಟ್ 26ರ ರಾತ್ರಿ 11:50 ರವರೆಗೆ ಕಾಲಾವಕಾಶವಿದೆ.  ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸ್ಥಾಪಿಸಿದ YASASVI ವಿದ್ಯಾರ್ಥಿವೇತನ ಯೋಜನೆಯು  9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.  ಆರ್ಥಿಕವಾಗಿ ಹಿಂದುಳಿದ ವರ್ಗ (EBC) ಮತ್ತು ಡಿ-ನೋಟಿಫೈಡ್, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳು (DNT/SNT) ಹಾಗೂ ಇತರೆ ಹಿಂದುಳಿದ ವರ್ಗ (OBC)ಗಳ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಬಹುದು.  PM YASASVI ಸ್ಕಾಲರ್‌ಶಿಪ್ ಯೋಜನೆ ಪಡೆಯಲು ಆಸಕ್ತಿ ಹೊಂದಿರುವವರು ಅಧಿಕೃತ ವೆಬ್‌ಸೈಟ್ - yet.nta.ac.in ನಲ್ಲಿ ಅರ್ಜಿ ನಮೂನೆಯನ್ನು ಸಲ್ಲಿಸಬಹುದು. ಈ ಯೋಜನೆಯಡಿ OBC, DNT ಮತ್ತು EBC ವರ್ಗಗಳ ಸುಮಾರು 15,000 ಪ್ರತಿಭಾವಂತ ವಿದ್ಯಾರ್ಥಿಗಳು ವಾರ್ಷಿಕ 75,000 ರೂ.ನಿಂದ 1,25,000 ರೂ.ವರೆಗಿನ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ. 

ಪರೀಕ್ಷೆಯ ಯೋಜನೆ/ಸಿಲಬಸ್, ಅರ್ಹತೆ, ಗುರುತಿಸಲಾದ ಶಾಲೆಗಳ ಪಟ್ಟಿ, ಪರೀಕ್ಷೆಯ ನಗರಗಳು, ಪ್ರಮುಖ ದಿನಾಂಕಗಳು, ಇತ್ಯಾದಿ, ಪರೀಕ್ಷೆಗೆ ಸಂಬಂಧಿಸಿದಂತೆ https://yet.nta.ac.in ನಲ್ಲಿ  ಮಾಹಿತಿ ನೀಡಿರೋದಾಗಿ NTA ಹೇಳಿದೆ.

ಫಿಲ್ಮ್ ಮೇಕರ್ ಆಗುವುದು ಹೇಗೆ?
 
PM YASASVI ಸ್ಕಾಲರ್‌ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ (AID), ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ, ಆದಾಯ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರವನ್ನು ಹೊಂದಿರಬೇಕು.  ಹುಡುಗರು ಮತ್ತು ಹುಡುಗಿಯರು ಇಬ್ಬರೂ ಅರ್ಜಿ ಸಲ್ಲಿಸಲು ಅರ್ಹರಾಗಿತ್ತಾರೆ. ಅರ್ಜಿದಾರರು ಭಾರತೀಯ ಪ್ರಜೆಗಳಾಗಿರಬೇಕು.  OBC ಅಥವಾ EBC ಅಥವಾ DNT ವರ್ಗಕ್ಕೆ ಸೇರಿದವರಾಗಿರಬೇಕು. 2021-22 ರಲ್ಲಿ 8 ನೇ ತರಗತಿ ಅಥವಾ 10 ನೇ ತರಗತಿಗಳಲ್ಲಿ ಉತ್ತೀರ್ಣರಾಗಿರಬೇಕು. 9 ನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 01-04-2006 ರಿಂದ 31-03-2010 (ಎರಡೂ ದಿನಗಳನ್ನು ಒಳಗೊಂಡಂತೆ) ನಡುವೆ ಜನಿಸಿರಬೇಕು. 11 ನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 01-04-2004 ರಿಂದ 31-03-2008 (ಎರಡೂ ದಿನಗಳನ್ನು ಒಳಗೊಂಡಂತೆ) ನಡುವೆ ಜನಿಸಿರಬೇಕು. ಎಲ್ಲಾ ಮೂಲಗಳಿಂದ ಪೋಷಕರು/ಪೋಷಕರ ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಹೆಚ್ಚಿರಬಾರದು. 

Tap to resize

Latest Videos

ಹಿಂದು ಕಾಲೇಜ್‌ಗೆ 1 ಕೋಟಿ ರೂ. ನಿಧಿ ಸ್ಥಾಪಿಸಿದ ಹಳೆಯ ವಿದ್ಯಾರ್ಥಿ!

NTA PM YASASVI ಸ್ಕೀಮ್ ಅಪ್ಲಿಕೇಶನ್ ತಿದ್ದುಪಡಿ ವಿಂಡೋವನ್ನು 27 ರಿಂದ 31 ಆಗಸ್ಟ್ 2022 ರವರೆಗೆ ತೆರೆಯುತ್ತದೆ. ಅಲ್ಲದೆ, ಅರ್ಜಿ ನಮೂನೆಯನ್ನು ಯಶಸ್ವಿಯಾಗಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ಕಾರ್ಡ್ ನೀಡಲಾಗುತ್ತದೆ. PM YASASVI ಯೋಜನೆಯ ಪ್ರವೇಶ ಕಾರ್ಡ್ 5ನೇ ಸೆಪ್ಟೆಂಬರ್ 2022 ರಿಂದ ಲಭ್ಯವಿರುತ್ತದೆ. ಸೆಪ್ಟೆಂಬರ್ 11 ರಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ವಿಧಾನದಲ್ಲಿ YASASVI ಪ್ರವೇಶ ಪರೀಕ್ಷೆ ನಡೆಯಲಿದೆ. ಪರೀಕ್ಷೆಯು MCQ ಸ್ವರೂಪದಲ್ಲಿರುತ್ತದೆ.  ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಸಾಮಾನ್ಯ ವಿಜ್ಞಾನ - ಈನಾಲ್ಕು ವಿಷಯಗಳ ಮೇಲೆ 3 ಗಂಟೆಗಳ ಕಾಲ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟು 400 ಅಂಕಗಳನ್ನ ಹೊಂದಿದ್ದು, ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ. ಪ್ರವೇಶ ಪರೀಕ್ಷೆ ಬರೆಯಲು 8 ನೇ ತರಗತಿಯ NCERT ಪಠ್ಯಕ್ರಮ ಹಾಗೂ 10 ನೇ ತರಗತಿಯ ಪಠ್ಯಕ್ರಮವನ್ನು ಅಧ್ಯಯನ ಮಾಡಬೇಕಾಗುತ್ತದೆ.

click me!